ವರದಿ ರಾಣಿ ಪ್ರಸನ್ನ
ಗೊಳಗೊಂಡೆ ಗ್ರಾಮ, ಬೆಳಗೋಡು ಹೋ, ಸಕಲೇಶಪುರ ತಾಲ್ಲೂಕು
ಶ್ರೀ ದೇವಿರಮ್ಮ ಮತ್ತು ಶ್ರೀ ಕುಮಾರ ಸ್ವಾಮಿಯವರ ಸುಗ್ಗಿ ಜಾತ್ರಾ ಮಹೋತ್ಸವ ಹಾಗೂ ಕೆಂಡೋತ್ಸವ
ಶ್ರೀ ಆಧಿಶಕ್ತಿ ದೇವಿರಮ್ಮ ಸೇವಾ ಸಮಿತಿ ಇವರ ವತಿಯಿಂದ.
ದಿನಾಂಕ: 10.04.2025ನೇ ಗುರುವಾರದಿಂದ 17.04.2025ರವರೆಗೆ ನಡೆಯಲಿದೆ. ಈ ಜಾತ್ರೆಯ ವಿವರ ಈ ರೀತಿ ಇದೆ.
ದಿನಾಂಕ : 10-04-2025 ನೇ ಗುರುವಾರ ರಾತ್ರಿ 8-00 ಗಂಟೆಗೆ “ಸಾರು ಹಾಕುವುದು”
ದಿನಾಂಕ: 11-04-2025 ನೇ ಶುಕ್ರವಾರ ಬೆಳಗಿನ ಜಾವ 5-00 ಗಂಟೆಗೆ ದೇವಸ್ಥಾನದ ಬಾಗಿಲು ತೆಗೆಯುವುದು, ಸಂಜೆ 6-00 ಗಂಟೆಗೆ ಶ್ರೀ ದೇವರು ಗಂಗಾಸ್ನಾನಕ್ಕೆ ಹೋಗಿ ಕಟ್ಟೆಗೆ ಬರುವುದು ಮತ್ತು ಅಮ್ಮನವರಿಗೆ “ರುದ್ರಾಭಿಷೇಕ, “ಪ್ರಸಾದ ವಿನಿಯೋಗ”
ದಿನಾಂಕ : 12-04-2025 ನೇ ಶನಿವಾರ ರಾತ್ರಿ 10-00 “ಹೊನ್ನಾರು ಉತ್ಸವ” ಮತ್ತು “ದೇವಿಯ ಉತ್ಸವ” “ಪ್ರಸಾದ ವಿನಿಯೋಗ”
ದಿನಾಂಕ : 13-04-2025 ನೇ ಭಾನುವಾರ “ಉಡಿಸು?” ರಾತ್ರಿ 7-00 ಗಂಟೆಗೆ “ಮಹಾಮಂಗಳಾರತಿ” ಹಾಗೂ “ಪ್ರಸಾದ ವಿನಿಯೋಗ*
ದಿನಾಂಕ : 14-04-2025 ಸೋಮವಾರ 10-00 ಗಂಟೆಗೆ “ಬಿಲ್ಲು ಮಲ್ಲು ಉತ್ಸವ” “ಸುಗ್ಗಿ ಉತ್ಸವ” ಮತ್ತು “ಪ್ರಸಾದ ವಿನಿಯೋಗ”
ದಿನಾಂಕ : 15-04-2025 ನೇ ಮಂಗಳವಾರ ಸಂಜೆ 4-00 ಗಂಟೆಗೆ “ಕೆಂಡ ಮಹೋತ್ಸವ”
ಸ್ಥಳ : ಹೆಗಲಮ್ಮ ದೇವಸ್ಥಾನ, ವೀರಣ್ಣನ ಕೊಪ್ಪಲು. ಮತ್ತು “ಪ್ರಸಾದ ವಿನಿಯೋಗ” ವೀರಣ್ಣನ ಕೊಪ್ಪಲು ಗ್ರಾಮಸ್ಥರಿಂದ
ದಿನಾಂಕ : 16-04-2025 ನೇ ಬುಧವಾರ “ಹಗಲು ಜಾತ್ರೆ” ಮಧ್ಯಾಹ್ನ “ಅನ್ನಸಂತರ್ಪಣೆ” ಸಂಜೆ 4-00 ಗಂಟೆಗೆ “ಹಣ್ಣು ಕಾಯಿ” ಸಂಜೆ 5-00 ಗಂಟೆಗೆ “ತೆಂಗಿನಕಾಯಿ ಗುರಿ ಹೊಡೆಯುವುದು” ಮತ್ತು “ನೀರು ಹೋಕಳಿ ” ಹಾಗೂ ರಾತ್ರಿ 7-00 ಗಂಟೆಗೆ ಮಹಾಮಂಗಳಾರತಿ ನಂತರ “ವಿಸರ್ಜನೆ”
ಸರ್ವರಿಗೂ ಸುಸ್ವಾಗತ. ಕೋರುವವರು “ಗೊಳಗೊಂಡೆ ಗ್ರಾಮಸ್ಥರು ಮತ್ತು ಶ್ರೀ ದೇವಿರಮ್ಮ ಸೇವಾ ಸಮಿತಿ.
ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಗ್ರಾಮಸ್ಥರು
previous post