ಆಲೂರು ತಾಲೂಕಿನ ಹಂತನ ಮನೆ ಗ್ರಾಮದ ನಿವಾಸಿ ವೆಂಕಟೇಶ್ ಅವರ ಹುಲ್ಲಿನ ಕೊಣವೆಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪ್ರಕರಣ ಕಂಡು ಬಂದಿದೆ.
ಇದನ್ನು ಆಲೂರು ತಾಲೂಕಿನ ಪೊಲೀಸ್ ಠಾಣೆಯ ಅಧಿಕಾರಿಗಳು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದಲ್ಲದೆ ರಕ್ಷಣಾ ವೇದಿಕೆಯ ಮುಖಂಡ ಭರತ್ ಮಾತನಾಡಿ ಇಂಥವರನ್ನು ಬಂಧಿಸಿ ಉಗ್ರವಾದ ಕ್ರಮ ಕೈಗೊಳ್ಳಬೇಕು ಎಂದು ಮಾತನಾಡಿದಲ್ಲದೆ ಈ ಬಡ ರೈತನಿಗೆ ಪರಿಹಾರ ನೀಡಬೇಕೆಂದು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ. ಈ ಬಿರು ಬೇಸಿಗೆಯಲ್ಲಿ ದನಕರಗಳಿಗೆ ಇಟ್ಟಿದ್ದ ಮೇವನ್ನು ಯಾರು ಕಿಡಿಗೇಡಿಗಳು ಬೆಂಕಿ ಹಾಕಿದ್ದರಿಂದ ಇಡೀ ಹುಲ್ಲಿನ ಕೊಣವೆ ಸುಟ್ಟು ಬೂದಿಯಾಗಿದೆ ಇಂಥವರ ಮೇಲೆ ಪೋಲಿಸ್ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಆಗುವುದೇ ಎಂಬುದು ನಮ್ಮ ಮಾಧ್ಯಮದ ಪ್ರಶ್ನೆಯಾಗಿದೆ.