ರಾಜ್ಯ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ.
ಆಲೂರು : ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಇಂದು ಶಾಸಕರ ಸಮ್ಮುಖದಲ್ಲಿ ಆಲೂರು ಕಟ್ಟಾಯ ಮಂಡಲದ ಬಿಜೆಪಿ ಕಾರ್ಯಕರ್ತರಿಂದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ದೂರನ್ನು ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಶಾಸಕರಾದ ಸಿಮೆಂಟ್ ಮಂಜು ಅವರು ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭ್ರಷ್ಟ ಕಾಂಗ್ರೆಸ್ ಸರ್ಕಾರ ಭಾಗ್ಯಗಳ ಹೆಸರಿನಲ್ಲಿ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿರುವುದು ಖಂಡನೀಯ ವಿಚಾರವಾಗಿದೆ,ಅಲ್ಲದೆ ಎಸ್ಸಿ ಎಸ್ಟಿ ಮೀಸಲಿಟ್ಟ ಹಣವನ್ನು ಭಾಗ್ಯದ ಹೆಸರಿನಲ್ಲಿ ಬಳಸಿದ್ದು,ರಿಜಿಸ್ಟರ್ ತೆರಿಗೆ ದುಪ್ಪಟ್ಟು ಮಾಡಿದ್ದು, ದಿನನಿತ್ಯ ವಸ್ತುಗಳ ಬೆಲೆಯನ್ನು ದುಬಾರಿ ಮಾಡಿದ್ದು ಅಲ್ಲದೆ ಸಾಮಾನ್ಯ ವರ್ಗದವರ ಜೀವನಕ್ಕೆ ತೊಂದರೆ ಕೊಡುತ್ತಿದ್ದು ಅಲ್ಲದೆ ಸರ್ಕಾರದ ಗುತ್ತಿಗೆಯಲ್ಲಿ ಶೇ 4% ಮುಸ್ಲಿಂರಿಗೆ ನೀಡಿರುವುದು ಸರಿಯಿಲ್ಲ ಮತ್ತು ಬಿಜೆಪಿ 18 ಶಾಸಕರನ್ನು ಅಮಾನತು ಮಾಡಿ ದಬ್ಬಾಳಿಕೆ ಮಾಡುತ್ತಿರುವುದು ಹಾಗೂ ಸರ್ಕಾರದ ಕಿರುಕುಳಕ್ಕೆ ರೈತರು,ಗುತ್ತಿಗರದಾರರು,ನೌಕರರು ಬಲಿಯಾಗಿರುವುದು ಸಾಕ್ಷ್ಯವಿದ್ದು ಸರ್ಕಾರ ನೆಡೆಸುವಲ್ಲಿ ವಿಫಲವಾಗಿದ್ದು ಕೂಡಲೆ ಅಧಿಕಾರದಿಂದ ಕೆಳಗಿಳಿಯುವಂತೆ ಆಕ್ರೋಶ ವ್ಯಕ್ತಪಡಿಸಿದರು.ಮುಂದಿನ 8ನೇ ತಾರಿಕು ಜಿಲ್ಲಾ ಮಟ್ಟದಲ್ಲಿ ರಾಜ್ಯಾಧ್ಯಕ್ಷರ ಹಾಗೂ ವಿಪಕ್ಷ ನಾಯಕರ ಸಮ್ಮುಖದಲ್ಲಿ ಹೊರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಉಮಾರವಿ ಪ್ರಕಾಶ್.ಕಾರ್ಯದರ್ಶಿ ಕೃಷ್ಣಮೂರ್ತಿ.ಲೊಕೇಶ್ ಕಣಗಾಲ್.ಅಜೀತ್ ಚಿಕ್ಕಣಗಾಲ್.ಗಣೇಶ್.ಪೂವಯ್ಯ.ಹೇಮಂತ್.ನಾಗರಾಜ್.ಮೋಹನ್.ಲೋಹಿತ್.ಬಾಲಲೋಚನ್.ಮಂಜುನಾಥ್.ನಂಜೇಶ್.ವೆಂಕಟೇಶ್.ಹಾಗೂ ಎಲ್ಲಾ ಮುಖಂಡರುಗಳು ಭಾಗವಹಿಸಿದ್ದರ
previous post
next post