ಜೇನುಪೋಷಕರ ಸಹಕಾರ ಸಂಘ: ಜೈ ಮಾರುತಿ ದೇವರಾಜ್ ಹ್ಯಾಟ್ರಿಕ್ ಅಧ್ಯಕ್ಷ
ಸಕಲೇಶಪುರ:
ಸಕಲೇಶಪುರ ತಾಲ್ಲೂಕು ಜೇನುಪೋಷಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೂರನೇ ಬಾರಿಗೆ ಜೈ ಮಾರುತಿ ದೇವರಾಜ್ ಆಯ್ಕೆಯಾಗಿದ್ದಾರೆ.
ಇಂದು ನಡೆದ ಚುನಾವಣೆಯಲ್ಲಿ ಜೈ ಮಾರುತಿ ದೇವರಾಜ್ ಅಧ್ಯಕ್ಷರಾಗಿ ಮತ್ತು ಎಚ್.ಎಸ್. ಕೃಷ್ಣೆಗೌಡ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜೈ ಮಾರುತಿ ದೇವರಾಜ್ ಅವರು, “ನನ್ನನ್ನು ಮೂರನೇ ಬಾರಿಗೆ ಆಯ್ಕೆ ಮಾಡಲಾಗಿದೆ. ಇದರಿಂದ ನನ್ನ ಜವಾಬ್ದಾರಿ ಬಹಳಷ್ಟು ಹೆಚ್ಚಾಗಿದೆ. ಸಹಕಾರ ಸಂಘವನ್ನು ಇನ್ನಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವೆ,” ಎಂದು ಹೇಳಿದರು.
“ಇತ್ತೀಚೆಗೆ ಜೇನುಹುಳಗಳ ಸಂತತಿ ಕಡಿಮೆಯಾಗಿದೆ. ಇದರಿಂದ ಸ್ಥಳೀಯವಾಗಿ ಜೇನು ಉತ್ಪಾದನೆ ಕುಂಠಿತವಾಗಿದೆ. ಆದ್ದರಿಂದ ಹೊರ ರಾಜ್ಯಗಳಿಂದ ಜೇನು ತರಿಸಿ, ಸಂಸ್ಕರಣೆ ಮಾಡಿ ವಿತರಿಸಲಾಗುತ್ತಿದೆ,” ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಎಮ್. ವಿಶ್ವನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
previous post
next post