Blog

ತಹಸೀಲ್ದಾರ್ ಮೇಲೆ ಭ್ರಷ್ಟಾಚಾರ ಆರೋಪ

ವರದಿ ರಾಣಿ ಪ್ರಸನ್ನ

ಸಕಲೇಶಪುರದ  ತಹಶೀಲ್ದಾರ್ ಮೇಘನಾ ಹಾಗೂ ದೇವಸ್ಥಾನದ ವ್ಯವಸ್ಥಾಪನ ಭ್ರಷ್ಟಾಚಾರದಲ್ಲಿ  ದೇವಸ್ಥಾನ ಸಮಿತಿಯ ಸಂಚಾಲಕ ಮಹೇಶ್ ವಿರುದ್ಧ ಉಪವಿಭಾಗಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ರಾಮಧೂತ ಗಣಪತಿಯ ಅಧ್ಯಕ್ಷರು  ಮಂಜುನಾಥ್ ,ಶಿವುಜಿಪ್ಪಿ ಹಾಗು ಸಂಗಡಿಗರು ಪತ್ರಿಕಾ ಹೇಳಿಕೆ ನೀಡಿದ್ದಾರೆ

ರಾಮದೂತ ಗಣಪತಿಯ ಅಧ್ಯಕ್ಷ ಮಂಜುನಾಥ್ ಕಬ್ಬಿನಗದ್ದೆ ಮಾತನಾಡಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸದೆ ಎಸಿ ಇರುವ ಕಛೇರಿಯಲ್ಲಿ ಕುಳಿತು : ಅಂದಾಜಿನ ಮೂಲಕ ಸಹಿಮಾಡಿ ಪರಿಹಾರವನ್ನು ನೀಡಿದ್ದಾರೆ, ಸಕಲೇಶ್ವರ ಸ್ವಾಮಿ ರಥೋತ್ಸವದ ಒಳಗೆ ಮಹೇಶ್ ಮೇಲೆ ಪ್ರಕರಣ ದಾಖಲು ಮಾಡದೆ ಮತ್ತು ವ್ಯವಸ್ಥಾಪನ ಸಮಿತಿಯ ಸಂಚಾಲಕ ಹುದ್ದೆಯಿಂದ ತೆರವು ಗೊಳಿಸದಿದ್ದರೆ ರಥೋತ್ಸವ ವೇಳೆ ತಹಶಿಲ್ದಾ‌ರ್ ಮತ್ತು ಮಹೇಶ್ ವಿರುದ್ದ ಉಗ್ರ ಪ್ರತಿಭಟನೆ ಮಾಡುತ್ತೆವೆ ಎಂದು ಹೇಳಿದ್ದಾರೆ

ಶಿವು ಜಿಪ್ಪಿ ಯವರು ಮಾತನಾಡಿ  ಸಕಲೇಶಪುರದ  ತಹಶೀಲ್ದಾರ್ ಮೇಘನಾ ಹಾಗೂ ದೇವಸ್ಥಾನದ ವ್ಯವಸ್ಥಾಪನ ಭ್ರಷ್ಟಾಚಾರದಲ್ಲಿ  ದೇವಸ್ಥಾನ ಸಮಿತಿಯ ಸಂಚಾಲಕ ಮಹೇಶ್ ವಿರುದ್ಧ ಉಪವಿಭಾಗಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕೈಗೊಳ್ಳದಿದ್ದರೆ ಸಕಲೇಶ್ವರಸ್ವಾಮಿ ರಥೋತ್ಸವ ಸಮಯದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸಕಲೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವಕ್ಕೆ  ಸಂಬಂಧಿಸಿದಂತೆ ವ್ಯವಸ್ಥಾಪನ ಸಮಿತಿಯ ಸಂಚಾಲಕ ಮಹೇಶ್ ಶಿಷ್ಟಾಚಾರ ಉಲ್ಲಂಘಿಸಿ ತಹಶಿಲ್ದಾರರ
ಮತ್ತು ಉಪವಿಭಾಗಾಧಿಕಾರಿಗಳ ಹೆಸರಿನಲ್ಲಿ ಸಹಿ ಹಾಕಿರುವ ಪೋಸ್ಟ್‌ನ್ನು ಸಾಮಾಜಿಕ ಜಾಲ  ತಾಣದಲ್ಲಿ ಹರಿದಾಡಿರುವ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದು ಗಡಿ ದೇವಸ್ಥಾನದ ಬ್ರಹ್ಮ ಕಳಸೋತ್ಸವ ಮಾಡಲು ಹಲವಾರು ಬಾರಿ ಹಾಕಿದ ಅರ್ಜಿ ತಿರಸ್ಕರಿಸುತ್ತಿರುವುದು ಹಾಗೂ 94 ಸಿ ಗೆ ಸಂಬಂಧಪಟ್ಟಂತೆ ಫಲಾನುಭವಿಗಳು ಸೂಕ್ತ ದಾಖಲೆಯನ್ನು ನೀಡಿರುವ ವ್ಯಕ್ತಿಗಳಿಗೆ ಹಕ್ಕು ಪತ್ರ ನೀಡಲು  ತಹಶಿಲ್ದಾರ್ ಮೇಘನಾ ವಿಫಲರಾಗಿದ್ದಾರೆ ಎಂದು ಆರೋಪಿಸಿದರು

ನಮ್ಮ ಸಮಿತಿಯ ವತಿಯಿಂದ ಸಕಲೇಶ್ವರ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಮಹೇಶ್ ರವರು ಬಹುಕೋಟಿ ಹೆಚ್ ಪಿ ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿ ಇವರ ವಿರುದ್ಧ ತಹಶೀಲ್ದಾರ್ ಮತ್ತು  ಉಪವಿಭಾಗಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ವ್ಯವಸ್ಥಾಪನಾ
ಸಂಚಾಲಕ ಹುದ್ದೆಯಿಂದ ಬಿಡುಗಡೆ  ಮಾಡಲು ಮನವಿ ಮಾಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ತಹಶಿಲ್ದಾರರ ನಡೆ ಕೆಲವು ಅನುಮಾನಗಳಿಗೆ ಕಾರಣ ಆಗಿದೆ ಮತ್ತು ಬಿ ಜೆ ಪಿ ಮುಖಂಡರೊಬ್ಬರ ಖಾತೆ ಮಾಡಿ ಕೊಡಲು ಹತ್ತು ಸಾವಿರ ಲಂಚವನ್ನು ಪಡೆದ ತಹಶಿಲ್ದಾರರು ತಮ್ಮ ಅಣತಿಯಂತೆ ಕಸಬಾ ರೆವಿನ್ಯೂ ಇನ್ಸ್‌ಪೆಕ್ಟರ್ ಖಾತೆ ಮಾಡಿರುತ್ತಾರೆ ಹಾಗೂ ಸೆಪ್ಟೆಂಬರ್ 21 ರಂದು ಯಾವುದೇ ಸಭೆ ನಡೆಸದೆ ವ್ಯವಸ್ಥಾಪನ ಸಮಿತಿಯ ಮಹೇಶ್ ಸಾಮಾಜಿಕ ಜಾಲತಾಣದಲ್ಲಿ ಅಧಿಕಾರಿಗಳ ಪೋಟೋ ದುರುಪಯೋಗ ಮಾಡಿಕೊಂಡ ವ್ಯಕ್ತಿಯ ಬಗ್ಗೆ ಕೇಸುದಾಖಲಿಸದೆ ಇರುವುದು ಅನುಮಾನಕ್ಕೆ ಕಾರಣ ಆಗಿದೆ ಎಂದು ಶಿವು ಜಿಪ್ಪಿಯವರು ಎಳೆಎಳೆಯಾಗಿ ತಹಶೀಲ್ದಾರ್ ಮೇಘನ ವಿರುದ್ಧ ಛಾತಿ ಬೀಸಿದ್ದಾರೆ.



ಪತ್ರಿಕಾಗೋಷ್ಠಿಯಲ್ಲಿ ಜತೀನ್, ದಿಲೀಪ್ ಕೌಡಳ್ಳಿ ಉಪಸ್ಥಿತರಿದ್ದರು

Related posts

ವಳಲ ಹಳ್ಳಿ ಗ್ರಾಮ ಸಭೆಯಲ್ಲಿ ಭಾಗವಹಿಸಿ

Bimba Prakashana

ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಜಯ ಲಕ್ಷ್ಮಿ

Bimba Prakashana

1 ರೂ ಗೆ ಬಿಸಿ ಬಿಸಿ ಟೀ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More