Blog

ರೋಟರಿ ಶಾಲೆಗೆ ಪುರಸ್ಕಾರ

ವರದಿ ರಾಣಿ ಪ್ರಸನ್ನ


ಸಕಲೇಶಪುರದ  ರೋಟರಿ ಶಾಲೆ  ಮತ್ತೊಮ್ಮೆ ಜಿಲ್ಲಾ ಮಟ್ಟದಲ್ಲಿ  ಸದ್ದು ಮಾಡಿದೆ.

ರೋಟರಿ ಶಾಲಾ ಸಂಸ್ಥೆಯು ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ  ವಿದ್ಯಾಭಾಸದ ಜೊತೆಗೆ  ಪುಸ್ತಕದ  ಗೀಳೊಂದೆ ನೀಡದೆ ಜೊತೆಗೆ ಆಟೋಟ ಸ್ಪರ್ಧೆ,  ವಿಜ್ಞಾನ ಸ್ಪರ್ಧೆ, ಬೇರೆ ಎಲ್ಲಾ ಚಟುವಟಿಕೆಯಲ್ಲೂ ಮಕ್ಕಳನ್ನು  ಪ್ರಾ ಶುಪಾಲರು   ಮತ್ತು ಶಿಕ್ಷಕರು ಪ್ರೋತ್ಸಾಹಿಸುತ್ತ  ಬಂದಿದ್ದಾರೆ. ಇದಕ್ಕೆ ಕಾರಣವೇ  ಈ ವಿಜಯ.

ಹಾಸನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಹಾಸನ ಮತ್ತು ಪೈಜಾಮ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಹಾಸನ ಜಿಲ್ಲೆಯಲ್ಲಿರುವ ಎಲ್ಲಾ ATL ಶಾಲೆಗಳಿಗೆ ವಿಶೇಷ ಕಾರ್ಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ನಾವಿನ್ಯತೆಯುತವಾಗಿ ಲ್ಯಾಬ್ ಗಳಲ್ಲಿ ವಿದ್ಯಾರ್ಥಿಗಳು ತಯಾರಿಸುವ ನವೀನ ಮಾದರಿಗಳನ್ನು ಪ್ರದರ್ಶಿಸಲು ಹಾಸನದ ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು.


ಈ ಕಾರ್ಯಕ್ರಮಕ್ಕೆ ಸಕಲೇಶಪುರದ ರೋಟರಿ ಶಾಲೆಯ 9ನೆ ತರಗತಿ ವಿದ್ಯಾರ್ಥಿಗಳಾದ ಸೋನಿತ್, ಶಯಾನ್, ಹಾಗೂ ಮನ್ವಿತ್ ಭಾಗವಹಿಸಿ, ಕಣ್ಣು ಕಾಣದ ವರಿಗೆ ಊರುಗೋಲು (Blind stick) ಹಾಗೂ ತೋಟ ಅಥವಾ ಮನೆಯ ಹತ್ತಿರ ಕಾಡಾನೆಗಳು ಬಂದರೆ ಸೈರನ್ ಆಗುವಂತಹ ಮಾದರಿಯನ್ನು ವಿದ್ಯಾರ್ಥಿಗಳು ತಯಾರಿಸಿ ಪ್ರದರ್ಶಿಸಿದರು.

ಈ ಮಾದರಿಗೆ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ಬಂದಿರುವ ಕಾರಣ ಇವರಿಗೆ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಸಂತಸ ವ್ಯಕ್ತಪಡಿಸಿದ್ದಾರೆ.

Related posts

ಯಸಳೂರು ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Bimba Prakashana

ಮಗ್ಗೆ ಬಳಿ ಕೆರೆಗೆ ಬಿದ್ದ ಕಾರು

Bimba Prakashana

ಡಾ. ಶಿವಕುಮಾರ ಸ್ವಾಮೀಜಿಗಳ 6 ನೇ ವರ್ಷದ ಪುಣ್ಯ ಸ್ಮರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More