Blog

ಪರಿಚಯ ಲೇಖನ

*ಶ್ರೀಮತಿ ಪುಷ್ಪ, ಶ್ರೀ ಹೆಚ್ ಎನ್ ದೇವರಾಜ್ (ದಿವಾನ್) ಸೇವೆಗೆ ಅಕ್ಷರ ಸೇವೆ.*

ಹಣವಂತರೆಲ್ಲ ಸಮಾಜ ಸೇವಾ ಧುರೀಣರಾಗಲು ಸಾಧ್ಯವಿಲ್ಲ. ಸಮಾಜ ಸೇವಾ ಮನೋಭಾವ ಇರುವವರೆಲ್ಲ ಸಮಾಜ ಸೇವೆಯ ದೀಕ್ಷೆಯನ್ನು ಪಡೆಯಲಾಗದು. ಅಂತರಂಗದಲ್ಲಿ ಅನುರಾಗವಿರಬೇಕು, ಅಂತರಂಗದ ಅಳಲಿನವರು ಮಾತ್ರ ಸಮಾಜದ ಸಮಸ್ತೆಯ ಬಗ್ಗೆ ಸಹಜ ಕಳಕಳಿಯನ್ನು ತಳೆಯಬಹುದು. ಅದು ವ್ಯಕ್ತಿಗತವಾಗಿರಬೇಕು, ಅಂತ ನಿಶ್ಚಲ ನೀರವ ಮನೋಭಾವದ ವ್ಯಕ್ತಿಯಾಗಿರುವವರು ನಮ್ಮ ನಿಮ್ಮ ನಡುವಿನ ಹೆಚ್ ಎನ್ ದೇವರಾಜ್(ದಿವಾನ್) ರವರು.

  ಹೆಬ್ಬಸಾಲೆ ಗ್ರಾಮದ ಕೃಷಿ ಕುಟುಂಬದಲ್ಲಿ ಶ್ರೀ ನಂಜೇಗೌಡ ಶ್ರೀಮತಿ ದೇವಮ್ಮನವರ ಮಗನಾಗಿ ಹೆಚ್ ಎನ್ ದೇವರಾಜ್ (ದಿವಾನ್) ರವರು 28-06-1951 ರಲ್ಲಿ ಜನಿಸಿದರು. ಎಸ್ ಎಸ್ ಎಲ್ ಸಿ ವರಿಗೆ ವಿದ್ಯಾಭ್ಯಾಸ ನಡೆಸಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 15-05- 1983 ರಲ್ಲಿ ಪುಷ್ಪಾರವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಈ ದಂಪತಿಗಳಿಗೆ ಅರ್ಪಿತ ದಿವಾನ್ ಮತ್ತು ಅಕ್ಷತಾ ದಿವಾನ್ ಎಂಬ ಇಬ್ಬರು ಮಕ್ಕಳನ್ನು ಪಡೆದಿರುತ್ತಾರೆ. ಶ್ರೀ ಎಚ್ ಎನ್ ದೇವರಾಜ್ ರವರು ಅತ್ಯುತ್ತಮ ಕಾಫಿ ಬೆಳೆಗಾರರಾಗಿ ಮತ್ತು ಭತ್ತದ ವ್ಯಾಪಾರಿಗಳು ಆಗಿ ಗುರುತಿಸಿಕೊಂಡವರು. ಸಮಾಜ ಸೇವೆಯಲ್ಲಿ ಸಹ ಗುರುತಿಸಿಕೊಂಡ ಇವರು, 1987/92 ರ ವರೆಗೆ ಸಕಲೇಶಪುರ ಸಾರ್ವಜನಿಕ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾಗಿ ಸೇವೆ ನಿರ್ವಹಿಸಿದರು. ಸಕಲೇಶಪುರ ರೋಟರಿ ಸಂಸ್ಥೆ ಹಾಗೂ ಗಣಪಯ್ಯ ದಿವ್ಯಾಂಗ ಮಕ್ಕಳ ಶಾಲೆ ಸಕಲೇಶಪುರದ ಅಧ್ಯಕ್ಷರಾಗಿ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಇವರ ಶ್ರಮ ಶ್ಲಾಘನೀಯ. ಶಿರಾಡಿ ಗಡಿಭಾಗದ ಚೌಡೇಶ್ವರಿ ದೇವಾಲಯದ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷರಾಗಿ, ಬಾಗೆ ಜೆಎಸ್ಎಸ್ ಶಾಲೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
   ತಾವು ಒಬ್ಬ ಬೆಳೆಗಾರರಾಗಿ ಕಾಫಿ ಬೆಳೆಗಾರರ ಸಂಘಟನೆಯಲ್ಲಿ  ಸಲ್ಲಿಸಿದ ಸೇವೆ ಅವಿಸ್ಮರಣೀಯ. ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಕಟ್ಟಡ ನಿರ್ಮಾಣಗೊಂಡ ವರ್ಷ 1995 ರಿಂದ 1998ರ ವರೆಗೆ ಎಚ್ ಡಿ ಪಿ ಎ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಖಜಾಂಚಿಯಾಗಿ, ಉಪಾಧ್ಯಕ್ಷ ಸ್ಥಾನವನ್ನು ಸಹ ಯಶಸ್ವಿಯಾಗಿ ನಿಭಾಯಿಸಿ ಬೆಳೆಗಾರ ಸಮುದಾಯದ ಪ್ರೀತಿ ಪಾತ್ರರಾಗಿದ್ದಾರೆ. ಕರ್ನಾಟಕ ಬೆಳಗಾರ ಒಕ್ಕೂಟದ ಉಪಾಧ್ಯಕ್ಷರಾಗಿಯು ಸೇವೆ ಸಲ್ಲಿಸಿರುತ್ತಾರೆ. ಕಾಫಿ ಮಂಡಳಿಯ ಸದಸ್ಯರಾಗಿಯು ಸೇವೆ ಸಲ್ಲಿಸಿ, ಬೆಳೆಗಾರ ಸಂಘಟನೆ ಹಾಗೂ ಬೆಳೆಗಾರರಿಗೆ ಹಲವಾರು ಅನುಕೂಲಗಳನ್ನು ಕಲ್ಪಿಸಿ ಕೊಡುವಲ್ಲಿ ಇವರ ಅವಿರತ ಶ್ರಮ ಸ್ಮರಣೀಯ. ಕಾಫಿ ಬೆಳಗಾರರಿಗೆ ಕೇಂದ್ರ ಸರ್ಕಾರದಿಂದ ಪ್ಯಾಕೇಜ್ ದೊರಕಿಸಿ ಕೊಡುವಲ್ಲಿ 2007ರಲ್ಲಿ ಅಂದಿನ ಮಾನ್ಯ ಪ್ರಧಾನಮಂತ್ರಿ ಶ್ರೀ ಮನಮೋಹನ್ ಸಿಂಗ್ ಅವರ ಗಮನ ಸೆಳೆದು ಕಾಫಿ ಪ್ಯಾಕೇಜ್ ದೊರಕಿಸಿ ಕೊಡುವಲ್ಲಿ ಇವರ ಪಾತ್ರ ಗಮನಾರ್ಹವಾದದ್ದು. ಸೌಮ್ಯ ಸ್ವಭಾವದಿಂದ ಎಲ್ಲಾ ಕ್ರಿಯೆ ಪ್ರತಿಕ್ರಿಯೆಗಳನ್ನು ಸಮಾನವಾಗಿ ಸ್ವೀಕರಿಸಿ  ಕ್ರಿಯಾತ್ಮಕವಾಗಿ ಸಲ್ಲಿಸಿದ ಸೇವೆ ಮಹತ್ತರವಾದದ್ದು. ಜೊತೆಗೆ ಸಕಲೇಶಪುರದಲ್ಲಿ ನಡೆಯುವ ಸರ್ವಧರ್ಮಗಳ ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನಾನುರಾಗಿಯಾದ್ದಾರೆ.
ರಾಜ್ಯದ ಪ್ರತಿಷ್ಠಿತ ವೀರಶೈವ ಲಿಂಗಾಯತ ಸಂಘಟನೆಯಾದ ಶ್ರೀ ಮಲೆನಾಡು ವೀರಶೈವ ಸಮಾಜ ಸಕಲೇಶಪುರದ ಅಧ್ಯಕ್ಷರಾಗಿ ಅಭೂತಪೂರ್ವ ಸೇವೆ ಸಲ್ಲಿಸಿ ಸಮಾಜಕ್ಕೆ ಗೌರವ ತಂದಿದ್ದಾರೆ. ನಿಮ್ಮ ಸೇವೆಯನ್ನು  ಸಮಾಜ ಸ್ಮರಿಸುತ್ತಿರುತ್ತದೆ ಎಂದು ತಿಳಿಸುತ್ತಾ ದಯಾಮಯನಾದ ಭಗವಂತನು ತಮಗೂ ಕುಟುಂಬದವರೆಲ್ಲರಿಗೂ ಆಯುರಾರೋಗ್ಯ ಭಾಗ್ಯಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

ಮಲೆನಾಡು ವೀರಶೈವ ಸಮಾಜ(ರಿ) ನೂತನ ಅಧ್ಯಕ್ಷರಾದ ಎಂ ಎಸ್ ಧರ್ಮಪ್ಪ (ಮೂಗಲಿ), ಉಪಾಧ್ಯಕ್ಷರಾದ ಎ ಜಿ ಗಗನ್, ಸಹ ಕಾರ್ಯದರ್ಶಿಯಾದ ಸುರೇಶ್, ಸಂಘಟನಾ ಕಾರ್ಯದರ್ಶಿಯಾದ ನರೇಶ್.. ಕಾರ್ಯಕಾರಿ ಮಂಡಳಿಯ ಸರ್ವ ಸದಸ್ಯರು.

ಯಡೇಹಳ್ಳಿ ಆರ್ ಮಂಜುನಾಥ್
ಕಾರ್ಯದರ್ಶಿಗಳು ಶ್ರೀ ಮಲೆನಾಡು ವೀರಶೈವ ಸಮಾಜ(ರಿ) ಸಕಲೇಶಪುರ.

Related posts

ಫುಟ್ ಬಾಲ್ ಕ್ಲಬ್ ಗೆ ವಿಜಯ

Bimba Prakashana

ಹಾಸನಾಂಬ ಕೇಕ್ ಪ್ಯಾಲೇಸ್

Bimba Prakashana

ಮುನಿ ರತ್ನ ಮೇಲೆ ಕ್ರಮ ಕೈ ಗೊಳ್ಳಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More