Blog

ಸಕಲೇಶಪುರದಲ್ಲಿ 1 ರೂಪಾಯಿಗೆ ಟೀ

ಸಕಲೇಶಪುರದಲ್ಲಿ 1 ರೂಪಾಯಿಗೆ ಟೀ ಮಾರುವ ಕಾರ್ಯವನ್ನು ಮಲೆನಾಡು ರಕ್ಷಣಾ ಸೇನೆ ಮಾಡಲಿದೆ.

ನಾಡಿದ್ದು ಸೋಮವಾರ ಸಕಲೇಶಪುರದಲ್ಲಿ 1 ರೂಪಾಯಿ ದರದಲ್ಲಿ ಟೀ ಮಾರುವ ಮೂಲಕ ಪುರಸಭೆಯ ಆಡಳಿತ ವ್ಯವಸ್ಥೆಯನ್ನು ಈ ಸಂಘಟನೆ ಅಣಕಿಸಲಿದೆ.

ಸಕಲೇಶಪುರದ ಉದ್ಯಮಿಯೊಬ್ಬರು ಸಕಲೇಶಪುರದ ಹೆಬ್ಬಾಗಿಲಿಗೆ ಅದರಲ್ಲೂ ನಡು ರಸ್ತೆಗೆ ಬೋರ್ಡ್ ಒಂದನ್ನು ಅವರ ಉದ್ಯಮದ ಬೋರ್ಡನ್ನು ಯಾವುದೇ ರೀತಿಯ ಇಲಾಖೆಗಳಿಂದ ಅನುಮತಿ ಪಡೆಯದೆ ಅಕ್ರಮವಾಗಿ ಹಾಕಿಕೊಂಡಿರುತ್ತಾರೆ.

ಇದು ನಡು ರಸ್ತೆಯಲ್ಲಿ ಇರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ತೊಂದರೆ ಉಂಟಾಗುತ್ತದೆ ಎಂದು ಪುರಸಭಾ ಮುಖ್ಯ ಅಧಿಕಾರಿಗಳಿಗೆ ತಿಳಿಸಿದರು ಸಹ ತೆರವುಗೊಳಿಸುತ್ತಿಲ್ಲ ಹಾಗೂ ಪುರಸಭಾ ಮುಖ್ಯ ಅಧಿಕಾರಿಗಳು ಈ ಖಾಸಗಿ ವ್ಯಕ್ತಿಯ ಪರವಾಗಿ ನಿಂತಿದ್ದು ಬೋರ್ಡನ್ನು ತೆರವುಗೊಳಿಸಲು ಆಗುವುದಿಲ್ಲ ಅವರು ಅನುಮತಿ ಪಡೆದುಕೊಳ್ಳುತ್ತೇವೆ ಎಂದು ನಮಗೆ ತಿಳಿಸಿದ್ದಾರೆ.

ಹಾಗಾಗಿ ನಾವು ಅದನ್ನು ತೆರವುಗೊಳಿಸುವುದಿಲ್ಲ ಎಂದು ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ನಮಗೆ ಪುರಸಭಾ ಮುಖ್ಯ ಅಧಿಕಾರಿಗಳ ಮೇಲೆ ಅನುಮಾನ ಉಂಟಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ದಯವಿಟ್ಟು ನ್ಯಾಯ ಸಮ್ಮತವಾಗಿ ಸಾರ್ವಜನಿಕರಿಗೆ ತಿರುಗಾಡಲು ಮತ್ತು ವಾಹನಗಳಿಗೆ ಅಡಚಣೆ ಆಗದ ರೀತಿಯಲ್ಲಿ ನಡು ರಸ್ತೆಯಲ್ಲಿ ಅನಧಿಕೃತವಾಗಿ ಹಾಕಿಕೊಂಡು ಮಾನ್ಯ ತಾಲೂಕಿನ ಎಸಿ ಅವರು ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.

ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವುಗಳು ಅಂದರೆ ಮಲೆನಾಡು ರಕ್ಷಣಾ ಸೇನೆ ಮತ್ತು ವಿವಿಧ ಸಂಘಟನೆಗಳು ಈಗಾಗಲೇ ಬೋರ್ಡ್ ಇರುವ ಸ್ಥಳದಲ್ಲಿ ಟೀ ಅಂಗಡಿಯನ್ನು ಇಟ್ಟು ಸಾರ್ವಜನಿಕರಿಗೆ ಒಂದು ರೂಪಾಯಿಗೆ ಒಂದು ಟೀ ಮಾರುವ ಮುಖಾಂತರ ವಿಭಿನ್ನವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮಲೆನಾಡು ರಕ್ಷಣಾ ಸೇನೆಯ ರಾಜ್ಯಧ್ಯಕ್ಷರಾದ ಸಾಗರ್ ಜಾನೇಕೆರೆ ತಿಳಿಸಿದ್ದಾರೆ

Related posts

ಯಸಳೂರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

Bimba Prakashana

ಇಂದು ಗ್ರಾಮ ಆಡಳಿತ ಅಧಿಕಾರಿಗಳಿಂದ ಮುಷ್ಕರ ಆರಂಭ

Bimba Prakashana

ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More