24/25 ನೇ ಸಾಲಿನ ರೈತ ಆತ್ಮಹತ್ಯೆ ಕುಟುಂಬಗಳಿಗೆ ಚೆಕ್ ವಿತರಣೆ,
ಆಲೂರು :- ಕೃಷಿ ಇಲಾಖೆ ವತಿಯಿಂದ ಇಂದು ರೈತ ಆತ್ಮಹತ್ಯೆ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ನೊಂದ ಕುಟುಂಬಗಳಿಗೆ ಚೆಕ್ ವಿತರಣೆ ಮಾಡಿ ಮಾತನಾಡಿದ ಆಲೂರು ಸಕಲೇಶಪುರ ವಿಧಾನ ಸಭಾ ಶಾಸಕ ಸಿಮೆಂಟ್ ಮಂಜು ರವರು ಯಾವುದೇ ರೈತ ಆತ್ಮಹತ್ಯೆ ಮಾಡಿಕೊಳ್ಳಬಾರದು, ಧೈರ್ಯ ಕಳೆದುಕೊಂಡ ರೈತ ದೇಶಕ್ಕೆ ನಷ್ಟ , ರೈತನಿಲ್ಲದ ದೇಶದ ಪ್ರಗತಿ ಊಹಿಸಲು ಸಾಧ್ಯವಿಲ್ಲ. ಸರ್ಕಾರದ ಪರಿಹಾರದಿಂದ ನಿಮ್ಮ ಕುಟುಂಬದ ಆಧಾರವಾಗಿರುವ ನಿಮಗೆ ಲಭಿಸುವುದಿಲ್ಲ, ನಿಮ್ಮ ಸ್ಥೈರ್ಯ ನಿಮಗೆ ಮುಖ್ಯ, ರೈತ ಕುಟುಂಬದ ಸಂಪೂರ್ಣ ಸ್ವಾಸ್ಥ್ಯ ಕಾಪಾಡಲು ಯಾವ ಸರ್ಕಾರದಿಂದಲೂ ಸಾಧ್ಯ ಇಲ್ಲಾ ಹಾಗಾಗಿ ಆತ್ಮಹತ್ಯೆ ನಿಮ್ಮ ಕೊನೆ ನಿರ್ಧಾರ ಆಗಬಾರದು ಕುಟುಂಬದೊಂದಿಗೆ ಚರ್ಚಿಸಿ ಸಮಸ್ಯೆಯಿಂದ ಹೊರಬನ್ನಿ. ನನ್ನ ಕ್ಷೇತ್ರದಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು,ದಯಮಾಡಿ ಯಾವುದೇ ಸಂಧರ್ಭದಲ್ಲಿ ನೀವೂ ನಿಮ್ಮ ಸಮಸ್ಯೆ ನನ್ನ ಬಳಿ ಚರ್ಚಿಸಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ನಂತರ ಸರ್ಕಾರದ ಬಳಿ ವಿಷಯ ಮುಂದಿಟ್ಟು ನಿಮ್ಮ ನೆರವಿಗೆ ಶ್ರಮಿಸುತ್ತೇನೆ ಆತ್ಮಹತ್ಯೆ ಮಹಾಪಾಪ ರೈತ ದೇಶದ ಕಣ್ಣು ಆತನಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ರೈತನಿಗೆ ಸಕಾಲಕ್ಕೆ ದೊರಕುವಂತೆ ಮಾಡುವ ಜವಾಬ್ದಾರಿ ಇಲಾಖೆ ಅಧಿಕಾರಿಗಳದ್ದು ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದರು.
ಕಾರ್ಯಕ್ರಮದಲ್ಲಿ ಆಲೂರು ಸಕಲೇಶಪುರ ವ್ಯಾಪ್ತಿಯ ಎ ಸಿ ಶ್ರುತಿ, ತಾಲೂಕು ದಂಡಾಧಿಕಾರಿ ಮಲ್ಲಿಕಾರ್ಜುನ್, ತಾಲೂಕು ಕೃಷಿ ಅಧಿಕಾರಿ ರಮೇಶ್, ಕೃಷಿಕ ಸಂಘದ ಅಧ್ಯಕ್ಷ ಧರ್ಮಪ್ಪ ಉಪಸ್ಥಿತರಿದ್ದರು.
previous post
next post