Blog

ಬೇಲೂರು ಚನ್ನ ಕೇಶವ ದೇವಸ್ಥಾನದಲ್ಲಿ ಅನ್ಯ ಧರ್ಮದವರಿಗೆ ಅನುಮತಿ ನೀಡಬಾರದು – ಆಗ್ರಹ

ಬೇಲೂರು ಚನ್ನಕೇಶವ ದೇವಸ್ಥಾನದ ರಥೋತ್ಸವದಲ್ಲಿ  ಮುಸ್ಲಿಮರಿಗೆ ವ್ಯಾಪಾರಕ್ಕೆ ಅನುಮತಿ ನೀಡಬಾರದು ಎಂಬ ಆಗ್ರಹ
    “ಧರ್ಮ ದಂಗಲ್”

ಬೇಲೂರು ಚನ್ನಕೇಶವ ದೇವಸ್ಥಾನದ ರಥೋತ್ಸವದಲ್ಲಿ ಖುರಾನ್ ಪಠಣ ಮಾಡಲು ಅವಕಾಶ ನೀಡಬಾರದು ಎಂದು ರಾಮದೂತ ಹಿಂದೂ ಮಹಾಗಣಪತಿ ಸಮಿತಿ ಸಕಲೇಶಪುರ ಮತ್ತು ಚನ್ನಕೇಶವ ಸ್ವಾಮಿ ದೇವಸ್ಥಾನ  ಹಿತರಕ್ಷಣಾ ವೇದಿಕೆ ವತಿಯಿಂದ ಮನವಿ ಮಾಡಿದರು

   ದಿನಾಂಕ:-10.04.2025 ರಂದು ಚನ್ನಕೇಶವ ಸ್ವಾಮಿ ದೇವಸ್ಥಾನದಲ್ಲಿ ನಡಿಯುವ ಜಾತ್ರಾ ಮಹೋತ್ಸವದ ಘಳಿಗೆ ಥೇರು
                 ಬೇಲೂರು ತಾಲ್ಲೂಕು ಹೊಯ್ಸಳರ ಕಾಲದ ಐತಿಹಾಸಿಕ ಚನ್ನಕೇಶವ ದೇವಸ್ಥಾನದಲ್ಲಿ ಹಿಂದೂ ಪದ್ದತಿಯಂತೆ ನಡಿಯುವ ರಥೊತ್ಸವದಲ್ಲಿ ಲಕ್ಷಾಂತರ ಹಿಂದೂ ಭಕ್ತರು ಬಂದು ಪ್ರಾರ್ಥನೆ ಮಾಡಿ ತಮ್ಮ ಇಷ್ಟಾರ್ಥಗಳನ್ನು ಚನ್ನಕೇಶವನಲ್ಲಿ ಬೇಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.
    ಈ ಮದ್ಯದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಮುಸ್ಲಿಂ ಖಾಜಿ ಯನ್ನ ಕರೆಸಿ ಖುರಾನ್ ಪಠಣ ಮಾಡಿಸಿ ಹಿಂದೂ ದೇವರನ್ನ ಅಪಮಾನ ಮಾಡುತ್ತಿರೋದು ಕೋಟ್ಯಂತರ ಚನ್ನಕೇಶವ ದೇವರ ಭಕ್ತರ ಮನಸ್ಸಿಗೆ ಘಾಸಿಯುಂಟಾಗುತ್ತಿದೆ. ಎಂದು ಪ್ತತಿಭಟನಕರಾರು ಆಗ್ರಹಿಸಿದರು
       ಹಿಂದೂ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಬೇಲೂರಿನ ಚನ್ನಕೇಶವ ದೇವಾಲಯದ ಮ್ಯಾನ್ಯುಲ್ ನಲ್ಲೂ ಕೂಡ ಮೇಲ್ಕಂಡ ಯಾವುದೇ ಪಠಣದ ಉಲ್ಲೇಖವಿಲ್ಲ. ಈ ಖುರಾನಾ ಪಠಣ ಕಾನೂನು ವಿರುದ್ಧವಾಗಿದ್ದು. ಹಿಂದೂ ಭಾವನೆಗಳಿಗೆ ಗೌರವ ನೀಡಿ ದಿನಾಂಕ 10.04.25 ರಂದು ನಡಿಯುವ ಚನ್ನಕೇಶವ ದೇವಸ್ಥಾನದಲ್ಲಿ ಜರಗುವ ರಥೊತ್ಸವದಲ್ಲಿ ಕುರಾನ್ ಪಠಣಕ್ಕೆ ಅವಕಾಶ ನೀಡಬಾರದು ಎಂದು ಈ ಮನವಿ ಮಾಡಿದರು ಪ್ರತಿಭಟನಾಕಾರರು.,
       ಚನ್ನಕೇಶವ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದಾಗಿದ್ದು ನಡಿಯುವ ಜಾತ್ರಮಹೋತ್ಸವದಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಚನ್ನಕೇಶವ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
     ಈ ಮಧ್ಯೆ ಮಾತಾಡಿದ ಹಿಂದೂ ಮುಖಂಡ ರಘು ಸಕಲೇಶಪುರ ಮಾತನಾಡಿ ಮುಜರಾಯಿ ನಿಯಮಾನುಸಾರ ಯಾವದೇ ಹಿಂದುಯೇತರ ವ್ಯಾಪಾರಸ್ಥರು ಮುಜರಾಯಿ ದೇವಸ್ಥಾನದ ಆವರಣ ಜಾತ್ರೆಯಲ್ಲಿ ವ್ಯಾಪಾರ ವಹಿವಾಟು ಮಾಡಬಾರದು ಎಂಬ ನಿಯಮವಿದ್ದು ಮುಸ್ಲಿಮರು ವ್ಯಾಪಾರ ಮಾಡುವಾಗ ಉಗುಳುವುದು ರಾಸಾಯನಿಕ ಪದಾರ್ಥ ಬಳಸಿ ಹಿಂದುಗಳಿಗೆ ಕೊಡುವುದು ನಿರಂತರ ನಡಿಯುತಿದ್ದು ಈ ಬಗ್ಗೆ ಜನಜಾಗೃತಿ ಅವ್ಯಶ್ಯವಿದ್ದು ವ್ಯಾಪಾರಕ್ಕೆ ವಿರೋಧವಿದೆ ಎಂದು ತಿಳಿಸಿದ್ದಾರೆ

     ಈ ಸಂದರ್ಭದಲ್ಲಿ  ಹಿಂದೂ ಮುಖಂಡ ರಘು ಸಕಲೇಶಪುರ ಬೇಲೂರಿನ ಮಂಜು, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಮೋಹನ್,ರಾಜೇಶ್, ಧನುಷ್
ಸಕಲೇಶಪುರದ ಸುಪ್ರೀತ್, ಮಹೇಶ್ ಉಪಸ್ಥಿತಿ ಇದ್ದರು

Related posts

ವೀಳ್ಯದೆಲೆ ಅಲಂಕಾರ

Bimba Prakashana

ಶ್ರೀಮತಿ ಪುಷ್ಪಾವತಿ ನಿಧನ

Bimba Prakashana

ತಹಸೀಲ್ದಾರ್ ಮೇಘನಾರಿಗೆ ಬೀಳ್ಕೊಡುಗೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More