ಇಂದು ಬೆಳಿಗ್ಗೆ ಸಕಲೇಶಪುರದಲ್ಲಿ ಮಲೆನಾಡು ರಕ್ಷಣ ಸೇನೆಯ ಕಾರ್ಯಕರ್ತರು 1 ರೂ ನಲ್ಲಿ ಟೀ ನೀಡುವ ಮೂಲಕ ಒಂದು ವಿನೂತನ ಪ್ರತಿಭಟನೆ ಹಮ್ಮಿ ಕೊಂಡಿದ್ದರು.
ಸಕಲೇಶಪುರದ ಹೇಮಾವತಿ ನದಿಯ ಬಳಿ ಉದ್ಯಮಿಯೋರ್ವರು ಸರಕಾರಿ ಜಾಗವನ್ನು ಕಬಳಿಸಲು ಹುನ್ನಾರ ನಡೆಸುವ ಬಗ್ಗೆ ಮಲೆನಾಡು ರಕ್ಷಣಾ ಸೇನೆ ಆಕ್ರೋಶ ವ್ಯಕ್ತ ಪಡಿಸಿ ವಿನೂತನ ಪ್ರತಿಭಟನೆ ಮಾಡಿತ್ತು.
ಜನರಿಗೆ 1 ರೂ ನಲ್ಲಿ ಟೀ ನೀಡತೊಡಗಿದಾಗ ಶಾಸಕ ಸಿಮೆಂಟ್ ಮಂಜುನಾಥ್ ರವರು ಈ ಸಮಸ್ಯೆ ಪರಿಹಾರ ಮಾಡುವುದಾಗಿ ಭರವಸೆ ನೀಡಿದ್ದರಿಂದ ಬೋರ್ಡನ್ನು ಕಾನೂನು ರೀತಿಯಲ್ಲಿ ನಾನು ತೆರವುಗೊಳಿಸಿಕೊಡುತ್ತೇನೆ ಎಂದು ಹೇಳಿದ್ದರಿಂದ ಹೋರಾಟವನ್ನು ಈ ದಿನ ತಾತ್ಕಾಲಿಕವಾಗಿ ಕೈ ಬಿಡಲಾಯಿತು.
ಮುಂದಿನ ದಿನಗಳಲ್ಲಿ ಬೋರ್ಡ್ ತೆರವುಗೊಳಿಸದೆ ಇದ್ದರೆ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಡಾ. ಸಾಗರ್ ಜಾನೇ ಕೆರೆ ತಿಳಿಸಿದ್ದಾರೆ
previous post
next post