Blog

ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಮಹೋತ್ಸವ

ಸಕಲೇಶಪುರದ
ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಸಕಲೇಶಪುರದಲ್ಲಿ ಡಿಸೆಂಬರ್ 11 ರಿಂದ 13ರವರೆಗೆ ಹನುಮ ಜಯಂತಿ ಪ್ರಯುಕ್ತ ಮೂರು ದಿನಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಜೈ ಮಾರುತಿ ದೇವರಾಜ್ ತಿಳಿಸಿದರು.

ಹನುಮ ಜಯಂತಿ ಮಹೋತ್ಸವ

11 (ಬುಧವಾರ):
ಬೆಳಗ್ಗೆ 9 ಗಂಟೆಯಿಂದ ವಿಶೇಷ ಅಭಿಷೇಕ, ಅಲಂಕಾರ, ಹೋಮ ಮತ್ತು ಸಂಜೆ 6 ಗಂಟೆಯವರೆಗೆ ಪ್ರಸಾದ ವಿನಿಯೋಗ.

12.(ಗುರುವಾರ):
ಬೆಳಿಗ್ಗೆ 10 ಗಂಟೆಗೆ ಧ್ವಜಾರೋಹಣ, ಶ್ರೀ ಮಹಾಗಣಪತಿ ಹೋಮ, ನವಗ್ರಹ ಹೋಮ, ಮಹಾಮಂಗಳಾರತಿ.
ಮಧ್ಯಾಹ್ನ ವಾಸವಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.

13. (ಶುಕ್ರವಾರ):
ಬೆಳಿಗ್ಗೆ 9 ಗಂಟೆಗೆ ಹೋಮ, ಮಹಾಮಂಗಳಾರತಿ ನಂತರ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ.
ಸಂಜೆ 6 ಗಂಟೆಗೆ ಬೆಳ್ಳಿ ರಥದೊಂದಿಗೆ 101 ಆಂಜನೇಯ ವೇಷದಾರಿಗಳ ಮೆರವಣಿಗೆ ಮತ್ತು ರಾಜಬೀದಿ ಉತ್ಸವ.


ಮುಖ್ಯ ಅತಿಥಿಗಳು:
ಶಾಸಕ ಶ್ರೀ ಸಿಮೆಂಟ್ ಮಂಜು, ಕಾಂಗ್ರೆಸ್ ಮುಖಂಡ ಶ್ರೀ ಮುರುಳಿ ಮೋಹನ್, ಬಿಜೆಪಿ ಮುಖಂಡ ಶ್ರೀ ಪುನೀತ್ ಬನ್ನಹಳ್ಳಿ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಿ.ಸೂ.:
ಹೋಮಕ್ಕೆ ಅಕ್ಕಿ, ಅರಿಶಿನ, ಕುಂಕುಮ, ಕೊಬ್ಬರಿ ಮತ್ತು ಇತರ ವಸ್ತುಗಳನ್ನು ತಂದು ನೀಡಲು ಭಕ್ತಾಧಿಗಳಿಗೆ ವಿನಂತಿಸಲಾಗಿದೆ.

ಭಕ್ತಾಧಿಗಳು ತನು-ಮನ-ಧನದೊಂದಿಗೆ ಭಾಗವಹಿಸಿ, ಶ್ರೀ ಆಂಜನೇಯ ಸ್ವಾಮಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸೇವಾ ಸಮಿತಿಯವರು ವಿನಂತಿಸಿದ್ದಾರೆ.

Related posts

ಸುಮನಾ ಜಯ ಪ್ರಕಾಶ್ ಗೆ ಡಾಕ್ಟರೇಟ್ ಪದವಿ

Bimba Prakashana

ಆಸ್ತಿ ಸೇರಿ ಎಲ್ಲಾ ನೋಂದಣಿ ಸ್ಥಗಿತ

Bimba Prakashana

ಸಕಲೇಶಪುರ ದೇವಾಲಯಕ್ಕೆ ಮಾಜಿ ಸಚಿವರ ಭೇಟಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More