ವರದಿ ರಾಣಿ ಪ್ರಸನ್ನ
ಸಕಲೇಶಪುರದ ಕೆಂದನಮನೆ ಶಾಲೆಯಲ್ಲಿ ಸಂಭ್ರಮ ಶನಿವಾರದ ಕಾರ್ಯಕ್ರಮವಾದ ಪೌಷ್ಟಿಕತೆ ಸ್ವಾಸ್ಥ್ಯ ಮತ್ತು ಶುಚಿತ್ವದ ಬಗ್ಗೆ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕ್ರಮ ಪೋಷಣ್ ಅಭಿಯಾನ ಕಾರ್ಯ ಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮಕ್ಕೆ ಆರೋಗ್ಯಾಧಿಕಾರಿಗಳಾದ ಶ್ರೀಮತಿ ಡಾ ಸವಿತರವರಿಂದ ಆರೋಗ್ಯವಾಗಿರಲು ಏನೇನು ಸೇವಿಸಬೇಕು, ಹಣ್ಣು ಹಂಪಲು, ತರಕಾರಿ , ಕಾಳು , ಸೊಪ್ಪು ಎಲ್ಲವನ್ನು ಸೇವಿಸಿದರೆ ಮಾತ್ರ ಅಪೌಷ್ಟಿಕತೆಯಿಂದ ದೂರವಾಗಲು ಸಾಧ್ಯ ಈ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡುತ್ತಿದೆ.
ಪೋಷಣ್ ಕಿಟ್ ಹಾಗು ಗ್ರಾಮ ಪಂಚಾಯಿತಿ ವತಿಯಿಂದ ಬಾಗೆ ಪಂಚಾಯತಿಗೆ ಒಳಪಡುವ 8 ಅಂಗನವಾಡಿಗೆ ಸೊಳ್ಳೆಪರದೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಬಾಗೆ ಪಂಚಾಯಿತಿ ಅಧ್ಯಕ್ಷರಾದ ರೇಖಾಗೋಪಿನಾಥ್ ಮಾಜಿ ಅಧ್ಯಕ್ಷರಾದ ಜಯಶಂಕರ್ ದೊಡ್ಡ ದೀಣ್ಣೆ ಹಾಗೂ ಮಾಜಿ ಅಧ್ಯಕ್ಷರಾದ ರಾಕೇಶ್ ಪೂಜಾರಿ ಬಾಗೆ ಹಾಗೂ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ರಾಘವೇಂದ್ರ ಹಾಗೂ ಶಾಲೆಯ ಮುಖ್ಯಶಿಕ್ಷಕರಾದ ಗೌಡೇಗೌಡರವರು, ಅಂಗನವಾಡಿಯ ಕಾರ್ಯಕರ್ತೆಯರಾದ ಸುಗುಣರವರು, ಆಶಾಕಾರ್ಯಕರ್ತೆಯರು ಬಾಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ಶ್ರೀಯುತ ಚಿನ್ನಸ್ವಾಮಿ ಯವರು ಹಾಗೂ ಮುಮಿನ ಕೆ ಬಿ ,ಜ್ಞಾನೇಶ್ವರಿರವರು ಆರೋಗ್ಯ ಮಹಿಳಾ ಸಹಾಕಿಯವರು ಹಾಗೂ ಗ್ರಾಮಸ್ಥರು ಭಾಗವಹಿಸಿ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು
previous post
next post