Blog

ಆಲೂರುನಲ್ಲಿ ದೇವರ ದಾಸಿಮಯ್ಯ ಜಯಂತಿ

ಇಂತಹ ಮಹಾಪುರುಷನನನ್ನು ಪಡೆದ ಸಮಾಜವೇ ದನ್ಯ…

ಆಲೂರು: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ದೇವರ ದಾಸಿಮಯ್ಯನವರ ಜಯಂತಿಯನ್ನು ಆಚರಿಸಲಾಯಿತು,ಕಾರ್ಯಕ್ರಮವನ್ನು ಜ್ಯೋತಿಬೆಳಗುವುದರ ಮೂಲಕ ತಹಸಿಲ್ದಾಹರ್ ಮಲ್ಲಿಕಾರ್ಜುನ ಅವರು ಉದ್ಘಾಟಿಸಿ ನಂತರ ಮಾತನಾಡಿದ ಅವರು ದಾಸಿಮಯ್ಯ ಅವರು ತಮ್ಮ ಆದ್ಯಾತ್ಮ ಸಿರಿವಂತಿಕೆಯಿಂದ ಮೆರೆದು, ಶಿವನ ಹೆಜ್ಜೆಯಲ್ಲಿ ಹೆಜ್ಜೆಯನಿಟ್ಟು, ತಮ್ಮ ಹೆಜ್ಜೆ ಪಾಡುಗಳನ್ನು ನಮಗಾಗಿ ಉಳಿಸಿಹೋಗಿದ್ದಾರೆ. ಇವುಗಳನ್ನು ಅನುಸರಿಸಿ ನಡೆದರೆ ಸಾಕು ನಮ್ಮ ಬಾಳು ಬೆಳಕಾಗುವುದು ಇಂತಹ ಮಹಾಪುರುಷನನನ್ನು ಪಡೆದ ಸಮಾಜವೇ ದನ್ಯ ಎಂದರು.

ಕನ್ನಡ ನಾಡಿನ ಶಿವ ಶರಣರರಲ್ಲಿ ದೇವರ ದಾಸಿಮಯ್ಯನವರು 11 ನೇ ಶತಮಾನದಲ್ಲಿ ಆಗಿ ಹೋದ ಶರಣರು. ಮಹಾಶಿವಶರಣರಲ್ಲಿ ಇವರೊಬ್ಬರು ಮತ್ತು ಶರಣ ಸಂಪ್ರದಾಯ ದಲ್ಲಿ ಮೊದಲಿಗರು ಹಾಗು ಆದ್ಯ ವಚನಕಾರ ಪಿತಾಮಹ, ಜನಪದ ಜಗದ್ಗುರು ಎಂಬ ಬಿರುದು ಸಹ ಇವರಿಗೆ ಇದೆ. ದೇವರ ದಾಸಿಮಯ್ಯನು ಒಬ್ಬ ಐತಿಹಾಸಿಕ ಪುರುಷ ನೆಂಬುದಕ್ಕೆ ಶಿಲಾ ಶಾಸನ ಗಳು ಬಲವಾದ ಪ್ರಮಾಣ ಗಳಾಗಿವೆ. ಅವನ ನಂತರ ಸ್ವಲ್ಪ ಕಾಲದಲ್ಲಿಯೇ ಅವತರಿಸಿದ ಬಸವಣ್ಣನವರು ಈ ಶರಣ ದಂಪತಿಗಳ ಮಹಿಮೆಯನ್ನು ಅವರ ಚರಿತ್ರೆಯಲ್ಲಿ ಘಟನೆಗಳನ್ನು, ವಚನಗಳನ್ನು ತನ್ನ ವಚನ ವಾಜ್ಞ ಯದಲ್ಲಿ ನಿರರ್ಗಳವಾಗಿ ಉಲ್ಲೇಖಿಸಿದ್ದಾರೆ.
ದಾಸಿಮಯ್ಯನು ವೃತ್ತಿ, ನೇಯ್ಗೆಯ ವೃತ್ತಿ. ನೇಯ್ಗೆಯ ಕಾಯಕವನ್ನು ಮಾಡಿ ಅನೇಕ ಪವಾಡ ಗಳನ್ನು ಮಾಡಿದ್ದಾನೆ. ಅಲ್ಲದೆ ಸಾಕ್ಷತ್ ಪರಶಿವನಿಂದ ತವನಿಧಿಯನ್ನು ಪಡೆದ ಶರಣ. ಈ ಶರಣನು ಜ್ಞಾನಿಯೂ ಬೋಧೆಯಲ್ಲಿ ಬಲ್ಲಿದನೂ ಆದಂತೆ, ವಚನ ಸಾಹಿತ್ಯ ರಚನೆಯಲ್ಲಿಯೂ ಪ್ರಬಲನಾಗಿದ್ದನು. ಅಲಂಕಾರಿಕವಾದ ಸ್ವಲ್ಪ ಶಬ್ದಗಳ ನುಡಿಯಲ್ಲಿ ದಿವ್ಯವಾದ, ವಿಶಾಲವಾದ ಅರ್ಥ, ಯಾರೂ ತೆಗೆದು ಹಾಕದಂತಹ ಅಭಿಪ್ರಾಯ ಇಂತಹ ಅಮೃತ ಬಿಂದು ಮನೋಜ್ಞವಾಣಿ ಆತನ ವಚನಗಳಾಗಿವೆ.

ಈ ಸಂಧರ್ಭದಲ್ಲಿ ಸಿಡಿಪಿಒ ಅಧಿಕಾರಿ ಏ.ಟಿ ಮಲ್ಲೇಶ್.ಕ.ಸಾ‌.ಪ ಅಧ್ಯಕ್ಷರಾದ ಗೋಪಾಲಕೃಷ್ಣ.ನಿವೃತ್ತ ಶಿಕ್ಷಕರಾದ ರಾಮಶೆಟ್ಟಿ.ಕೃಷ್ಣಮೂರ್ತಿ ಅಬ್ಬನ.ವೆಂಕಟೇಶ್ ತಾಳೂರು.ಶಿರಸ್ತೇದಾರರಾದ ಅಂಕೇಗೌಡ.ಸಿಬ್ಬಂದಿಗಳಾದ ಸ್ಪೂರ್ತಿ.ಮುಂತಾದವರು ಉಪಸ್ಥಿತರಿದ್ದರು.

Related posts

ಜಾತ್ರೆ ಮಾಡುವ ಸ್ಥಳದಲ್ಲಿ ಮಣ್ಣಿಗೆ ಸಾಂದ್ರತೆ ಇಲ್ಲ

Bimba Prakashana

ಬಾಗೆಯಲ್ಲಿ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ

Bimba Prakashana

ವಳಲ ಹಳ್ಳಿ ಗ್ರಾಮ ಸಭೆ – ಬಹಿಷ್ಕಾರ ಮಾಡಿದ ಗ್ರಾಮಸ್ಥರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More