ಆಲೂರು :- ತಾಲೂಕಿನ ಪಾಳ್ಯ ಹೋಬಳಿ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬಿರುಕನಹಳ್ಳಿ ಗ್ರಾಮದ ಸರ್ವೆ ನಂಬರ್ 38 ರಲ್ಲಿ ಇರುವ ಶ್ರೀಮತಿ ಲತಾ ಕೋಂ ಮೋಹನ ನಾಯಕ ಆದ ನಮ್ಮ ನಿವೇಶನವನ್ನು. ಶಾರದಮ್ಮ ಕೋಂ ರಾಯರೆಡ್ಡಿ, ಅವರು ಅಕ್ರಮವಾಗಿ ಆಕ್ರಮಿಸಿಕೊಳ್ಳುವ ಉದ್ದೇಶದಿಂದ ನಮಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿರುವುದಲ್ಲದೆ, ಹಾಸನದ ಮಾಧ್ಯಮ ಕಚೇರಿಯಲ್ಲಿ ಮಾಧ್ಯಮಗಳ ಮೂಲಕ ಸುದ್ದಿಗೋಷ್ಠಿ ಕರೆದು ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳ ಮತ್ತು ಸಾರ್ವಜನಿಕರ ದಿಕ್ಕು ತಪ್ಪಿಸಲು ಅವರು ಆಕ್ರಮಿಸಿಕೊಳ್ಳಲು ಹೊರಟಿರುವ ಸರ್ವೆ ನಂಬರ್ 38ನ್ನು ಸರ್ವೇ ನಂಬರ್ 35 ಎಂದು ಹೇಳಿಕೆ ನೀಡುವ ಮೂಲಕ ಎಲ್ಲರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಹಾಗಾಗಿ ವಾಸ್ತವವಾಗಿ ಇರುವ ದಾಖಲೆ ಪತ್ರಗಳನ್ನು ಪರಿಶೀಲಿಸಿ ನಮಗೆ ಸೂಕ್ತ ನ್ಯಾಯ ಒದಗಿಸಿ ಕೊಡುವಂತೆ ಸುದ್ದಿಗೋಷ್ಠಿಯಲ್ಲಿ ಮೋಹನ ನಾಯಕ ಹಾಗೂ ಸಹೋದರರಾದ ತೀರ್ಥ ನಾಯಕ, ಕುಮಾರ ನಾಯಕ ಅವರು ಕೇಳಿಕೊಂಡಿದ್ದಾರೆ.
ಬಿರುಕನಹಳ್ಳಿ ಗ್ರಾಮದ ಸರ್ವೆ ನಂಬರ್ 38 ರ ವಿವಾದಿತ ನಿವೇಶನದ ದಾಖಲಾತಿಗಳು 1985 – 86 ರಿಂದ ಶ್ರೀಮತಿ ಲತಾ ಕೋಂ ಮೋಹನ ನಾಯಕ ಆದ ನಮ್ಮಂತೆಯೇ ಇದ್ದು, ಸನ್ನಿವೇಶನದ ಎಲ್ಲಾ ದಾಖಲಾತಿಗಳನ್ನು ಹೊಂದಿದ್ದು ಕಾಲಕಾಲಕ್ಕೆ ತೆರಿಗೆಯನ್ನು ಕಟ್ಟುತ್ತಾ ಬಂದಿದ್ದೇವೆ. ಆದರೂ ಶಾರದಮ್ಮ ಕೋಂ ರಾಯರೆಡ್ಡಿ, ಹಾಗೂ ಶೇಖರ ಅವರ ಬಳಿ ಯಾವುದೇ ದಾಖಲೆಗಳು ಇಲ್ಲದಿದ್ದರೂ ಸಹ ಲತಾ ಕೋಂ ಮೋಹನ ನಾಯಕ ಆದ ನಮ್ಮ ಮೇಲೆ ಹಾಗೂ ಇತರರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ, ಗಲಾಟೆ ಮಾಡುವುದು, ಹವ್ಯಾಚಾ ಶಬ್ದಗಳ ಇಂದ ನಿಂದಿಸುವುದು, ಬೆದರಿಕೆ ಹಾಕುವುದು ಹೀಗೆ ನಾನಾ ರೀತಿಯಲ್ಲಿ ಶೇಖರ ಶಾರದಮ್ಮ ಮತ್ತು ರಾಯರೆಡ್ಡಿ ಅವರು ತೊಂದರೆ ನೀಡುತ್ತಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.
ಈ ಸಂಬಂಧವಾಗಿ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಯಾವುದೇ ರೀತಿಯ ನ್ಯಾಯ ಒದಗಿಸಿ ಕೊಟ್ಟಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಗೋಷ್ಠಿಯಲ್ಲಿ ಮೋಹನ ನಾಯಕ, ತೀರ್ಥ ನಾಯಕ, ಜಗದೀಶ ನಾಯಕ ಹಾಗೂ ರಾಜೇಗೌಡ ಮುಂತಾದವರು ಹಾಜರಿದ್ದರು.
previous post
next post