Blog

ಡಾ. ಬಾಬಾ ಸಾಹೇಬ್ ಅಂಬೇಡ್ಕರ್

ಓದುತ್ತಾ ಹೋದರೆ ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಕಣ್ಣಲ್ಲಿ ಕಣ್ಣೀರು ಬೀಳುತ್ತಿರುತ್ತದೆ.*

ಬಾಬಾಸಾಹೇಬ್ ಅಂಬೇಡ್ಕರ್ ರಾಮಾಭಾಯಿ ದಂಪತಿಗಳ ದುರಂತ ಬದುಕಿನಲ್ಲಿ ನಿರಂತರವಾಗಿ ಕಾಡಿದ ಪುತ್ರ ಶೋಕ.*

   ಅಂಬೇಡ್ಕರರು ಅಮೇರಿಕಕ್ಕೆ ತೆರಳಿದ ಕೆಲವೇ ದಿನಗಳಲ್ಲಿ ಅವರ ಮೊದಲ ಮಗ ಗಂಗಾಧರ ಜನಿಸುತ್ತಾನೆ. ದುರಂತ ಎಂದರೆ ಜನಿಸಿದ ಕೆಲವೇ ದಿನಗಳಲ್ಲಿ ಆತ ತೀರಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಅದರ ನೋವು ಕೂಡ ಕೊಂಚವೂ ಅಂಬೇಡ್ಕರರಿಗೆ ಗೊತ್ತಾಗದ ಹಾಗೆ ನೋಡಿಕೊಳ್ಳುತ್ತಾರೆ.ತ್ಯಾಗಮಯಿ ರಮಾಬಾಯಿಯವರು.
  ರಮಾಬಾಯಿಯವರು ಅಂಬೇಡ್ಕರರು ಅಮೇರಿಕದಿಂದ
ವಾಪಸ್ ಬಂದ ನಂತರವಾದರೂ (1917)
ತನ್ನ ಕುಟುಂಬದ ಕಷ್ಟ ಪರಿಹಾರಗೊಳ್ಳಬಹುದು
ಎಂದು ನಿರೀಕ್ಷಿಸಿದ್ದರು.ಅದು ನೆರವೇರಿತು ಕೂಡ.
ಆದರೆ ಸಾಮಾಜಿಕ- ಹೋರಾಟಗಳಲ್ಲಿ ಬಾಬಾಸಾಹೇಬರು ಅದಾಗಲೇ ತೊಡಗಿಸಿಕೊಂಡಿದ್ದರಿಂದ
ಸಂಸಾರದ ಹೊಣೆ ರಮಾಬಾಯಿಯವರ ಮೇಲೆಯೇ ಬಿದ್ದಿತು. ಇದನ್ನೂ ಸಂಸಾರದ ಹೊಣೆ ರಮಾ…
ಬರೆಯುತ್ತ ಅಂಬೇಡ್ಕರರು “ತಾನು ವಿದೇಶಕ್ಕೆ ತೆರಳಿದ ಸಂದರ್ಭದಲ್ಲಿ ರಾಮು ಇಡೀ ಕುಟುಂಬದ ಭಾರ ಹೊತ್ತುಕೊಂಡಳು. ವಿದೇಶದಿಂದ ಹಿಂದಿರುಗಿದ ನಂತರವೂ ಹಣಕಾಸು ತೊಂದರೆಯಾದಾಗ ಆಗಲು ಅಷ್ಟೇ ಆಕೆ ತನ್ನ ತಲೆಯ ಮೇಲೆ ಸೆಗಣಿಯ ಬುಟ್ಟಿ ಹೊತ್ತು ಸಂಸಾರ ನಡೆಸಲು ಹಿಂದೆ ಬೀಳಲಿಲ್ಲ” ಎನ್ನುತ್ತಾರೆ.


   ಈ ಸಂದರ್ಭದಲ್ಲಿಯೇ ರಮಾಬಾಯಿ ಮತ್ತು ಅಂಬೇಡ್ಕರ್
ದಂಪತಿಗಳಿಗೆ ಅವರ ಎರಡನೇ ಮಗ ಯಶವಂತ ರಾವ್ ಜನಿಸುತ್ತಾನೆ. ಬಹುಶಃ ಯಶವಂತ ರಾವ್ ಅಷ್ಟೇ ಅವರಿಗೆ ಉಳಿಯುವ ಏಕೈಕ ಮಗ. ಮಗ ಹುಟ್ಟಿದ ಈ ಸಮಯದಲ್ಲೂ ಸಮಾಜದ ಪುಣ್ಯವೋ ಅಥವಾ ರಮಾಬಾಯಿಯವರ ತ್ಯಾಗವೋ ಮತ್ತೆ ಅಂಬೇಡ್ಕರರು ಲಂಡನ್ ಗೆ ತಮ್ಮ ಉನ್ನತ ಶಿಕ್ಷಣ ಪೂರೈಸಲು ತೆರಳುತ್ತಾರೆ. ಈಗಲೂ ಅಷ್ಟೇ ರಮಾಬಾಯಿಯವರು ಮತ್ತೆ ತಮ್ಮ ಪತಿಯನ್ನು ಬೀಳ್ಕೊಟ್ಟು ಸಂಸಾರದ ಭಾರ ಹೊತ್ತುಕೊಳ್ಳುತ್ತಾರೆ. ಮುಂದೆಯೂ ಅಷ್ಟೇ ಲಂಡನ್ ನಿಂದ ಡಿಎಸ್ಪಿ ಮತ್ತು ಬಾರ್ – ಅಟ್-ಲಾ ಮುಗಿಸಿ ಅಂಬೇಡ್ಕರರು ವಾಪಸ್ ಬಂದಾಗ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡ ಅವರಿಗೆ ಕೊಂಚವೂ ಹಿನ್ನಡೆಯಾಗದಂತೆ ರಮಾಬಾಯಿಯವರು ಜೊತೆಜೊತೆಯಾಗಿ ನಿಲ್ಲುತ್ತಾರೆ. ಇದನ್ನೂ ನೆನೆಸಿಕೊಳ್ಳುತ್ತ ಅಂಬೇಡ್ಕರರು ತನ್ನ ಹೋರಾಟದ ಕಾರಣ ತಾನು ದಿನದ 24
ಗಂಟೆಗಳಲ್ಲಿ ಅರ್ಧ ಗಂಟೆ ಕೂಡ ಆಕೆಯ ಜೊತೆ ಕಳೆಯಲಾಗುತ್ತಿರಲಿಲ್ಲ. ಆದರೂ ಹೊಂದಿಕೊಂಡು ಹೋಗುತ್ತಿದ್ದ, ತನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದ, ಗೌರವಿಸುತ್ತಿದ್ದ ರಮಾ” ಎನ್ನುತ್ತಾರೆ.
ಮಕ್ಕಳ ಅಗಲಿಕೆಯ ದುಃಖ ಯಶವಂತ ರಾವ್ ನಂತರ
ಅಂಬೇಡ್ಕರ್ – ರಮಾಬಾಯಿ ದಂಪತಿಗಳಿಗೆ ರಮೇಶ್, ಇಂದು, ರಾಜರತ್ನ ಎಂಬ ಮೂವರು ಮಕ್ಕಳು ಜನಿಸುತ್ತಾರೆ. ದುರಂತ ಆ ಮೂವರು ಮಕ್ಕಳು ಕೂಡ ಹೆಚ್ಚು ದಿನ
ಬದುಕುವುದಿಲ್ಲ. ಅದರಲ್ಲೂ ಕೊನೆಯ ಮಗ ರಾಜರತ್ನನನಂತೂ ರಮಾಬಾಯಿ ಮತ್ತು ಅಂಬೇಡ್ಕರ್ ದಂಪತಿಗಳು ಬಹಳ ಹಚ್ಚಿಕೊಂಡಿದ್ದರು. ಹೇಗೆಂದರೆ
ರಾಜರತ್ನನ ಸಾವಿನ ಸಂದರ್ಭದಲ್ಲಿ ತಮ್ಮ
ಸ್ನೇಹಿತರಿಗೆ ಪತ್ರದ ಮೂಲಕ ಅಂಬೇಡ್ಕರರು ಹೇಳುವುದು “ನಾನು ಮತ್ತು ರಾಮು ನಮ್ಮ ಕೊನೆಯ ಮಗನ ಸಾವಿನ ಈ ಸಂಕಟದಿಂದ ಹೊರ ಬರಲು ಸಾದ್ಯವಾಗುತ್ತಿಲ್ಲ. ಈ ನಮ್ಮ ಕೈಗಳು ಮೂರು ಗಂಡು ಮತ್ತು ಒಂದು ಹೆಣ್ಣು ಮಗುವಿನ ಶವ ಸಂಸ್ಕಾರ ಮಾಡಿವೆ. ಅವರ ಸಾವುಗಳನ್ನು ನೆನಪಿಸಿಕೊಂಡಾಗ ನಮ್ಮ ಹೃದಯ ನೋವಿನಿಂದ
ಚೀರುತ್ತದೆ. ಅವರ ಭವಿಷ್ಯದ ಬಗ್ಗೆ ನಾವು ಕಟ್ಟಿಕೊಂಡಿದ್ದ ಕನಸುಗಳು! ಆದರೆ ಈಗ? ವಿಷಾದದ ಮೋಡ ನಮ್ಮ ಬದುಕಲ್ಲಿ ಕವಿದಿದೆ. ಉಪ್ಪಿಲ್ಲದ ಊಟದಂತಾಗಿದೆ ನಮ್ಮ ಜೀವನ. ಅದರಲ್ಲೂ ನನ್ನ ಕೊನೆಯ ಮಗ ಆತ
ತುಂಬಾ ವಿಶೇಷವಾಗಿದ್ದ. ಅಂತಹ ಮಗನನ್ನು ನಾವು ಮತ್ತೆ ಪಡೆಯಲು ಸಾಧ್ಯವೇ? ಆತನ ಸಾವು ನಮ್ಮ ಬದುಕನ್ನು ಮುಳ್ಳಿನ ತೋಟವಾಗಿಸಿದೆ.
  ಇಂತೆಲ್ಲ ಮಕ್ಕಳ ಸಾವಿನ ನಂತರ ರಮಾಬಾಯಿಯವರು ವಯಕ್ತಿಕವಾಗಿ ಮಾನಸಿಕವಾಗಿ ಜರ್ಝರಿತರಾಗುತ್ತಾರೆ. ಯಾವ ಮಟ್ಟಿಗೆಂದರೆ ಅವರ ಆರೋಗ್ಯ ತೀರಾ ಹದಗೆಡುತ್ತದೆ. ಈ ಸಂದರ್ಭದಲ್ಲಿ ಅಂಬೇಡ್ಕರರು ವಾತಾವರಣ ಬದಲಾದರೆ ರಮಾಬಾಯಿಯವರ
ಆರೋಗ್ಯ ಸುಧಾರಿಸಬಹುದು ಎಂದು ಅವರನ್ನು ನಮ್ಮ ಕರ್ನಾಟಕದ ಧಾರವಾಡದಲ್ಲಿ ತಾವೇ ಕಟ್ಟಿದ್ದ ಅನಾಥಾಶ್ರಮಕ್ಕೆ ಕರೆದುಕೊಂಡು ಬರುತ್ತಾರೆ. ತಿಂಗಳುಗಳ ಕಾಲ ಇಲ್ಲಿರುತ್ತಾರೆ. ಈ ಸಂದರ್ಭದಲ್ಲಿ ರಮಾಬಾಯಿಯವರು ಅಲ್ಲಿದ್ದ ಅನಾಥ ಮಕ್ಕಳಿಗೆ ಅಡುಗೆ ಮಾಡಲು ಆಹಾರದ ಕೊರತೆಯಾದಾಗ ತಮ್ಮ ಒಡವೆ ಮಾರಿ ಆಹಾರ ಪದಾರ್ಥಗಳನ್ನು ಖರೀದಿಸಿ ಊಟ ಹಾಕುತ್ತಾರೆ. ಆದರೆ ಮಾತ್ರ ರಮಾಬಾಯಿಯವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣುವುದಿಲ್ಲ.
ಅಂತಿಮವಾಗಿ 1935 ಮೇ 7 ರಂದು ಮಾತೆ ರಮಾಬಾಯಿಯವರು ದಾದಾಸಾಹೇಬರನ್ನು ಬಿಟ್ಟು ಅಗಲುತ್ತಾರೆ.(ಬಾಬಾಸಾಹೇಬ್ ಎಂದೇ ಹೇಳಬೇಕು.
ಯಾಕೆಂದರೆ ರಮಾದಾಯಿಯವರು ದಾದಾಸಾಹೇಬರನ್ನು ಕರೆಯುತ್ತಿದ್ದದ್ದು ಸದಾ “ಸಾಹೇಬ್” ಎಂದೇ!)
ರಮಾದಾಯಿಯವರ ನಿಧನದ ಆ ದಿನ ಅತೀವ ದುಃಖಕ್ಕೊಳಗಾಗುವ ಅಂಬೇಡ್ಕರ್ ಅವರು ಶವ ಸಂಸ್ಕಾರ
ಮೆರವಣಿಗೆ ಮುಗಿಸಿ ಮನೆಗೆ ಬಂದು ಕೊಠಡಿಯೊಂದರಲ್ಲಿ ತಮ್ಮನ್ನ ತಾವು ಬಂಧಿಯಾಗಿಸಿಕೊಳ್ಳುತ್ತಾರೆ. ಪುಟ್ಟ
ಮಗುವಿನ ರೀತಿ ಸತತ ಒಂದು ವಾರಗಳ ಕಾಲ ಅಳುತ್ತಾರೆ.
  ಬಹುಶಃ ಬಾಬಾಸಾಹೇಬರಿಗಿಂತ ಮಿಗಿಲಾದ ಪದಗಳು ಮಾತೆ ರಮಾಬಾಯಿಯವರ ಬದುಕನ್ನು ವಿವರಿಸಲು ಸಾಧ್ಯವೇ ಇಲ್ಲ. ಖಂಡಿತ, ಅಂತಹ ತ್ಯಾಗಮಯಿ ತಾಯಿಯ ಬದುಕು ಪ್ರತಿಯೊಬ್ಬರಿಗೂ ಆದರ್ಶ.

ಯಡೇಹಳ್ಳಿ”ಆರ್”ಮಂಜುನಾಥ್.

Related posts

ಗುಂಡ್ಯ ಬಳಿ ಸರಕಾರಿ ಬಸ್ ಹಾಗೂ ಲಾರಿ ಮಧ್ಯೆ ಅಪಘಾತ

Bimba Prakashana

ಹೇಮಾವತಿಗೆ ಗಂಗಾರತಿ

Bimba Prakashana

ಸೋಲೂರು ಬಳಿ ಸರಕಾರಿ ಬಸ್ ಡಿಕ್ಕಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More