ದತ್ತಪೀಠದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಹೊಸ ಆಚರಣೆ ಆರೋಪ. ಜಿಲ್ಲಾಧಿಕಾರಿ ಅಮಾನತ್ತಿಗೆ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಪಟ್ಟು.
ಸಕಲೇಶಪುರ – ಚಿಕ್ಕಮಗಳೂರಿನ ದತ್ತಪೀಠದಲ್ಲಿ ಗ್ಯಾರವಿ ಎಂಬ ಹೊಸ ಆಚರಣೆಗೆ ಜಿಲ್ಲಾಧಿಕಾರಿ ಅನುಮತಿ ನೀಡಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಮಾನತ್ತಿಗೆ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಸಕಲೇಶಪುರ ತಾಲ್ಲೂಕು ಇವರು ಆಗ್ರಹಿಸಿದ್ದಾರೆ.
ದತ್ತಪೀಠದಲ್ಲಿ ಯಾವುದೇ ಹೊಸ ಆಚರಣೆ ಮಾಡಬಾರದು ಎಂದು ನಿಯಮವಿದ್ದರೂ ಸಹ ಗ್ಯಾರವಿ ಆಚರಣೆಗೆ ಮುಸ್ಲಿಮರಿಗೆ ಅವಕಾಶ ನೀಡಿರೋದು ಕಾನೂನು ಉಲ್ಲಂಘನೆಯಾಗಿದೆ. ಎಂದು ದತ್ತಪೀಠ ಮುಕ್ತಿ ಹೋರಾಟ ಸಮಿತಿ ಸಕಲೇಶಪುರದ ಕಾರ್ಯಕರ್ತರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಉಪವಿಭಾಗಾಧಿಕಾರಿಗಳ ಮುಖಾಂತರ ಮನವಿ ನೀಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಅಮಾನತ್ತಿಗೆ ಮನವಿ ಮಾಡಿದ್ದಾರೆ.
ಗ್ಯಾರವಿ ಎಂದರೆ ಪ್ರಾಣಿಬಲಿ ಕೊಡೋದು ಪೀಠದ ಪಕ್ಕದ ಕಲ್ಯಾಣಿ ಇರುವ ಜಾಗದಲ್ಲಿ 22/12/2024 ರಂದು ಕುರಿ ಕಡಿದು ಅಲ್ಲೇ ಊಟ ಮಾಡಿ ದತ್ತಪೀಠದ ಆವರಣವನ್ನು ಕಲುಷಿತಗೊಳಿಸಿದ್ದು. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದ್ದು ಈ ರೀತಿಯ ಯಾವದೇ ಆಚರಣೆಗೆ ಅವಕಾಶವಿಲ್ಲದಿದ್ದರೂ ಸಹ ಗ್ಯಾರವಿಗೆ ಅನುಮತಿ ನೀಡಿರೋದು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದಾರೆ ಜಿಲ್ಲಾಧಿಕಾರಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಮುಖಂಡ ರಘು ಸಕಲೇಶಪುರ ಸೇರಿದಂತೆ ದತ್ತಪೀಠ ಮುಕ್ತಿ ಹೋರಾಟ ಸಮಿತಿಯ ಸಕಲೇಶಪುರ ತಾಲ್ಲೂಕಿನ ಕಾರ್ಯಕರ್ತರು ಇದ್ದರು