ಜನತಾದಳದ ಚಿಕ್ಕ ಮಗಳೂರು ಜಿಲ್ಲಾ ಉಸ್ತುವಾರಿಯಾಗಿ ಮಾಜಿ ಸಚಿವರಾದ ಹೆಚ್ ಕೆ ಕುಮಾರ ಸ್ವಾಮಿಯವರನ್ನು ಜೆಡಿಎಸ್ ರಾಜ್ಯ ಅಧ್ಯಕ್ಷರಾದ ಹೆಚ್ ಡಿ ಕುಮಾರ ಸ್ವಾಮಿಯವರು ಘೋಷಣೆ ಮಾಡಿದ್ದಾರೆ
ಮೂಡಿಗೆರೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಈ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.
ಜನತಾ ದಳವನ್ನು ಸಂಘಟನೆ ಮಾಡುವ ನಿಟ್ಟಿನಲ್ಲಿ ಜೆಡಿಎಸ್ ಅಧ್ಯಕ್ಷರಾದ ಹೆಚ್ ಡಿ ಕುಮಾರ ಸ್ವಾಮಿಯವರು ಕಾರ್ಯ ತಂತ್ರ ರೂಪಿಸಿದ್ದಾರೆ.
ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗಳಲ್ಲಿ ವಿಧಾನ ಸಭಾವಾರು ಸದಸ್ಯತ್ವ ನೋಂದಣಿ ಮಾಡಲು ಹಾಗೂ ಪಕ್ಷ ಬಲವರ್ಧನೆ ಮಾಡಲು ಆರಂಭ ಮಾಡಿದೆ.
ಅಕ್ಟೋಬರ್ ತಿಂಗಳ ಒಳಗಾಗಿ ಜಿಲ್ಲಾ ಮಟ್ಟ, ತಾಲೂಕು ಮಟ್ಟ, ಬೂತ್ ಸಮಿತಿ ಹಾಗೂ ವಿವಿಧ ಘಟಕಗಳನ್ನು ರಚಿಸಲಿದ್ದಾರೆ.
ಜೆಡಿಎಸ್ ಅಧ್ಯಕ್ಷರು ಸುರೇಶ್, ಬಾಲಕೃಷ್ಣ ಗೌಡ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಗಣಪತಿ ಹಬ್ಬ ಕಳೆದ ಬಳಿಕ ಸಂಪೂರ್ಣ ಸಂಘಟನೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿದು ಬಂದಿದೆ.