ಚುಟುಕು ಸಾಹಿತ್ಯ ಪರಿಷತ್ ಸಕಲೇಶಪುರ ತಾಲೂಕು ಘಟಕದ ವತಿಯಿಂದ ಪ್ರೌಢ ಶಾಲಾ ಮಕ್ಕಳಲ್ಲಿ ಚುಟುಕು ಸಾಹಿತ್ಯ ರಚನೆಯಲಿ ಮಕ್ಕಳು ತೊಡಗಿಸಿಕೊಳ್ಳುವ ಸಲುವಾಗಿ ಚುಟುಕು ರಚನೆಯ ಕುರಿತು ಉಪನ್ಯಾಸ,ಚುಟುಕು ರಚನಾ ಕಾರ್ಯಾಗಾರ ಸರ್ಕಾರಿ ಪ್ರೌಢಶಾಲೆ ಬೆಳಗೋಡು ಇಲ್ಲಿ ದಿನಾಂಕ 11-01-2025ರ ಶನಿವಾರ ಆಯೋಜಿಸಲಾಗಿತ್ತು.
ಸಕಲೇಶಪುರ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಮಲ್ಲೇಶ ಜಿ ಮತ್ತು ಹಾಸನ ಜಿಲ್ಲೆಯ ಖ್ಯಾತ ಸಾಹಿತಿಗಳಾದ ಶ್ರೀ ವಾಸು ಸಮುದ್ರವಳ್ಳಿ ಕಾರ್ಯಾಗಾರದಲ್ಲಿ ಮಕ್ಕಳಿಗೆ ಸಾಹಿತ್ಯ ರಚನೆಯಲ್ಲಿ ಮಕ್ಕಳು ಸ್ವಯಂ ಪ್ರೇರಿತರಾಗಿ ತೊಡಗಿ ಚುಟುಕು,ನಗೆಹನಿ,ಕವನಗಳನ್ನು ರಚಿಸುವಂತೆ ಪೂರಕ ವಾತಾವರಣ ಕಲ್ಪಿಸಿ ಮಕ್ಕಳು ಸಾಹಿತ್ಯ ಲೋಕ ಪ್ರವೇಶಿಸುವಂತೆ ಉತ್ತೇಜನ ನೀಡಿದರು.
ಮೊದಲಿಗೆ ವಾಸುರವರು ತಮ್ಮ ಸಾಹಿತ್ಯ ಪ್ರವೇಶ ಮತ್ತು ತಮ್ಮ ಕೃತಿಗಳೊಟ್ಟಿಗೆ ಮಕ್ಕಳು ಸಾಹಿತ್ಯ ರಚನೆಗೆ ವಸ್ತು ಹೇಗೆ ಆರಿಸಿಕೊಳ್ಳಬೇಕು ಎಂದು ಅರ್ಥೈಸುವುದರೊಟ್ಟಿಗೆ ತಕ್ಷಣದಲ್ಲೇ ಮಕ್ಕಳು ಚುಟುಕು ರಚಿಸುವಂತೆ ಅವಕಾಶ ನೀಡಿದರು.ನಂತರ ಮಲ್ಲೇಶ ಜಿ ರವರು ಚುಟುಕು ರಚನಾ ನಿಯಮ ಪ್ರಾಸ ಮತ್ತು ರಚನೆಯಲ್ಲಿ ದಿನಕರ ದೇಸಾಯಿ,ಹಾಗೂ ಇನ್ನಿತರೆ ಸಾಹಿತಿಗಳ ಪರಾಮರ್ಶನದೊಂದಿಗೆ ಮಕ್ಕಳು ಅಲ್ಲೇ ಚುಟುಕು ರಚಿಸಲು ಅನುವು ಮಾಡಿಕೊಟ್ಟರು.ಮಾತು ಕಲಿತು ಮಾನವನಾದ, ಓದು ಕಲಿತು ನಾಗರಿಕನಾದ,ಸಾಹಿತ್ಯ ರಚಿಸಿ ಸವ್ಯಸಾಚಿಯಾದ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮಕ್ಕಳು ನೋಟ್ ಪುಸ್ತಕದಲ್ಲಿ ಬರೆದುಕೊಳ್ಳದೆ ನೇರವಾಗಿ ಎದ್ದು ತಮ್ಮ ಚುಟುಕುಗಳನ್ನು ಮಂಡನೆ ಮಾಡಿದ್ದು ತುಂಬಾ ಸೊಗಸಾಗಿತ್ತು.
ಮಕ್ಕಳಿಗೆ ಸಾಹಿತ್ಯದ ಅಗತ್ಯತೆ ಬಗ್ಗೆ ಶಾಲಾ ಮುಖ್ಯಶಿಕ್ಷಕರಾದ ಶ್ರೀ ಕುಮಾರ ಸ್ವಾಮಿ ಸರ್ ತಿಳಿಸಿದರು.ಸಾಹಿತ್ಯದ ರಚನೆಯಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಸಾಹಿತಿ ಶಿಕ್ಷಕಿಯವರಾದ ಶ್ರೀಮತಿ ಇಂದಿರಾ ಲೋಕೇಶ್ ತಿಳಿಸಿದರು.ಹಾಗೂ ಶಾಲೆಯ ಶಿಕ್ಷಕ ವರ್ಗ ಮತ್ತು ಶಾಲೆಯ ಎಲ್ಲಾ ಮಕ್ಕಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ಅತೀವ ಆಸಕ್ತಿಯಿಂದ ಕಾರ್ಯಾಗಾರವನ್ನು ಯಶಸ್ವಿಗೊಳಿಸಿದರು.
previous post
next post