ಎಲ್ಲಾ ಮಲ್ನಾಡ್ ಶಾಡೋ ನ್ಯೂಸ್ ಓದುಗರಿಗೆ ಹೊಸ ವರ್ಷದ ಶುಭಾಶಯಗಳು.
ನಮ್ಮ ನ್ಯೂಸ್ ಚಾನಲ್ ಗೆ 3 ಸಂವತ್ಸರಗಳು ತುಂಬಲು ಇನ್ನೇನು ಬಂದಿದೆ. ಇಷ್ಟು ವರ್ಷಗಳ ಕಾಲ ನಿಮ್ಮ ಪ್ರೋತ್ಸಾಹವಿಲ್ಲದೆ ನಾವು ಏನು ಮಾಡಲು ಸಾಧ್ಯವಿಲ್ಲ. ನನ್ನನ್ನು ಹಾಗು ನನ್ನ ಗುರುಗಳಾದ ವಸಂತ್ ರವರನ್ನು ನಿಮ್ಮ ಅಣ್ಣ ತಂಗಿಯಂತೆ ಹಾಗೆಯೇ ನಿಮ್ಮ ಮಗಳಾಗಿ ಎಲ್ಲರೂ ಸ್ವೀಕರಿಸಿ ಎಲ್ಲರೂ ನಮ್ಮ ವರದಿಯನ್ನು ನೋಡಿಕೊಂಡು ಬಂದಿದ್ದೀರಾ ಅದಕ್ಕೆ ನಿಮ್ಮ ಮಗಳಿಂದ , ತಂಗಿಯಿಂದ, ಅಕ್ಕನಿಂದ ನನ್ನ ಮನದಾಳದ ಧನ್ಯವಾದಗಳು.
ಹಲವಾರು ಜನ ಕರೆಗಳನ್ನು ಮಾಡಿದ್ದೀರಿ ವರದಿ ಕಳುಹಿಸಲು , ಹಾಗು ವರದಿಗಳನ್ನು ಟೈಪ್ ಮಾಡಿ ಕೂಡ ಹಾಕಿದ್ದೀರಿ ನಿಮ್ಮ ಸುದ್ದಿಗಳಿಗೆ ಯಾವುದೇ ಬೆಲೆ ನೀಡಿಲ್ಲ ಎಂದು ಅನ್ಯತಾ ಭಾವಿಸಬೇಡಿ. ಕೆಲವೊಮ್ಮೆ ನೋಡದೆ ಉಳಿದು ಬಿತ್ತಿರುತ್ತದೆ.
ಪ್ರತಿ ಗ್ರಾಮಗಳಿಂದಲೂ , ಸರ್ಕಾರಿ ಕಚೇರಿಗಳಿಂದಲು, ಸಕಲೇಶಪುರ, ಆಲೂರು, ಕಟ್ಟಾಯ ಜನತೆಯಿಂದಲು, ಸಂಘ ಸಂಸ್ಥೆಗಳಿಂದ, ಸಂಘಟನೆಗಳಿಂದ ಸಿಕ್ಕ ಪ್ರೋತ್ಸಾಹ ನಮಗೆ ಅಪಾರ ನಮ್ಮನ್ನು ನೀವು ನಿಮ್ಮ ಮನೆಯವರಂತೆ ಸ್ವೀಕರಿಸಿದ್ದಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು.
ಇಲ್ಲಿ ಕೇವಲ ನಾವು ವರದಿಗಾರರಾಗಿ ಓದುಗರನ್ನೇ ವರದಿಗಾರರನ್ನಾಗಿ ಮಾಡಿದ ತೃಪ್ತಿ ನಮಗಿದೆ. ಗ್ರಾಮದ ಎಲ್ಲೋ ಮೂಲೆಯಲ್ಲಿ ಕುಳಿತಿದ್ದ ಪ್ರತಿಭೆಯನ್ನು ಹೊರಕ್ಕೆ ತೆಗೆದೆವು, ಎಷ್ಟೊ ಗ್ರಾಮದ ಸಮಸ್ಯೆಗಳು ಮುಟ್ಟದ ಅಧಿಕಾರಿಗಳಿಗೆ ಮುಟ್ಟಿಸಿದೆವು, ಪ್ರತಿ ಗ್ರಾಮದ ಆಗುಹೋಗುಗಳನ್ನು ಇಡಿ ಸಕಲೇಶಪುರದ ಅಧಿಕಾರಿಗಳಿಗೆ, ಗ್ರಾಮ ಪಂಚಾಯಿತಿಗೆ ತಿಳಿಯುವಂತೆ ಮಾಡಿದೆವು ಈ ಕಾರ್ಯದಲ್ಲಿ ನಾಮ ತೃಪ್ತಿಯು ಸಹ ಇದೆ.
ಇದರಲ್ಲಿ ನಿಮ್ಮೆಲ್ಲರ ಸಹಕಾರಕ್ಕೆ ನನ್ನ ಧನ್ಯವಾದಗಳು .
ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು
ಇಂತಿ ನಿಮ್ಮ ರಾಣಿ ಪ್ರಸನ್ನ
next post