ರಾಜ್ಯ ಸಚಿವರಾದ ಜಮೀರ್ ಅಹ್ಮದ್ ರವರ ವಿರುದ್ಧ ಸಕಲೇಶಪುರ ಜೆಡಿಎಸ್ ಯುವ ಘಟಕದ ವತಿಯಿಂದ ಸಕಲೇಶಪುರದ ಎಸಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಮೀರ್ ಅಹ್ಮದರವರನ್ನು ಮಂತ್ರಿ ಮಂತ್ರಿಮಂಡಲದಿಂದ ಕೂಡಲೇ ಕೈ ಬಿಡಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯ ಮಾಡಲಾಯಿತು ಕ್ರಿಮಿನಲ್ ಮೊಕದ್ದಮೆ ಧಾಖಲಿಸುವಂತೆ ಮನವಿ ಮಾಡಲಾಯಿತು.
ಈ ಪ್ರತಿಭಟನೆಯಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷರಾದ ಕವನ್ ಗೌಡ್ರು ಪಿ ಎಸಿಸಿ ನಿರ್ದೇಶಕರಾದ ಕರಗೂರು ರಮೇಶ್ ರವರು , ಜೆಡಿಎಸ್ ಮುಖಂಡರುಗಳಾದ ವಲಹಳ್ಳಿ ಪ್ರಸಾದ್, ಸುಳ್ಳಕ್ಕಿ ಪರಮೇಶ್, ಮತ್ತು ವೇಧಾಕುಮಾರ್ , ಜಮ್ನಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಉದೀಶ್ ಬಾಳುಪೇಟೆ ಲೋಕೇಶ್, ಬಾಳುಪೇಟೆ ಗ್ರಾಮ ಪಂಚಾಯತಿ ಸದಸ್ಯರಾದ ರಾಜೇಶ್ , ಜೆಡಿಎಸ್ ಮುಖಂಡರುಗಳಾದ ಕ್ಯಾಮನಹಳ್ಳಿ ರಂಜಿತ್ , ಹೊಸಕೊಪ್ಪಲು ಮಹೇಂದ್ರ , ಹೆಗ್ಗೋವೆ ಸುಧೀಶ್ ಮತ್ತು ಮಿಥುನ್ ಮತ್ತು ಮೋಣುರವರು ಮತ್ತು ಕಾರ್ಯಕರ್ತರುಗಳು ಹಾಜರಿದ್ದರು