ಖುರಾನ್ ಪಠಣ ಮಾಡದ ಮೆದುರು ಖಾಜಿ
ಅದ್ದೂರಿಯಾಗಿ ನಡೆದ ಚನ್ನಕೇಶವನ ಘಳಿಗೆ ತೇರು
ಬೇಲೂರು ಹಿಂದುಗಳಿಗೆ ಐತಿಹಾಸಿಕ ಜಯ ಎಂದ ಹಿಂದೂ ಮುಖಂಡ ರಘು ಸಕಲೇಶಪುರ
ಬೇಲೂರು.,
ಜಗತ್ ಪ್ರಸಿದ್ಧ ಬೇಲೂರಿನ ಚನ್ನಕೇಶವ ಸ್ವಾಮಿ ದೇವಸ್ಥಾನದ 2025 ನೇ ಸಾಲಿನ ರಥೊತ್ಸವ ಘಳಿಗೆ ತೇರು ಅದ್ದೂರಿಯಾಗಿ ಸಮಾಪನಗೊಂಡಿದೆ.
ದೊಡ್ಡಮೇದುರು ಖಾಜಿ ರಥದ ಮುಂದೆ ಖುರಾನ್ ಪಠಣ ಮಾಡಿದ ನಂತರವೇ ಘಳಿಗೆ ತೇರು ಎಳೆಯುವುದು ಎಂಬ ಅಧಾರ್ಮಿಕ ಆಚರಣೆ ಮಾಡುತ್ತ ದೇವಸ್ಥಾನದ ಮನ್ಯುಲ್ ನಲ್ಲಿ ಇಲ್ಲದಿದ್ದರೂ ನಿಯಮ ಮೀರಿ ಮಾಡುತಿದ್ದ ಈ ಆಚರಣೆಯಿಂದ ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ತರುತ್ತಿದ್ದರು.
2025 ನೇ ಸಾಲಿನ ರಥೊತ್ಸವದಲ್ಲಿ ಖಾಜಿ ಖುರಾನ್ ಪಠಣ ಮಾಡಬಾರದೆಂಬ ನಿರ್ಧಾರವನ್ನು ಬೇಲೂರಿನ ಹಿಂದೂ ಸಮಾಜ ನಿಶ್ಚಯ ಮಾಡಿ ಚನ್ನಕೇಶವ ಭಕ್ತರ ಹೆಸರಿನಲ್ಲಿ ಮತ್ತು ರಾಮದೂತ ಹಿಂದೂ ಮಹಾಗಣಪತಿ ಸಮಿತಿ ಸಕಲೇಶಪುರ ಕಾರ್ಯಕರ್ತರ ಜೊತೆ ಸೇರಿ ನಡೆಸಿದ ಹೋರಾಟದಿಂದ ದಿನಾಂಕ 10.04.25 ರಂದು ನಡೆದ ಚನ್ನಕೇಶವ ಘಳಿಗೆ ಥೇರಿನಲ್ಲಿ ಯಾವುದೇ ಹಿಂದೂ ವಿರೋಧಿ ಚಟುವಟಿಕೆ ಆಗಿಲ್ಲ ಖಾಜಿ ಖುರಾನ್ ಪಠಣ ಮಾಡದೇ ಅದ್ದೂರಿ ರಥೊತ್ಸವ ನಡೆದಿದ್ದು ಬೇಲೂರಿನ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಇಸ್ಲಾಂ ಮತ್ತು ಖುರಾನ್ ಜಗತ್ತಿಗೆ ಬರುವ ಮೊದಲೇ ಚನ್ನಕೇಶವ ಸ್ವಾಮಿ ದೇವಸ್ಥಾನ ನಿರ್ಮಾಣವಾಗಿತ್ತು ಬೇಲೂರಿನ ದೇವಸ್ಥಾನದ ಕೆತ್ತನೆ ಬಗ್ಗೆ ವಿದೇಶಿಯರು ಅಧ್ಯಯನ ಮಾಡಿ ಸಂಶೋಧನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧವಿಲ್ಲದ ಮತ್ತು ಧಾರ್ಮಿಕ ಆಚರಣೆಗಳಿಗೆ ವಿರುದ್ದವಾಗಿರುವ ಖುರಾನ್ ಪಠಣ ಹೊಯ್ಸಳ ಅರಸರಿಗೆ ಮಾಡಿದ ಅವಮಾನ ಎಂದು ರಘು ಸಕಲೇಶಪುರ ಈ ಸಂದರ್ಭದಲ್ಲಿ ತಿಳಿಸಿದರು
ಮುಂದಿನ ದಿ
ನಗಳಲ್ಲಿ ಈ ಪದ್ದತಿಗಳು ಶಾಶ್ವತವಾಗಿ ನಿಲ್ಲಬೇಕು ಇದರ ಬಗ್ಗೆ ದೇವಸ್ಥಾನ ಆಡಳಿತಮಂಡಳಿ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
10.04.2025 ರಂದು ನಡೆದ ಚನ್ನಕೇಶವ ರಥೊತ್ಸವ ಇಡೀ ಹಿಂದೂ ಸಮಾಜಕ್ಕೆ ಐತಿಹಾಸಿಕ ಗೆಲವು ತಂದುಕೊಟ್ಟಿದ್ದು ಹಿಂದೂ ಸಮಾಜ ಹಿಂದೂ ವಿರೋಧಿ ಯಾವುದೇ ಚಟುವಟಿಕೆ ಆದರೂ ಸಹ ಅದನ್ನ ವಿರೋಧ ಮಾಡಬೇಕು ಹೋರಾಟ ಅನಿವಾರ್ಯವಾದರೆ ಹೋರಾಡಬೇಕು ಇಲ್ಲ ಅಂದರೆ ಹೋರಾಟ ಮಾಡಲು ವಿರೋಧ ಮಾಡಲು ಆಗದ ರೀತಿಯಲ್ಲಿ ವಕ್ಫ್ ಬೋರ್ಡ್ ರೀತಿ ಕಾಯ್ದೆ ಬರುವ ಸಾಧ್ಯತೆ ಇರುತ್ತೆ ಹಿಂದೂಗಳು ಜಾಗೃತರಾಗಬೇಕು ಸಾಮೂಹಿಕ ಹೋರಾಟ ಅಗತ್ಯ ಎಂದು ರಘು ಅಭಿಪ್ರಾಯ ತಿಳಿಸಿದ್ದಾರೆ
ಖುರಾನ್ ಪಠಣ ಮಾಡುವುದನ್ನ ಜಿಲ್ಲಾಡಳಿತ ತಡೆ ಮಾಡಿ ಹಿಂದೂ ಸಮಾಜದ ಭಾವನೆಗಳಿಗೆ ಮನ್ನಣೆ ನೀಡಿರೋದು ಹಿಂದೂ ಸಮಾಜಕ್ಕೆ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.