ಸಕಲೇಶಪುರದಲ್ಲಿ ಈ.ಬಾರಿಯ ಜಾತ್ರಾ ಮಹೋತ್ಸವದಲ್ಲಿ ನಡೆಯುವ ಅಮ್ಯೂಸ್ ಮೆಂಟ್ ಪಾರ್ಕನ್ನು ಮಾಡದಂತೆ ಮಾನ್ಯ ಉಚ್ಚ ನ್ಯಾಯಾಲಯವು ತಡೆ ಯಾಜ್ಞೆ ನೀಡಿದೆ.
ಸಕಲೇಶಪುರದ ಶಿವಕುಮಾರ್,ಸಾಗರ್, ಗೌತಮ್, ಧನ್ಯ ಕುಮಾರ್ ಹಾಗು ತೇಜೇಶ್ ರವರು ಸಕಲೇಶಪುರದಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ಜಾಯಿಂಟ್ ವೀಲ್, ಕೊಲಂಬಾಸ್, ಟೋರಾ ಟೋರಾ ಗಳನ್ನು ಅಲ್ಲಿ ಜಾತ್ರೆ ನಡೆಸುತ್ತಿರುವ ಮೈದಾನದಲ್ಲಿ ಮಾಡಿದರೆ ಅನಾಹುತ ಆಗುತ್ತದೆ ಎಂದು ಹೈ ಕೋರ್ಟ್ ಮೊರೆ ಹೋಗಿದ್ದರು.
ಈ ಮೈದಾನದಲ್ಲಿ ಹೊಸತಾಗಿ ಮಣ್ಣು ಹಾಕಿದ್ದರಿಂದ ಅಲ್ಲಿನ ಮಣ್ಣಿನಲ್ಲಿ ಗಟ್ಟಿತನ ಇಲ್ಲದೆ ಮೆದುವಾಗಿದೆ. ಹೀಗಾಗಿ ಅಲ್ಲಿ ಜಾತ್ರೆ ನಡೆಸಬಾರದು ಎಂದು ಆರಂಭದ ದಿನಗಳಲ್ಲಿ ಆರೋಪ ಮಾಡಿದ್ದರು. ಈ ಆರೋಪದ ಬಳಿಕ ತಜ್ಞರು ಮಣ್ಣು ಪರೀಕ್ಷೆ ಮಾಡಿದಾಗ ಅಲ್ಲಿನ ಮಣ್ಣಿಗೆ ಸಾಂದ್ರತೆ ಇಲ್ಲ ಎಂಬ ವರದಿ ಬಂದಿತ್ತು.
ಈ ವರದಿ ಬಂದ ಬಳಿಕ ಅವರು ಮಾನ್ಯ ಹೈ ಕೋರ್ಟ್ ನಲ್ಲಿ ದಾವೆ ದಾಖಲು ಮಾಡಿ ಈ ಬಗ್ಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದರು.
ಈ ಬಗ್ಗೆ ಪರಿಶೀಲನೆ ಮಾಡಿದ ನ್ಯಾಯಾಲಯವು ಜಾತ್ರೆಯಲ್ಲಿ ಜಾಯಿಂಟ್ ವೀಲ್, ಟೋರಾ ಟೋರಾ, ಕೊಲಂಬಾಸ್ ನಡೆಸದಂತೆ ತಡೆ ನೀಡಿದೆ.
ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳಿಗೆ ನೋಟಿಸು ಜಾರಿ ಮಾಡಿದೆ
previous post
next post