ಕರ್ನಾಟಕ ಛಾಯಾಗ್ರಾಹಕ ಅಸೋಸಿಯೇಷನ್ ವತಿಯಿಂದ ಛಾಯಾಸಾಧಕ ಪ್ರಶಸ್ತಿಗೆ ಸಕಲೇಶಪುರದ ಮಧು ಸ್ಟುಡಿಯೋ ಮತ್ತು ಮೂರ್ತಿ ಸ್ಟುಡಿಯೋ ಮಾಲೀಕರು ಭಾಜನರಾಗಿದ್ದಾರೆ
ಬೆಂಗಳೂರಿನ ಅರಮನೆ ಮೈದಾನ ತ್ರಿಪುರ ನಿವಾಸಿನಿ,ಯಲ್ಲಿ ನಡೆದ ಕರ್ನಾಟಕ ಛಾಯಾಗ್ರಾಹಕರ ಅಸೋಸಿಯೇಷನ್ ಬೆಂಗಳೂರು ಇವರ ವತಿಯಿಂದ ನಡೆದ ಕರ್ನಾಟಕ ಡಿಜಿ ಇಮೇಜ್ ಎಕ್ಸಿಬಿಷನ್ ನಲ್ಲಿ ಹಾಸನ ಜಿಲ್ಲಾ ಛಾಯಾ ಸಾಧಕ ಪ್ರಶಸ್ತಿಗೆ ಸಕಲೇಶಪುರದ ಮೂರ್ತಿ ಸ್ಟುಡಿಯೋ ಮಾಲೀಕರಾದ ಕರ್ಣಾಕರ್ ಮತ್ತು ಛಾಯೆಶ್ರೀ ಪ್ರಶಸ್ತಿಗೆ ಮಧು ಸ್ಟುಡಿಯೋ ಮಾಲೀಕರಾದ ಮಧು ರವರಿಗೆ ಛಾಯಾಗ್ರಹಕರ ಅಸೋಸಿಯೇಷನ್ ವತಿಯಿಂದ ಪ್ರಶಸ್ತಿಗೆ ಭಾಜನರಾಗಿ ಸನ್ಮಾನಿಸಲಾಯಿತು.
ಈ ವೇಳೆ ಮಧು ಅವರು ಮಾತನಾಡಿ ಛಾಯಾಗ್ರಕರ ವೃತ್ತಿ ಎಂದರೆ ಕೇವಲ ಫೋಟೋ ತೆಗೆಯುವುದು ಮಾತ್ರವಲ್ಲ ಪ್ರತಿಯೊಬ್ಬ ಮನುಷ್ಯನ ನೆನಪುಗಳನ್ನು ಮರುಕಳಿಸುವಂತಹ ವೃತ್ತಿಯಾಗಿದೆ ಈ ವೃತ್ತಿಯಲ್ಲಿ ನಾವು ಸೇವೆ ಸಲ್ಲಿಸುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಕರ್ನಾಟಕ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದಂತಹ ನಾಗೇಶ್ , ಹಾಸನ ಛಾಯಾಗ್ರಾಹಕ ಸಂಘದ ಅಧ್ಯಕ್ಷರಾದಂತಹ ಸ್ವಾಮಿ , ಸಕಲೇಶಪುರ ಛಾಯಾಗ್ರಹಕದ ಸಂಘದ ಅಧ್ಯಕ್ಷರಾದಂತಹ ವಿನು, ಕಾರ್ಯದರ್ಶಿಯಾದಂತಹ ರಘು, ಹಾಗೂ ಶ್ರೀನಿವಾಸ್ ,ಪ್ರಕಾಶ್, ಪ್ರದೀಪ್, ಮತ್ತು ಕಿರಣ್ ಹೆತ್ತೂರು, ಮಧು ಹೆತ್ತೂರು, ಮುಂತಾದವರು ಉಪಸ್ಥಿತಿಯರಿದ್ದರು.
previous post