ವರದಿ ರಾಣಿ ಪ್ರಸನ್ನ
ಉದೇವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಫಿ ಬೆಳೆಗಾರರ ಸಂಘ ಉದೇವಾರದಲ್ಲಿ ದಿನಾಂಕ 11.11.2024ರ ಸೋಮವಾರ ಬೆಳಗ್ಗೆ 11 ಗಂಟೆಗೆ ಸಂಘದ ಕಚೇರಿಯಲ್ಲಿ 7ನೇ ಮಾಸಿಕ ಸಭೆಯನ್ನು ಸಂಘದ ಅಧ್ಯಕ್ಷರಾದ ಯು.ಪಿ ರಮೇಶ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಕೆ.ಬಿ ಕೃಷ್ಣಪ್ಪ ರವರು ಸಭೆಗೆ ಆಗಮಿಸಿ ಕಾಫಿ ಬೆಳಗಾರರ ಸಂಘಗಳ ಹೋರಾಟದಿಂದ ಬೆಳೆಗಾರರಿಗೆ ಆಗುವ ಅನುಕೂಲತೆಗಳ ಬಗ್ಗೆ ಮತ್ತು ಒತ್ತುವರಿ ಭೂಮಿಯನ್ನು ಸಾಗುವಳಿ ಮಾಡಲು ಸರ್ಕಾರದಿಂದ ಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳುವ ಬಗ್ಗೆ ವಿವರಣೆ ನೀಡಿದರು ಹಾಗೂ ಬೆಳಗೋಡು ಹೋಬಳಿ ಕೃಷಿ ಇಲಾಖೆಯಿಂದ ಶ್ರೀಮತಿ ಅಭಿಲಾಷರವರು ಸಭೆಗೆ ಆಗಮಿಸಿ ಕೃಷಿ ಇಲಾಖೆಯಿಂದ ದೊರೆಯುವ ಸವಲತ್ತುಗಳು ಮತ್ತು ಕೃಷಿ ಸಾಮಗ್ರಿಗಳ ಬಗ್ಗೆ ವಿವರಣೆ ನೀಡಿದರು .
ಬೆಳೆಗಾರರು ಇಕೆವ್ಯಸಿ ಮಾಡಿಕೊಳ್ಳುವುದರ ಬಗ್ಗೆ ವಿವರಣೆ ನೀಡಿದರು. ಬೇಸಾಯ ಬೆಳೆಗಳ ತಜ್ಞರಾದ ಡಾ. ಪ್ರಮೋದ್ ಅಗ್ರಿಕಲ್ಚರ್ ಕಾಲೇಜ್ ಕಾರೆಕೆರೆ,ಹಾಸನ ಇವರು ಅಡಿಕೆ ಬೆಳೆಗಳ ಮಧ್ಯೆ ಅಂತರ ಬೆಳೆಯಾಗಿ ಮಲೆನಾಡು ಪ್ರದೇಶಕ್ಕೆ ಹೊಂದಿಕೊಳ್ಳುವ ಲಾಭದಾಯಕವಾದ ವಾರ್ಷಿಕ ಬೆಳೆಗಳಾದ ಕೋಕೋ, ಕಿತ್ತಳೆ, ಏಲಕ್ಕಿ, ಲವಂಗ ಅವಕಾಡೊ ಬೆಳೆಗಳನ್ನು ಬೆಳೆಯುವುದರಿಂದ ಪ್ರತಿ ಎರಡು ತಿಂಗಳಿಗೊಮ್ಮೆ ಐದು ವರ್ಷಗಳ ನಂತರ ಆದಾಯವನ್ನು ಪಡೆದುಕೊಳ್ಳಬಹುದು ಎಂದು ವಿವರಣೆ ನೀಡಿದರು. ಅಡಿಕೆ ಮತ್ತು ಕಾಳು ಮೆಣಸು ಬೆಳೆಗಳಿಗೆ ತಗಲುವ ರೋಗ ನಿರ್ವಹಣೆ ಬಗ್ಗೆ ವಿವರಣೆ ನೀಡಿದರು. ಹಾಗೂ ಕಾಫಿ ಮಂಡಳಿ ಸಕಲೇಶಪುರ ಎಸ್ ಎಲ್ ಓ ಬಸವರಾಜ್ ರವರು ಕಾಫಿ ಬೆಳೆಯ ಸಂಸ್ಕರಣೆ ಬಗ್ಗೆ ವಿವರಣೆ ನೀಡಿದರು.
ಎಸ್ ಎಸ್ ಎಲ್ ಸಿ ಯಲ್ಲಿ ಪಾಸಾದ ಮತ್ತು ಡಿಗ್ರಿ ವಿದ್ಯಾರ್ಥಿಗಳಿಗೆ ಕಾಫಿ ಬೋರ್ಡ್ ನಿಂದ ದೊರೆಯುವ ಪ್ರೋತ್ಸಾಹ ಧನದ ಬಗ್ಗೆ ವಿವರಣೆ ನೀಡಿದರು ಹಾಗೂ ಘನ ತ್ಯಾಜ್ಯ ವಸ್ತು ಗಳನ್ನು ಬಳಸುವುದನ್ನು ನಿಷೇಧ ಮಾಡುವುದರ ಬಗ್ಗೆ ವಿವರಣೆ ನೀಡಿದರು. ಸಂಘದ ಉಪಾಧ್ಯಕ್ಷರಾದ ಶ್ರೀಯುತ ಚರಣ್ ಅವರು ಸಭೆಯಲ್ಲಿ ಮಾತನಾಡುತ್ತಾ ಕಾಫಿ ಬೆಳೆಗಾರರು ಒಗ್ಗಟ್ಟಾಗಿ ಇದ್ದಾಗ ಮಾತ್ರ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಳ್ಳಬಹುದು ಬೆಳೆಗಾರರು ಸಂಘಕ್ಕೆ ಹೆಚ್ಚಿನ ಮಹತ್ವವನ್ನು ಕೊಡಬೇಕಾಗಿ ಕೇಳಿಕೊಂಡರು ಸಂಘದ ಅಧ್ಯಕ್ಷರಾದ ಯು.ಪಿ ರಮೇಶ್ ರವರು ಸಭೆಯಲ್ಲಿ ಮಾತನಾಡುತ್ತಾ ಶಿರಸಿಗೆ ಬೆಳಗಾರರು ಪ್ರವಾಸಕ್ಕೆ ಹೋಗಿ ಕಾಳು ಮೆಣಸು ಮತ್ತು ಅಡಿಕೆ ಬೆಳೆಗಳ ವೀಕ್ಷಣೆ ಬಗ್ಗೆ ವಿವರಣೆ ನೀಡಿದರು. ಎಲ್ಲ ಬೆಳೆಗಾರರು ಶಿರಸಿಯಲ್ಲಿ ಮಾಡಿದ ಮಾರ್ಗವನ್ನು ಅನುಸರಿಸಿದರೆ ನಾವು ಕೂಡ ಉತ್ತಮ ಬೆಳೆಯನ್ನು ಬೆಳೆಯಬಹುದು ಎಂದು ವಿವರಿಸಿದರು.