ವರದಿ ರಾಣಿ
ದಲಿತರ, ಒಕ್ಕಲಿಗ ಮತ್ತು ಮಹಿಳೆಯರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಶಾಸಕ ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಎಸ್ ಸಿ, ಎಸ್ ಟಿ ಘಟಕ ವಿಭಾಗ ದಿಂದ ತಾಲ್ಲೂಕು ವಿಭಾಗಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮುನಿರತ್ನ ಮಾತನಾಡಿರುವ ಅಸಂವಿಧಾನಿಕ ಪದಗಳು ಬಿಜೆಪಿಯವರ ಮನಸ್ಥಿತಿಯ ಪ್ರತಿಬಿಂಬವಾಗಿದೆ ಶಾಸಕ ಮುನಿರತ್ನ ಅವರು ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿದ್ದುಕೊಂಡು ಮಹಿಳೆಯರ ಬಗ್ಗೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಒಕ್ಕಲಿಗರ ಬಗ್ಗೆ ಆವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವುದು ಸಮಾಜವೇ ತಲೆತಗ್ಗಿಸುವ ಹೀನ ಕೃತ್ಯವಾಗಿದೆ. . ದಲಿತರ ಹಾಗೂ ಮಹಿಳೆಯರ ಬಗ್ಗೆ ಬಿಜೆಪಿ ಹೊಂದಿರುವ ನಿಲುವು ಇದಾಗಿದೆ. ಶಾಸಕ ಮುನಿರತ್ನ ಶಾಸಕ ಸದಸ್ಯತ್ವ ರದ್ದುಮಾಡಬೇಕು, ಗಡಿಪಾರು ಮಾಡಬೇಕು, ಇಂತಹ ನೀಚರಿಂದ ಇಡೀ ರಾಜಕೀಯ ವ್ಯವಸ್ಥೆಗೆ ಕಳಂಕ ವಾಗಿದೆ. ಸಂವಿಧಾನಾತ್ಮಕ ಸ್ಥಾನ ಅಲಂಕರಿಸಿರುವ ಶಾಸಕ ಮುನಿರತ್ನ ಗುತ್ತಿಗೆದಾರರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಆತನಿಗೆ ಪ್ರಾಣ ಬೆದರಿಕೆ ಹಾಕಿರುವ ಮುನಿರತ್ನ ತನ್ನ ಸ್ಥಾನದಲ್ಲಿ ಮುಂದುವರೆಯಲು ಅನರ್ಹ . ವಿವಿಧ ಸಮುದಾಯಗಳ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಇವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಕಾನೂನುಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಎಸ್ ಸಿ, ಎಸ್ ಟಿ ಘಟಕ ವಿಭಾಗ ದಿಂದ ತಾಲ್ಲೂಕು ವಿಭಾಗಧಿಕಾರಿ ಕಛೇರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಎಸ್ ಸಿ ಎಸ್ ಟಿ ಯುವ ಮೋರ್ಚಾ ಅಧ್ಯಕ್ಷರಾಗಿರುವ ಶಾಸಕರು ಯಾವ ರೀತಿ ದಲಿತರ ಪರವಾಗಿ ಇದ್ದಾರೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು ಎಂದು ದೇವರಾಜ್ ಹಾಗೂ ಮುನಿರತ್ನ ಅವರು ತಪ್ಪು ಮಾಡಿದ್ದಲ್ಲಿ ರಾಜ್ಯಧ್ಯಕ್ಷರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳುವುದು ಎಷ್ಟು ಸರಿ ಎಂದು ಈ ಸಂದರ್ಭದಲ್ಲಿ ನೇರವಾಗಿ ಪ್ರಶ್ನಿಸಿದ್ದಾರೆ.
ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ವಿಜಕುಮಾರ್ ಮಾತನಾಡಿ ” ಶಾಸಕರಾದ ಮುನಿರತ್ನ ರವರು ಜಾತಿ ನಿಂದನೆ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ದೇಶದ ಬಗ್ಗೆ ಮಾತನಾಡುವ ಇವರು ಜಾತಿಯ ವ್ಯವಸ್ಥೆಯ ಮೂಲಕ ಜನರನ್ನು ಎತ್ತು ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಇವರನ್ನು ಶಾಸಕ ಸ್ಥಾನದಿಂದ ಕೂಡಲೆ ಕೆಳಗಿಳಿಸಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಬೇಕು.ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಅನ್ನಪೂರ್ಣ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಕೆ. ಪಿ ಕೃಷ್ಣೆಗೌಡ, ಕೆಡಿಪಿ ಸದಸ್ಯರಾದ ಕೋಮರೈಯ್ಯ ,ಗೊದ್ದು ಲೋಕೇಶ್, ಸಾಹಿರಾಬಾನು , ಮಹಮ್ಮದ್ ಅಚoಗಿ, ಬೈಕೆರೆದೇವರಾಜ್, ಪ್ರಶಾಂತ್, ದೇವರಾಜ್, ಚಂದ್ರಶೇಖರ್, ಪರ್ವತಯ್ಯಾ, ಅಣ್ಣಪ್ಪ, ಯೂತ್ ಕಾಂಗ್ರೆಸ್ ನ ದೊಡ್ಡಮನೆ ದೇವರಾಜ್,ಹಸೀನಾ, ಮಮತಾ, ಲಕ್ಷ್ಮಿ ಮುಂತಾದ ಕಾಂಗ್ರೆಸ್ ಸದಸ್ಯರು , ಮುಖಂಡರು ಉಪಸ್ಥಿತರಿದ್ದರು.
previous post
next post