ಕನ್ನಡ ಸಾಹಿತ್ಯ ಪರಿಷತ್ತು ಹಾನುಬಾ ಳು ಹೋಬಳಿ ಘಟಕದ ವತಿಯಿಂದ 26 ಅಕ್ಟೋಬರ್ ಶುಕ್ರವಾರ ಹಾನು ಬಾಳುವಿನ ಕೆ. ಪಿ. ಎಸ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಹಾನು
ಬಾಳುವಿನಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಬಂಧ ಸ್ಪರ್ಧೆ ಮತ್ತು ಗೀತಗಾಯನ ಸ್ಪರ್ಧೆ ಅತ್ಯಂತ ಯಶಸ್ವಿಯಾಗಿ ಜರುಗಿತು.
ಹಾನುಬಾಳು ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಹುರುಡಿಪ್ರೌಢ ಶಾಲೆ,, ಹಾನುಬಾಳು ಕೆ.ಪಿ.ಸ್ ಪ್ರೌಢ ಶಾಲೆ , ದೇವಾಲದಕೆರೆ ಪ್ರೌಢ ಶಾಲೆ,ಜ್ಞಾನ ಜ್ಯೋತಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದರು.ಹಾಗೆಯೇ ವಿದ್ಯಾನಿಧಿ ಶಾಲೆ, ಹುರುಡಿ ಹಿರಿಯ ಪ್ರಾಥಮಿಕ ಶಾಲೆ, ದೇವಾಲದ ಕೆರೆ ಶಾಲೆ, ಕೆಪಿಸ್ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕನ್ನಡ ಗೀತ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ವಿಜೇತ ವಿದ್ಯಾರ್ಥಿ ಗಳಿಗೆ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.ಹಾಗೆಯೇ ಭಾಗವಹಿಸಿದ ಪ್ರತಿ ವಿದ್ಯಾರ್ಥಿ ಗಳಿಗೂ ಪ್ರಶಸ್ತಿ ಪತ್ರ ನೀಡಲಾಯಿತು.ಒಟ್ಟು 32 ವಿದ್ಯಾರ್ಥಿ ಗಳು ಸ್ಪರ್ಧೆ ಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿಗಳು, ರಂಗ ಕರ್ಮಿಗಳು ಆದಂತಹ ಶ್ರೀಯುತ ಪ್ರಸಾದ್ ರಕ್ಷಿದಿ ಸರ್ ವಹಿಕೊಂಡಿದ್ದರು.. ಸಾಹಿತ್ಯ ಕಡೆಗೆ ತಮ್ಮ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು… ಹಾಗೆಯೇ ಮೂಡಿಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಹಾಗೂ ಹಾನುಬಾಳು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು ಆದಂತಹ ಶ್ರೀಮತಿ ಭಾಗ್ಯ ಲಕ್ಷ್ಮಣ್ ರವರು ಮುಖ್ಯ ಅತಿಥಿ ಯಾಗಿ ಆಗಮಿಸಿದ್ದರು ಇವರು ಮಾತನಾಡುತ್ತಾ ಇಂತಹ ವೇದಿಕೆಯನ್ನು ಮಕ್ಕಳು ಸಮರ್ಪಕ ವಾಗಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
Kps sdmc ಅಧ್ಯಕ್ಷರಾದ ಅರುಣ್ ರವರು, ಕೆಪಿಸ್ ಶಾಲೆಯ ಶಿಕ್ಷಕಿ ಯಾದ ಶ್ರೀಮತಿ ಜಯಲಕ್ಹ್ಮೀ ಯವರು ಹಾಗೂ ಸಾಹಿತ್ಯ ಪ್ರೇಮಿಗಳಾದ ಉಮಾ ಅರುಣ್ ಕುಮಾರ್ ರವರು ವೇದಿಕೆಯ ಮೇಲೆ ಉಪಸ್ಥಿತ ರಿದ್ದರು…. ಹಾನುಬಾಳು ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿಯಾದಂತಹ ಶ್ರೀಮತಿ ಶ್ರುತಿ ಮೇಡಂ ಹಾಗೂ ಉಪನ್ಯಾಸಕರಾದಂತಹ ಶ್ರೀಯುತ ಪ್ರವೀಣ್ ರವರು ಸ್ಪರ್ಧೆಗಳಿಗೆ ತೀರ್ಪು ಗಾರರಾಗಿ ಆಗಮಿಸಿದ್ದರು…. ಉತ್ತಮ ತೀರ್ಪುನ್ನು ನೀಡಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಕೆ ಪಿ ಎಸ್ ಶಾಲೆಯ ಶಿಕ್ಷಕರು ಕಾರ್ಯಕ್ರಮ ಮಾಡಲು ಎಲ್ಲಾ ರೀತಿಯಲ್ಲೂ ಸಹಕರಿಸಿದರು..
ಕೊನೆಯಲ್ಲಿ ಮಕ್ಕಳಿಗೆ ಸಿಹಿ ಹಂಚಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಹಾನುಬಾಳು ಹೋಬಳಿ ಘಟಕದ ಕಾರ್ಯದರ್ಶಿ ಗಳಾದ ಶ್ರೀಮತಿ ಕೀರ್ತಿ ಕಿರಣ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು.ಶ್ರೀಮತಿ ಉಮಾ ಅರುಣ್ ಕುಮಾರ್ ರವರು ತಮ್ಮ ಸುಶ್ರಾವ್ಯ ಕಂಠ ದಿಂದ ಪ್ರಾರ್ಥನೆಯನ್ನು ಮಾಡಿದರು.ಹಾಗೆಯೇ ಸಹ ಕಾರ್ಯದರ್ಶಿ ಸ್ವಾದೀಶ್ ರವರು ವಂದನಾರ್ಪಣೆ ಮಾಡಿದರು…. ಸದಸ್ಯರಾದ ಆದ ವಿಜಯ್ ರವರು ಪ್ರಬಂಧ ಸ್ಪರ್ಧೆ ಉಸ್ತುವಾರಿ ನೋಡಿಕೊಂಡರು. ಸದಸ್ಯರಾದ ಮೋಹನ್ ಅಚ್ಚರಡಿ ಮತ್ತು ಅರುಣ್ ರವರು ವೇದಿಕೆಯ ಉಸ್ತುವಾರಿ ನಿರ್ವಹಿಸಿದರು…. ಹೆಚ್..ಜಿ ಮೋಹನ್ ಕುಮಾರ್ ರವರು ಕಾರ್ಯಕ್ರಮದ ಎಲ್ಲಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿದರು.
ಶಿಕ್ಷಣ ದೊಂದಿಗೆ ಸಾಹಿತ್ಯ ಎಂಬ ದ್ಯೇಯವನ್ನಿ ಟ್ಟು ಕೊಂಡು ಮುನ್ನೆಡೆಯುತ್ತಿರುವ ಹಾನುಬಾಳು ಕನ್ನಡ ಸಾಹಿತ್ಯ ಪರಿಷತ್ತು ಕಳೆದ 3 ವರ್ಷ ಗಳಲ್ಲಿ ಹಲವಾರು ಸಾಸ್ಕೃoತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ… ರಾಜ್ಯೋತ್ಸವದ ಆಚರಣೆಯನ್ನು ನೆಡೆಸಿಕೊಂಡು ಬಂದಿದೆ… ಮುಂದಿನ ದಿನಗಳಲ್ಲಿ ಕಥೆ ಕಮ್ಮಟ ಗಳು ಮತ್ತು ಕವಿಗೋಷ್ಠಿಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಕಾರ್ಯದರ್ಶಿ ಕೀರ್ತಿ ಕಿರಣ್ ಕುಮಾರ್ ತಮ್ಮ ಆಶಯವನ್ನು ಇಂದಿನ ಕಾರ್ಯಕ್ರಮ ದಲ್ಲಿ ವ್ಯಕ್ತ ಪಡಿಸಿದ್ದಾರೆ…..
ತೀರ್ಪು ಗಾರರಾಗಿ ಆಗಮಿಸಿದ್ದ ಉಪನ್ಯಾಸಕಿ ಶ್ರುತಿ ರವರು ಹಾಗೂ ಉಪನ್ಯಾಸಕರಾದಂತಹ ಪ್ರವೀಣ್ ರವರನ್ನು ವೇದಿಕೆಯ ಮೇಲಿನ ಗಣ್ಯರು ಗೌರವಿಸಿದರು.