*ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಕಲೇಶಪುರಕ್ಕೆ ನನ್ನ ಅನಂತ ಅನಂತ ಅಭಿನಂದನೆಗಳು.*
2016ನೇ ಇಸ್ವಿಯಿಂದ ಯಡೇಹಳ್ಳಿ ಆರ್ ಮಂಜುನಾಥ್ ಹೆಸರು ಗೌರವ ಪುರಸ್ಕಾರಕ್ಕೆ ಪ್ರಸ್ತಾಪವಾಗುತ್ತಿತ್ತು.
ರಾಜಕೀಯ ಕನ್ನಡಕದಿಂದ ನೋಡಿ ತಿರಸ್ಕರಿಸಲಾಗುತ್ತಿತ್ತು, ರಾಜಕೀಯ ಕನ್ನಡಕ ತೆರೆದು ಆಯ್ಕೆ ಮಾಡಿದ ಆಯ್ಕೆ ಸಮಿತಿಗೆ ಮತ್ತೊಮ್ಮೆ ಅಭಿನಂದನೆಗಳು,, ಯಾಕೆಂದರೆ ಚಿತ್ರದುರ್ಗ, ಆಲೂರು, ಹಾಸನ, ತುಮಕೂರು, ಬೆಂಗಳೂರು, ನವದೆಹಲಿಯಲ್ಲಿ ನನ್ನನ್ನು ಗುರುತಿಸಿ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಗೌರವ ಸ್ವೀಕರಿಸಿದ್ದೆ… ಎಲ್ಲೇ ಪ್ರಶಸ್ತಿ ಸ್ವೀಕರಿಸಿದರು ನನ್ನ ತಾಲೂಕಿನಲ್ಲಿ ನಾನೊಂದು ರೀತಿ ಹಿತ್ತಲ ಗಿಡ ಮದ್ದಲ್ಲ ಎಂಬಂತಾದೆನಲ್ಲ ಅನ್ನಿಸುತ್ತಿತ್ತು.
ಎಲ್ಲೇ ಗೌರವ ಸಿಕ್ಕರು ನನ್ನ ಮನೆಯಲ್ಲಿ, ನನ್ನ ಊರಿನಲ್ಲಿ, ನನ್ನ ತಾಲೂಕಿನಲ್ಲಿ ಮೊದಲು ಗೌರವ ಸಿಕ್ಕಾಗ ಆಗುವ ಸಂಭ್ರಮ ಅದು ಹೇಳತಿರದು ಬೆಲೆ ಕಟ್ಟಲಾಗದು…. ಪುರಸ್ಕಾರಕ್ಕೆ ಆಯ್ಕೆ ಮಾಡಿದ, ಕ್ಷೇತ್ರದ ಜನಪ್ರಿಯ ಶಾಸಕರು ಆತ್ಮೀಯರು ಆದ ಎಸ್ ಮಂಜುನಾಥ್ ರವರು, ಉಪವಿಭಾಗಾಧಿಕಾರಿಗಳಾದ ಡಾ. ಶೃತಿ ಎಂ ಕೆ ರವರು, ರಾಷ್ಟ್ರೀಯ ಹಬ್ಬಗಳ ಆಚರಣೆ ಅಧ್ಯಕ್ಷರು ತಹಸಿಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಆದಂತ ಶ್ರೀಮತಿ ಮೇಘನ ಜಿ ರವರು, ಆರಕ್ಷಕ ಉಪ ಅಧೀಕ್ಷಕರಾದ ಶ್ರೀ ಪ್ರಮೋದ್ ಕುಮಾರ್ ಬಿ ರವರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಂಗಾಧರಂ ಜಿ ಡಿ ರವರು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪುಷ್ಪ ಎಸ್ ರವರು, ಪುರಸಭಾ ಮುಖ್ಯ ಅಧಿಕಾರಿಗಳಾದ ಟಿ ಸಿ ಮಹೇಶ್ವರಪ್ಪನವರು, ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಂತ ಶ್ರೀಮತಿ ಶಾರದಾ ಗುರುಮೂರ್ತಿ ಅವರಿಗೆ ನನ್ನ ಹೃದಯ ತುಂಬಿದ ಅಭಿನಂದನೆಗಳು..ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನನ್ನುೊಟ್ಟಿಗೆ ಗೌರವ ಪುರಸ್ಕಾರಕ್ಕೆ ಒಳಪಟ್ಟ ಎಲ್ಲರಿಗೂ ಕೂಡ ಶುಭಾಶಯಗಳು ಅವರ ಜೊತೆ ನಾನೂ ಕೂಡ ಗೌರವ ಸ್ವೀಕರಿಸಿರುವುದು ಹೆಮ್ಮೆ ಅನಿಸುತ್ತಿದೆ.
ಶರಣು ಶರಣಾರ್ಥಿಗಳು
ಯಡೇಹಳ್ಳಿ ಆರ್ ಮಂಜುನಾಥ್.
previous post
next post