Blog

ಹಾನು ಬಾಳುನಲ್ಲಿ ಸಮುದಾಯ ವಾಸ್ತವ ಶಿಬಿರ



(ಸ್ವಚ್ಚತೆ‌ ಹಾಗೂ ಸ್ವಾಸ್ಥ್ಯಕ್ಕೆ ಹಳ್ಳಿಗರಿಗೆ ಉತ್ತೆಜನ ನೀಡಿದ ಶಿಬಿರಾರ್ಥಿಗಳು)

ಸಕಲೇಶಪುರ;-

ಕಳೆದ ಮೂರು ದಿನಗಳಿಂದ
ಜೆ ಎಸ್  ಎಸ್ ಶಿಕ್ಷಣ ಮಾಹಾ ವಿದ್ಯಾಲಯ ಹಾಗೂ ಗ್ರಾಮ ಪಂಚಾಯಿತಿ ಮತ್ತು ಐಕ್ಯೂಎಸಿ ಯವರ ಸಹಭಾಗಿತ್ವ  ದೊಂದಿಗೆ
ಹಾನ್ಬಾಳ್ ಗ್ರಾಮ ಪಂಚಾಯಿತಿಯ ಪರಿಸರದಲ್ಲಿ ಜೆ ಎಸ್ ಎಸ್. ಬಿ ಎಡ್ ಕಾಲೇಜಿನ ವಿದ್ಯಾರ್ಥಿಗಳಿಂದ ಮೂರು ದಿನದ
ಸಮುದಾಯ ವಾಸ್ತವ ಶಿಬಿರ ಕಾರ್ಯಕ್ರಮ ಶಾಸಕರಾದ ಸಿಮೆಂಟ್ ಮಂಜು ರವರ ನೇತ್ರತ್ವದಲ್ಲಿ ಉಡ್ಗಾಟನೆ ಮಾಡಲಾಯಿತು.

ಸಮುದಾಯ ವಾಸ್ತವ್ಯ ಶಿಬಿರದ
ಮೂಲಕ ವಿದ್ಯಾರ್ಥಿಗಳ ಶ್ರಮದಾನ ಹಾನ್ಬಾಳ್ ಗ್ರಾಮ ಪಂಚಾಯತಿಯ ಸುತ್ತಾಮುತ್ತಾ ಪರಿಸರ ಶುಚಿತ್ವಕ್ಕೆ ಮಹತ್ವ ಮಾಡುವುದರ ಮೂಲಕ ಗ್ರಾಮ ಪಂಚಾಯಿತಿ ಹಾಗೂ ನೆರೆಹೊರೆಯವರ ಮನ ಗೆಲ್ಲುವುದರಲ್ಲಿ ಜೆ ಎಸ್ ಎಸ್ ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ಆಸರೆ ಆದರು.

ವಿದ್ಯಾರ್ಥಿಗಳ
ದೈನಂದಿನ ಚಟುವಟಿಕೆಯಲ್ಲಿ ಹಾನ್ಬಾಳ್ ಸುತ್ತಾ ಮುತ್ತಾ ಶ್ರಮದಾನದ ಕಾರ್ಯಕ್ರಮ
ಸಂತೆ ಮಾರುಕಟ್ಟೆ, ಹಾನ್ಬಾಳ್ ಬಸ್ಟಾಂಡ್, ಅಂಬೇಡ್ಕರ್ ಸಮುದಾಯ, ಪರಿಶಿಷ್ಟ ಭವನ, ಹಾಗೂ ಮೆಟ್ರಿಕ್ ನಂತರದ ಬಾಲಕರ ನಿಲಯ ಮುಂತಾಂದ ಶುಚಿತ್ವ ಹಾಗೂ ಸ್ವಾಸ್ಥ್ಯ ಸಮಾಜ
ಹಾಗೂ ಅರೋಗ್ಯ ಹಿತದೃಷ್ಟಿಯಿಂದ ಮಾನವ ರೋಗ ಮುಕ್ತ ಸಮಾಜದ ಜನರ ಜೀವನ
ಭವಿಷ್ಯಕ್ಕೆ ಅವಶ್ಯಕತೆ ಹಾಗೂ ಅದರ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಳ್ಳಿಗಳಲ್ಲಿ ಜಾಗ್ರತೆ ಮೂಡಿಸುವ ವಿಚಾರಗಳನ್ನು ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ಮಂಡಿಸಿದ್ದರು.

2023-2024 ನೇ ಸಾಲಿನ ಹಾನ್ಬಾಳ್ ಗ್ರಾಮ ಪಂಚಾಯತಿ ಗಾಂಧಿ ಗ್ರಾಮ ಪ್ರಶಸ್ತಿಗೆ 5ನೇ ಬಾರಿಗೆ ಆಯ್ಕೆಯಾಗಿದೆ. ಹಾಗೂ ಇಲ್ಲಿನ  ಪಿ.ಡಿ.ಓ ಹರೀಶ್ ರವರ
ಶ್ರಮವೂ ಕೂಡ ಗಾಂಧಿಗ್ರಾಮ ಪ್ರಶಸ್ತಿಗೆ ಅವರ ಕಾರ್ಯಗಳ ಯೋಜನೆಯ ಆಧಾರದ ಮೇಲೆ
ನಾವು ಇತರೆ ಗ್ರಾಮ ಪಂಚಾಯತಿ ಗಿಂತ ಭಿನ್ನವಾಗಿ ಮಾದರಿ ಗ್ರಾಮ
ಗಾಂಧಿಗ್ರಾಮ ಪ್ರಶಸ್ತಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಹಿಗ್ಗಿನಿಂದ ಹೇಳಿಕೊಳ್ಳುತ್ತಾರೆ.
ಸಮುದಾಯ ವಾಸ್ತವ್ಯ ಶಿಬಿರದ
ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಮಾಜಿ ಶಾಸಕರಾದ ವಿಶ್ವನಾಥ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಕಲಿಕಾ ಸಮಯದಲ್ಲಿ ವಿದ್ಯಾಬ್ಯಾಸದ ಜೊತೆಗೆ, ರಾಜಕೀಯ ವಿಚಾರ ನಮ್ಮನ್ನು ಆಳುವ ವ್ಯವಸ್ಥೆ, ಗ್ರಾಮಗಳ ಅಭಿವೃದ್ಧಿ, ಪರಿಸರದ ಕಾಳಜಿ ಮುಂತಾಂದ ವಿಷಯಗಳ ಬಗ್ಗೆಯೂ ಅರಿವು ಹಾಗೂ ಶ್ರಮದಾನದ ಜೊತೆಗೆ ಪ್ರತಿನಿತ್ಯ ಜ್ಞಾನಾರ್ಜನೆಗೆ ಒತ್ತು ಕೊಡ ಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದ್ದರು. ಹಾಗೂ ಶ್ರಮದಾನದ ಮೂಲಕ ಹಳ್ಳಿಗಳ
ಶ್ಚಚ್ಚತೆಗೆ ಸುಮಾರು 80  ವಿದ್ಯಾರ್ಥಿಳು ಸಹಯೋಗದಿಂದ
ಗ್ರಾಮಸ್ಥರ ಹಾಗೂ ವಿದ್ಯಾರ್ಥಿಗಳ
ಒಡನಾಟ, ಬಾಂದವ್ಯ,ಹಳ್ಳಿಗರ ಜೀವನ ಶೈಲಿ ಇನ್ನಿತರ ಮಾಹಿತಿಗಳನ್ನು ಗಮನದಲ್ಲಿಟ್ಟು ಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಹಳ್ಳಿಗಳಲ್ಲಿ ಆಧುನಿಕವಾಗಿ ಅದ್ಯಯನ ಮಾಡಿ
ತಮ್ಮಿಂದ ತಾವು ಹಳ್ಳಿಗರಿಗಾಗಿ ತಮ್ಮ ವಿದ್ಯಾಬ್ಯಾಸದಿಂದ ಏನಾದರೂ ಕೊಡುಲು ಸಾದ್ಯವೇ ಎಂಬ ಕನಸ್ಸು ಕಾಣುವುದೇ ಉತ್ತಮ ಸಮಾಜ ನಿರ್ಮಾಣ ಮಾಡುವುದಕ್ಕೆ ಅಡಿಪಾಯವಾಗಿದೆ. ಈ ನಿಟ್ಟಿನಲ್ಲಿ
ವಿದ್ಯಾರ್ಥಿಗಳ ಶ್ರಮಿಸಬೇಕು. ಎಂದು ಕಿವಿ ಮಾತು ಹೇಳಿದ್ದರು.

ಮುಕ್ತಾಯ ಸಮಾರಂಭದಲ್ಲಿ‌ ಮಾತನಾಡಿದ ಜೆ ಎಸ್ ಎಸ್ ಶಿಕ್ಷಣ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಮಾತನಾಡಿ ನಾವು ಹಾನ್ಬಾಳ್ ಗ್ರಾಮದಲ್ಲಿ
ಶಿಬಿರ ಆರಂಭದಿಂದ ಅಂತ್ಯದವರೆಗೆ ನಮ್ಮಗೆ ಇಲ್ಲಿನ
ಪ್ರತಿಯಬ್ಬರೂ ನಮ್ಮಗೆ ಆದರವಾದ ಗೌರವದಿಂದ ಬರಮಾಡಿಕೊಂಡು ಹಾಗೂ ನಮ್ಮ ಎಲ್ಲಾ ದೈನಂದಿನ ಚಟುವಟಿಕೆಗಳಿಗೆ ಗ್ರಾಮಸ್ಥರು ಭಾಗಿಯಾಗಿ ನಮ್ಮಗೆ ತಂಗಲು ಉತ್ತಮವಾದ ವಾತಾವರಣ ವ್ಯವಸ್ಥೆ ಹಾಗೂ ಎಲ್ಲಾರೊಂದಿಗೆ ಉತ್ತಮ ಬಾಂದವ್ಯದ ಮೂಲಕ
ನಮ್ಮನ್ನು ನೋಡಿಕೊಂಡು ನಮಗೆ  ಹಾಗೂ ನಮ್ಮ ಶಿಬಿರದ ಪ್ರತಿಯೊಂದು ಕಾರ್ಯಕ್ಕೆ ಸಹಾಯ ಮಾಡಿದ ಗ್ರಾಮಸ್ಥರಿಗೆ ಶಿಬಿರ ಕೇವಲ ಮೂರು ದಿನಗಳು ಹೇಗೆ ಕಳೆದವು ಎಂಬುದೇ ತಿಳಿಯಲಿಲ್ಲ.
ನಮಗೆ ಇಲ್ಲಿಂದ ಹಾಗೂ ಗ್ರಾಮದಿಂದ ಶಿಬಿರ ಮುಕ್ತಾಯವಾಗಿದ್ದೇ ಬೇಸರದ ಸಂಗತಿಯಾಗಿದೆ ಎಂದು ವಿದ್ಯಾರ್ಥಿಗಳು ಮುಕ್ತಾಯ ಸಮಾರಂಭದಲ್ಲಿ ತಮ್ಮ ಮನದಾಳದ ಮಾತುಗಳನ್ನು ನುಡಿದರು.

ಸಮುದಾಯ ವಾಸ್ತವ್ಯ ಶಿಬಿರವು ಮೂರು ದಿನಗಳು ಯಶಸ್ವಿ ಯಾಗಿ
ಮುಕ್ತಾಯ ಸಮಾರಂಭ ಕಾರ್ಯಕ್ರಮವನ್ನು ಹಾನ್ಬಾಳ್ ಅಂಬೇಡ್ಕರ್ ಭವನದಲ್ಲಿ ಗ್ರಾಮಪಂಚಾಯಿತಿಯ ಅದ್ಯಕ್ಷರು ಹಾಗೂ ಸದಸ್ಯರು ಒಳಗೊಂಡಂತೆ ಸ್ಥಳಿಯ ಸಾರ್ವಜನಿಕರ  ಸಹಾಯದೊಂದಿಗೆ ಮುಕ್ತಾಯ ಸಮಾರಂಭದ ಕಾರ್ಯಕ್ರಮ ಜರುಗಿತು.

ಈ ಸಂಧರ್ಭದಲ್ಲಿ
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಎಚ್.ಎ .ಆದಿತ್ಯ,  ಬಿ .ಎ .ರಾಜಶೇಖರ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ .ಆರ್. ಸಂತೋಷ್,  ಪಿ ಡಿ‌ ಓ ಹರೀಶ್, ಧರ್ಮರಾಜ್ ಪತ್ರಿಕಾ ವರದಿಗಾರರು, ಇನ್ನಿತರರು ಇದ್ದರು.

Related posts

ಮಲೆನಾಡು ರಕ್ಷಣೆ ಸೇನೆಯ ಹೋರಾಟ

Bimba Prakashana

ಗೌರಿ ಗಣೇಶ ಹಬ್ಬದ ಶುಭಾಶಯಗಳು

Bimba Prakashana

ಕರ್ನಾಟಕ ಪಬ್ಲಿಕ್ ಶಾಲೆಗೆ ಚಾಂಪಿಯನ್ ಶಿಪ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More