ಕೌಡ
ಸಕಲೇಶಪುರ:- ಇಲ್ಲಿನ ಕೌಡಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಿದ್ದೇಶ್ವರ ಮತ್ತು ಶ್ರೀ ಬಸವಣ್ಣ ಹಾಗೂ ನಾಗದೇವತೆ ದೇವಸ್ಥಾನದಲ್ಲಿ ಬಹಳ ವಿಜೃಂಭಣೆಯಿಂದ ಚಂಪಾ ಷಷ್ಠಿ ಯನ್ನು ಆಚರಿಸಲಾಯಿತು.
ಗ್ರಾಮಸ್ಥರು ಹಾಗೂ ಸಾರ್ವಜನಿಕರ ಸಹಾಯದಿಂದ ಇಲ್ಲಿನ ದೇವಸ್ಥಾನದಲ್ಲಿ ಪ್ರತಿ ವರ್ಷವೂ ಚಂಪಾ ಸೃಷ್ಟಿಯನ್ನು ಆಚರಿಸಲಾಗುತ್ತದೆ. ದೇವಾಲಯಗಳನ್ನು ವಿದ್ಯುತ್ ದ್ವೀಪಾಲಂಕೃತ ಹಾಗೂ ಹೂವಿನ ಅಲಂಕಾರದೊಂದಿಗೆ ನಾಗ ಬನವನ್ನು ಸ್ಥಾಪಿಸಿ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿಯ ಮೂಲಕ ಬಹಳ ವಿಜೃಂಭಣೆಯಿಂದ ಪೂಜಾ ಕಾರ್ಯವನ್ನು ನೆರವೇರಿಸ ಲಾಯಿತು.
ವರ್ಷಕ್ಕೊಮ್ಮೆ ನಡೆಯುವ ಈ ಪೂಜಾ ಕಾರ್ಯಕ್ರಮಕ್ಕೆ ತಾಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ. ಯಾವುದಾದರೂ ದೋಷಗಳಿದ್ದರೆ ಈ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ದೋಷಗಳು ಪರಿಹಾರವಾಗುತ್ತದೆ ಎಂಬುದು ಇಲ್ಲಿನ ಜನರ ಮಾತು. ನೆರೆದಿದ್ದ ಸಾವಿರಾರು ಭಕ್ತಾದಿಗಳಿಗೆ ಮಧ್ಯಾಹ್ನದ ಪ್ರಸಾದವನ್ನು ಏರ್ಪಡಿಸಲಾಗಿತ್ತು. ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ
ದ್ದರಿಂದ ಸುಬ್ರಹ್ಮಣ್ಯ ಸೃಷ್ಟಿಯಲ್ಲಿ ಭಾಗಿಯಾದಷ್ಟು ಅನುಭವವಾಗುತ್ತದೆ ಎಂದು ಹೇಳುತ್ತಾರೆ.
ಈ ರೀತಿಯ ಅತ್ಯುತ್ತಮವಾದ ವ್ಯವಸ್ಥೆಯನ್ನು ಮಾಡಿದಂತಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರುಗಳು, ಅರ್ಚಕರು ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನು ಭಕ್ತಾದಿಗಳು ಶ್ಲಾಘಿಸಿದರು.


