ವರದಿ raani ಪ್ರಸನ್ನ
ಸಕಲೇಶಪುರ ತಾಲೂಕು ಹೆಗ್ಗದ್ದೆ ಪಂಚಾಯಿತಿ ವ್ಯಾಪ್ತಿಯ 6 ಜನ ಯೋಜನ ನಿರಾಶ್ರಿತರಿಗೆ 22,30,000 ರೂ/- ಪರಿಹಾರದ ಚೆಕ್
ಎತ್ತಿನಹೊಳೆ ಯೋಜನೆ ಕಾಮಗಾರಿ ಹಿನ್ನೆಲೆ ಹಲವಾರು ಜನ ಮನೆ ಮತ್ತು ಜಮೀನು ಕಳೆದುಕೊಂಡು ಯೋಜನ ನಿರಾಶ್ರಿತರಾಗಿದ್ದು, 5 ವರ್ಷಗಳಿಂದ ಯಾವುದೇ ಪರಿಹಾರ ನೀಡಿರುವುದಿಲ್ಲ, ಈ ಕುರಿತು ಸೂಕ್ತ ಪರಿಹಾರ ನೀಡುವಂತೆ ಮಾನ್ಯ ಶಾಸಕರು ಸದನದಲ್ಲಿ ಸರ್ಕಾರದ ಗಮನ ಸೆಳೆ ದ ಹಿನ್ನಲೆಯಲ್ಲಿ ಪರಿಹಾರ ಮಂಜೂರು ಆಗಿದೆ.
ಸಕಲೇಶಪುರ ತಾಲೂಕು ಹೆಗ್ಗದ್ದೆ ಪಂಚಾಯಿತಿ ವ್ಯಾಪ್ತಿಯ 6 ಜನ ಯೋಜನ ನಿರಾಶ್ರಿತರಿಗೆ 22,30,000 ರೂ/- ಪರಿಹಾರದ ಚೆಕ್ ಅನ್ನು ಸಕಲೇಶಪುರ ತಾಲ್ಲೂಕು ಪಂಚಾಯಿತಿಯ ಶಾಸಕರ ಕಛೇರಿಯಲ್ಲಿ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುರವರು ವಿತರಿಸುವಲ್ಲಿ ಯಶಸ್ವಿಯಾಗಿದ್ದಾರೆ.