ಅಕ್ರಮ ವಲಸಿಗರು ಸಕಲೇಶಪುರದಾದ್ಯಂತ ಯಾವುದೇ ಪರವಾನಗಿ ಇಲ್ಲದೆ ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿದ್ದು ಕೂಡಲೇ ಇದಕ್ಕೆ ಕಡಿವಾಣ ಹಾಕಲು ಕೋರಿ ಇಂದು ಮಲೆನಾಡು ರಕ್ಷಣಾ ಸೇನೆಯು ಉಪ ವಿಭಾಗ ಅಧಿಕಾರಿಗಳಿಗೆ ಮನವಿ ಮಾಡಿದೆ.
ಸಕಲೇಶಪುರದಾದ್ಯಂತ ಅಕ್ರಮ ವಲಸಿಗರು ಸಂತೆ, ಮಾರುಕಟ್ಟೆ ಗಳಲ್ಲಿ ಯಾವುದೇ ಪರವಾನಗಿ ಪಡೆಯದೆ ತಮ್ಮ ಮನಸ್ಸೋ ಇಚ್ಛೆ ಎಲ್ಲೆಂದರಲ್ಲಿ ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿದ್ದು ಸ್ಥಳೀಯವಾಗಿ ಹಲವು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿರುವ ಸ್ಥಳೀಯ ವರ್ತಕರಿಗೆ ತೊಂದರೆ ಆಗಿದೆ.
ಈ ಅಕ್ರಮ ವಲಸಿಗರು ಎಲ್ಲೆಂದರಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಸ್ಥಳೀಯ ವರ್ತಕರ ವ್ಯಾಪಾರಕ್ಕೆ ತೊಂದರೆ ಆಗಿದ್ದು ಜೀವನಕ್ಕೆ ಸಂಕಷ್ಟ ಆಗಿರುತ್ತದೆ.
ವಾರಕ್ಕೊಮ್ಮೆ ನಡೆಯುವ ಸಂತೆಯಲ್ಲಿ ಕೂಡ ಈ ಅಕ್ರಮ ವಲಸಿಗರದ್ದೇ ಹಾವಳಿ. ಹಾಗೆ ಸ್ಥಳೀಯ ವರ್ತಕರು ಪ್ರಶ್ನಿಸಿದ್ದಲ್ಲಿ ಇವರು ಅನುಚಿತ ವರ್ತನೆ ತೋರುತ್ತಿದ್ದಾರೆ.
ಆದುದರಿಂದ ಕೂಡಲೇ ಅಕ್ರಮ ವಲಸಿಗರ ಈ ವ್ಯಾಪಾರ ಚಟುವಟಿಕೆಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಹಳೆ ಬಸ್ ಸ್ಟಾಂಡ್ ಬಳಿ ಒಗ್ಗೂಡಿ ಪ್ರತಿಭಟನೆ ಮಾಡಲಾಯಿತು.
ಈ ಪ್ರತಿಭಟನೆಯಲ್ಲಿ ಡಾ. ಸಾಗರ್ ಜಾನೆಕೆರೆ ಮಲೆನಾಡು ರಕ್ಷಣಾ ಸೇನೆ ರಾಜ್ಯ ಅಧ್ಯಕ್ಷರು, . ಪುಟ್ಟರಾಜ್ ಮಳಲಿ ತಾಲೂಕು ಅಧ್ಯಕ್ಷರು, ತೇಜಸ್,ಚಂದ್ರಶೇಖರ್, ಮಂಜು ದೇವ್ ಹುಲ್ಲಳ್ಳಿ, ಗಿರೀಶ್ ಕುಡುಗರ ಹಳ್ಳಿ, ವೃತೇಶ್,ಶೇಖರ್,ಪ್ರಶಾಂತ್, ಕೃತಿ ವರ್ಮ, ನಾಗರಾಜು ಮುಂತಾದವರು ಭಾಗವಹಿಸಿದ್ದರು
previous post