ವರದಿ ರಾಣಿ ಪ್ರಸನ್ನ
ಸಕಲೇಶಪುರದ ಬಾಗೆ ಸಮುದಾಯ ಭವನದಲ್ಲಿ ಕಾಫಿ ಬೆಳೆಗಾರರ ಸಮಾವೇಶ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಚ್ ಡಿ ಪಿ ಎ ಅಧ್ಯಕ್ಷರಾದ ಪರಮೇಶ್ ಮಾತನಾಡಿ ಕಾರ್ಯಕ್ರಮ ಮಾಡುವುದೇ ಬೆಳೆಗಾರರಿಗಾಗಿ, ಆದರೆ ಯಾವುದೇ ಕಾರ್ಯಕ್ರಮಕ್ಕೂ ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಬರದಿರುವುದು ನಿಜವಾಗಿಯೂ ಬೇಸರ ತಂದಿದೆ ಎಂದು ತಿಳಿಸಿದ್ದಾರೆ.
ಕೆ ಜಿ ಎಫ್ ಅಧ್ಯಕ್ಷ ಡಾ ಮೋಹನ್ ಕುಮಾರ್ ಮಾತನಾಡಿ ನಮ್ಮ ದೇಶದ ಕಾಫಿಯನ್ನು ಇಂಟರ್ನ್ಯಾಷನಲ್ ಮಟ್ಟದಲ್ಲಿ ಬ್ರಾಂಡ್ ಮಾಡಬೇಕು ಎಂದು ಮಾಡುತ್ತಿರುವ ಹೋರಾಟ ಬಗ್ಗೆ ತಿಳಿಸಿದರು.
ಭೂಮಿಯ ವೈಪರೀತ್ಯಕ್ಕೆ ಅಕಾಲಿಕ ಮಳೆಯ ಸಮಸ್ಯೆಗೆ ನಾವೇ ಕಾರಣ.
ಅತಿಯಾದ ಪ್ಲಾಸ್ಟಿಕ್ , ಪೇಪರ್ ಕಪ್, ಪ್ಲಾಸ್ಟಿಕ್ ತಟ್ಟೆ, ಬಿಸ್ಲೇರಿ ಬಾಟಲ್ ಗಾಳನ್ನ ಬಳಸುವುದರಿಂದ ಪರಿಸರ ಮಾಲಿನ್ಯವಾಗುತ್ತಿದ್ದು ಇದರಿಂದ ವೈಪರಿತ್ಯವಾಗುತ್ತಿದ್ದು ಅಕಾಲಿಕ ಮಳೆ ಆಗುತ್ತಿದ್ದು ಹೆಚ್ಚಾದ ಅತಿವೃಷ್ಟಿ ಉಂಟಾಗಿ ಬೆಳೆಯುವ ಎಲ್ಲಾ ಬೆಳೆಗಳ ಮೇಲೆ ಪರಿಣಾಮ. ಬೀರುತ್ತಿರುವುದರಿಂದ ಕಾಫಿ ಬೆಳೆಯಲ್ಲಿ ವೈಪರಿತ್ಯವಾಗುತ್ತಿದ್ದು ಕಾಫಿ ಬೆಳೆ ಇಳಿಕೆ ಪ್ರಮಾಣವಾಗುತ್ತಿದೆ. ಕಸ ವಿಲೇವಾರಿ ಸಮಸ್ಯೆ, ಕಸವನ್ನು ಹಾಕದೆ ಇರುವ ರೀತಿ ಹಸಿ ಕಸವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಸವಿಸ್ತಾರವಾಗಿ ಹೆಚ್ ಎಸ್ ಚಂದ್ರಶೇಖರ್ ತಿಳಿಸಿದ್ದಾರೆ
ಬಾಳು ಬಸವಣ್ಣನವರು ಮಾತನಾಡಿ ಎಲ್ಲಾ ಹೋಬಳಿ ಮಟ್ಟದಲ್ಲಿ ಇರುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಜಾಗದ ಸಮಸ್ಯೆ ಬಗೆಹರಿದ ನಂತರ ನಾವು ಕಟ್ಟಡವನ್ನು ನಿರ್ಮಿಸಿಯೇ ನಿರ್ಮಿಸುತ್ತೇವೆ ಎಂದು ಹೇಳಿದರು ಹಾಗೆಯೇ ಅಸ್ಸಾಂ ಹಾಗು ಬಾಂಗ್ಲಾದೇಶದಿಂದ ವಲಸೆ ಬಂದು ಕೆಲಸಕ್ಕೆ ಸೇರಿತ್ತಿರುವವರ ಕುರಿತು ಪ್ರತಿ ಬೆಳೆಗಾರರು ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಹೇಳಿದರು.
ಸಕಲೇಶಪುರದ ಬಾಗೆ ಗ್ರಾಮದಲ್ಲಿ ದಿನಾಂಕ 24 -10 -24ನೇ ಗುರುವಾರ ಬೆಳಿಗ್ಗೆ 10 ಘಂಟೆಗೆ ಬಾಗೆ ಸಮುದಾಯ ಭವನದಲ್ಲಿ ಬೆಳೆಗಾರರ ಸಭೆ ಏರ್ಪಡಿಸಲಾಗಿತ್ತು.
ಕಾಫಿ ಬೆಳೆಗಾರರು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹವಾಮಾನ ವೈಪರಿತ್ಯ, ಕಾಫಿ ಉದುರುವಿಕೆ, ಕೊಳೆ ರೋಗ, ಕಾರ್ಮಿಕರ ಅಭಾವ, ಬೆಲೆ ಹೆಚ್ಚಳ, ಒತ್ತುವರಿ ಸಮಸ್ಯೆ, ವನ್ಯ ಮೃಗಗಳ ದಾಳಿ ಇನ್ನು ಮುಂತಾದ ಕಾರಣಗಳಿಂದ ಕಾಫಿ ಉದ್ಯಮವು ಸಂಕಷ್ಟದಲ್ಲಿರುವುದರ ಕುರಿತು ಕಾಫಿ ಬೆಳೆಗಾರರ ಮಾಲೀಕರಿಂದ ಹಾಗು ಬೆಳಗೋಡು ಹೋಬಳಿ ಕಾಫಿ ಬೆಳೆಗಾರರ ಸಂಘ ಇವರಿಂದ ಚರ್ಚಿಸಲಾಯಿತು. ಕಾಫಿ ಬೆಳೆಗಾರರು ಎಲ್ಲರೂ ಸಂಘಟಿತರಾಗಿ ಪರಿಹಾರ ಕಂಡುಕೊಳ್ಳಲು ಸಭೆಯನ್ನು ಕರೆಯಲಾಗಿತ್ತು.
ಯಾವುದೇ ಸಮಸ್ಯೆಯನ್ನು ಕೇವಲ ತಡೆಹಿಡಿಯುವಿಕೆ ಮತ್ತು ಬೀಸೋ ದೊಣ್ಣೆಯಿಂದ ತಪಿಸಿಕೊಳ್ಳುವುದನ್ನು ಮಾಡಿಕೊಳ್ಳುತ್ತಿದ್ದೇವೆ ಇದನ್ನು ಕಾರ್ಯಾಘಟಕ್ಕೆ ತರುತ್ತಿಲ್ಲ ಎಂದು ಹೇಳಿದ ಮೋಹನ್ ಕುಮಾರ್ ಅಧ್ಯಕ್ಷರು ಕೆಜಿಎಫ್ ಇವ್ರು ಸಭೆಯಲ್ಲಿ ಮಾತನಾಡುತ್ತಾ ರೈತರ ಸರ್ಫೇಸಿ ಸಮಸ್ಯೆ, ಆನೆ ಸಮಸ್ಯೆ, ಒತ್ತುವರಿ ಸಮಸ್ಯೆಗಳಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ನಾವು ಅರಣ್ಯ ಇಲಾಖೆ ಸಚಿವರೊಂದಿಗೆ ಚರ್ಚಿಸಿದ್ದೇವೆ, ಕೇಂದ್ರ ಸರ್ಕಾರದವರೆಗು ಇದರ ಕುರಿತು ಚರ್ಚೆ ನಡೆಸಿದ್ದೇವೆ. ನಮ್ಮ ದೇಶದ ಕಾಫಿಯನ್ನು ಇಂಟರ್ನ್ಯಾಷನಲ್ ಬ್ರಾಂಡ್ ಮಾಡಿಕೊಡುವಂತೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದೇವೆ.
ಹಾಸನ ಬೆಳೆಗಾರರ ಸಂಘ ಬೆಳಗೋಡು ವತಿಯಿಂದ ಶ್ರೀ ಸೋಮೇಶ್ ಅವರು ಮಾಸಿಕ ವರದಿಯನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಕೆ ಜಿ ಎಪ್ ಮಾಜಿ ಅಧ್ಯಕ್ಷರಾದ ಹೆಚ್ ಟಿ ಮೋಹನ್ ಕುಮಾರ್ ಅಧ್ಯಕ್ಷರು ಕೆಜಿಎಫ್ , ರಾಮಕೃಷ್ಣ ಅಧ್ಯಕ್ಷರು ಬೆಳಗೋಡು ಹೋಬಳಿ ಬೆಳೆಗಾರರ ಸಂಘ ,ಎ ಎಸ್ ಪರಮೇಶ ಅಧ್ಯಕ್ಷರು ಹೆಚ್ ಡಿ ಪಿ ಎ ,ಮಂಜುನಾಥ ಶೆಟ್ಟಿ ಉಪಾಧ್ಯಕ್ಷರು ಹೆಚ್ ಡಿ ಪಿ ಏ,
ವೈಸಿ ರುದ್ರಪ್ಪ ಕಾಫಿ ಬೆಳೆಗಾರರು ಎಡೆಹಳ್ಳಿ ರಾಮಕೃಷ್ಣ ಜಯಶಂಕರ್ , ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು , ಜಯಶಂಕರ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ರೇಖಾ ಗೋಪಿನಾಥ್ ಗ್ರಾಮc ಪಂಚಾಯಿತಿ ಅಧ್ಯಕ್ಷರು, ಪಿ ಡಿ ಓ ಚಿನ್ನಸ್ವಾಮಿ, ಹೆಗ್ಗೋವೇ ಪುಟ್ಟರಾಜು, ಕಾಂಗ್ರೆಸ್ ಮುಖಂಡರು ದೊಡ್ಡದಿಣ್ಣೆ ಮಂಜಪ್ಪ, ಗ್ರಾಮದ ಹಿರಿಯರಾದ ಪುಟ್ಟಯ್ಯ ನವರು ಉಪಸ್ಥಿತರಿದ್ದರು.
ವಂದನಾರ್ಪಣೆಯನ್ನು ಬಾಗೆ ಗ್ರಾಮದ ತಿಮ್ಮಪ್ಪನವರು, ಹಾಗು ಕಾರ್ಯಕ್ರಮದ ವಿಶ್ಲೇಷತಯನ್ನು ಹೆಗ್ಗೋವೆ ಪುಟ್ಟರಾಜು ಅವರು ನೆರೆವೇರಿಸಿಕೊಟ್ಟರು.