ವರದಿ ರಾಣಿ ಪ್ರಸನ್ನ
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಕಸಬಾ ಹೋಬಳಿ ಬೆಳೆಗಾರರ ಸಂಘದ ಸಹ ಸಂಘವಾದ ಹೆಗ್ಗದ್ದೆ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಹಾಲಿ ಅಧ್ಯಕ್ಷರಾಗಿದ್ದ ಶ್ರೀಯುತ ಪ್ರಕಾಶ್ ಅಕಾಲಿಕ ಮರಣ ಹೊಂದಿದ್ದಾರೆ
ಇವರು ಅವಿವಾಹಿತರಾಗಿದ್ದು ನಿಧನ ಕಾಲಕ್ಕೆ ಇವರಿಗೆ 54 ವರ್ಷ ವಯಸ್ಸಾಗಿತ್ತು.
ಇವರು ಸಹೋದರ ಸಹೋದರಿಯರನ್ನು ಹೊಂದಿದ್ದು ಕೂಡು ಕುಟುಂಬದಲ್ಲಿ ವಾಸಿಸುತ್ತಿದ್ದರು.
ಲಿವರ್ ಸಮಸ್ಯೆಯಿಂದ ಬಳ್ಳುತ್ತಿದ್ದ ಇವರಿಗೆ ಆರೋಗ್ಯ ಸಮಸ್ಯೆಯಲ್ಲಿ ಏರು ಪೇರಾದ ಕಾರಣ ಸಕಲೇಶಪುರ ಕಾಫಾರ್ಡ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಅಲ್ಲಿ ಸಾಧ್ಯವಿಲ್ಲವೆಂದು ಹೇಳಿದಾಗ ಮಂಗಳ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೇಳೆದಿದ್ದಾರೆ.
ಇಂದು ಇವರ ಸ್ವಗೃಹವಾದ ಕಾಡುಮನೆಯ ಗೋಡುಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
previous post
next post