ರಾಜ್ಯಾದ್ಯಂತ ಆಸ್ತಿ ಸೇರಿದಂತೆ ಎಲ್ಲ ನೋಂದಣಿ ಹಠಾತ್ ಸ್ಥಗಿತ
ಶಿಕ್ಷೆ ವಿಧಿಸುವ ಕಾಯ್ದೆಗೆ ಸಬ್ ರಿಜಿಸ್ಟ್ರಾರ್‌ಗಳ ಪ್ರತಿಭಟನೆ
ಸಾರ್ವಜನಿಕರಿಗೆ ಮತ್ತೊಂದು ಶಾಕ್ ಎದುರಾಗಿದೆ ಏಕಾಏಕಿ ಸೋಮವಾರ ಬೆಳಗ್ಗೆಯಿಂದಲೆ ರಾಜ್ಯಾದ್ಯಂತ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ಸೇರಿದಂತೆ ಎಲ್ಲಾ ರೀತಿಯ ದಸ್ತಾವೇಜುಗಳ ರಾಜ್ಯದಲ್ಲಿ ನೋಂದಣಿ ಸ್ಥಗಿತಗೊಳಿಸಲಾಗಿದೆ.
ಸಾರ್ವಜನಿಕರ ಗಮನಕ್ಕೆ ರಿಜಿಸ್ಟ್ರೇಷನ್ 1908ರಲ್ಲಿ 22 ಬಿ ಹೊಸ ಸೆಕ್ಷನ್ ಪರಿಚಯಿಸಿರುದರಿಂದ ಕೇಂದ್ರ ಕಚೇರಿಯಿಂದ ಸರಿಯಾದ ನಿರ್ದೇಶನಗಳು ಬರುವವರೆಗೂ ದಸ್ತಾವೇಜುಗಳ ಪರಿಶೀಲನೆಯನ್ನು /ನೋಂದಣಿಯನ್ನು ಅನಿರ್ದಿಷ್ಟಾವಧಿವರೆಗೂ ಮುಂದೂಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಈ ಖಾತಗೊಂಡಲವೇ ಬಗೆಹರಿದಿಲ್ಲ ಅದರ ಮುನ್ನವೇ ಇದರ ಶಾಕ್ ಕೂಡ ನೀಡಿದ್ದಾರೆ.
ರಾಜ್ಯದಲ್ಲಿ ಕೇಂದ್ರದ ನೋಂದಣಿ ಕಾಯಿದೆ-1908 ಗೆ ತಿದ್ದುಪಡಿ ತರುವ ಕರ್ನಾಟಕ ನೋಂದಣಿ ತಿದ್ದುಪಡಿ ಕಾಯಿದೆ 2023ಕ್ಕೆ ರಾಷ್ಟ್ರಪತಿಗಳು ಅ.8 ರಂದು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರ ಆ.19 ರಂದು ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.
ಶಿಕ್ಷೆ ವಿಧಿಸುವ ಕಾಯ್ದೆಯ ವಿವರ ಈ ರೀತಿ ಇರುತ್ತದೆ.
ಹೊಸ ನೋಂದಣಿ ತಿದ್ದುಪಡಿ ಕಾಯ್ದೆಯಲ್ಲಿ ನಕಲಿ ದಾಖಲೆ ಆಧರಿಸಿದ ನೋಂದಣಿಗೆ ಕಡಿವಾಣ ಹಾಕಿರುವುದು .
ನಕಲಿ ದಸ್ತಾವೇಜು ಆಧರಿಸಿದ ನೋಂದಣಿ ಮಾಡಿರುವ ಸಬ್ ರಿಜಿಸ್ಟ್ರಾರ್ ಮೇಲೆ 3ವರ್ಷ ಜೈಲು ಶಿಕ್ಷೆ.
ಈ ನಿಯಮಕ್ಕೆ ಸರ್ಕಾರದಿಂದ ಉಪನೋಂದಣಾಧಿಕಾರಿಗಳು ಸ್ಪಷ್ಟನೆ ಕೇಳಿ ನೋಂದಣಿ ಸ್ಥಗಿತಗೊಳಿಸಿದ್ದಾರೆ.
previous post