ವರದಿ ರಾಣಿ ಪ್ರಸನ್ನ
ಹಾಸನ ನಗರದ ಜಿಲ್ಲಾ ಪಂಚಾಯಿತಿ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಾಸನಾಂಬ ಜಾತ್ರಾ ಮಹೋತ್ಸವ -2024 ರ ಹಿನ್ನೆಲೆ ಹಾಸನಾಂಬ ಆ್ಯಪ್ ಹಾಗೂ ಪೋಸ್ಟರ್ ಬಿಡುಗಡೆ ಮತ್ತು ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಹಿಂದಿನ ವರ್ಷಕ್ಕಿಂತ ಈ ವರ್ಷ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದ್ದು ಬರುವ ಭಕ್ತಾಧಿಗಳಿಗೆ ಯಾವುದೇ ಅವಘಡ ಸಂಭವಿಸದ ಹಾಗೆ ಸೂಕ್ತ ಕಟ್ಟುನಿಟ್ಟಿನ ಕ್ರಮ ಹಾಗೂ ಮೂಲ ಸೌಕರ್ಯ ಒದಗಿಸುವುದೊಂದಿಗೆ ಯಾವುದೇ ಲೋಪದೋಷ ಕಂಡುಬರದ ಹಾಗೆ ಕಳಜಿ ವಹಿಸಿಲು ಜಿಲ್ಲಾಡಳಿತಕ್ಕೆ ಅದೇಶಿಸಿದೆ ಹಾಗೂ ಇದೇ ಸಮಯದಲ್ಲಿ ಕಂದಾಯ ಇಲಾಖೆಯಿಂದ ಉತ್ತಮ ಕಂದಾಯ ಅಧಿಕಾರಿಗಳಾಗಿ ಪ್ರಶಸ್ತಿ ಪುರಸ್ಕೃತರಾದವರನ್ನು ಸನ್ಮಾನಿಸಿದೆನು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು kn ರಾಜಣ್ಣ ಅವರು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಜನಪ್ರಿಯ ಶಾಸಕರು km ಶಿವಲಿಂಗೇಗೌಡರು ಲೋಕಸಭಾ ಸದಸ್ಯರಾದ ಶ್ರೇಯಸ್ ಎಂ.ಪಟೇಲ್ ರವರು, ಹಾಸನ ನಗರ ಶಾಸಕರಾದ ಸ್ವರೂಪ್ ಪ್ರಕಾಶ್ ರವರು, ನಗರಸಭೆ ಅಧ್ಯಕ್ಷರಾದ ಚಂದ್ರಶೇಖರ್ ರವರು, ಜಿಲ್ಲಾಧಿಕಾರಿಯಾದ ಸತ್ಯಭಾಮರವರು, ಸಿ.ಇ.ಓ ಪೂರ್ಣಿಮರವರು, ಪೋಲೀಸ್ ಅಧೀಕ್ಷಕರಾದ ಮೊಹಮ್ಮದ್ ಸುಜೀತಾರವರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
