ಆಲೂರು.ತಾಲೂಕಿನ ಕೆ. ಹೊಸಕೋಟೆ ಹೋಬಳಿಯ ಕೃಷಿ ಪತ್ತಿನ ಸಹಕಾರ ಸಂಘದ ಕಿಶೋರ್ ಅವರ ನೇತೃತ್ವದ 11 ಅಭ್ಯರ್ಥಿಗಳು ವಿಜಯಶಾಲಿಯಾದ ಸಂದರ್ಭದಲ್ಲಿ ಅವರೆಲ್ಲ ಒಗ್ಗೂಡಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕಬ್ಬಿನಲ್ಲಿ ಜಗದೀಶ್ ಅವರನ್ನು ಭೇಟಿ ಭೇಟಿ ಮಾಡಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಿಶೋರ್ ಅವರು ಮಾತನಾಡಿ ನಮ್ಮ ಕೆ ಹೊಸಕೋಟೆ ಹೋಬಳಿಯ ಸಹಕಾರಿ ಕ್ಷೇತ್ರಕ್ಕೆ ಷೇರುದಾರರ ಹಿತದೃಷ್ಟಿಯಿಂದ ಹಾಗೂ ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಇಂದು ನಾವು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕಬ್ಬಿನಹಳ್ಳಿ ಜಗದೀಶ್ ಅವರನ್ನು ಭೇಟಿ ಮಾಡಿ ನಮ್ಮ ಕೆ ಹೊಸಕೋಟೆ ಹೋಬಳಿಯ ಸಹಕಾರಿ ಸಂಘಕ್ಕೆ ಹೆಚ್ಚಿನ ಅನುದಾನ ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೊಸಕೋಟೆ ಹೋಬಳಿಯ ಎಲ್ಲಾ ಸಹಕಾರಿ ಕ್ಷೇತ್ರದ ಎಲ್ಲ ವಿಜಯಶಾಲಿ ಸದಸ್ಯರು. ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ರುದ್ರೇಶ್ ಕಾಡ್ಲೂರು. ಕರವೇ ತಾಲೂಕು ಅಧ್ಯಕ್ಷ ನಟರಾಜ್ ಇನ್ನಿತರರು ಇದ್ದರು.
previous post