ವರದಿ :ನವೀನ್ ಬೈರಾ ಪುರ
ಆಲೂರು: ಮಹಾತಪಸ್ವಿ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಲಿಂಗೈಕ್ಯ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು 108 ದಿನ ಕಠೋರ ಅನುಷ್ಠಾನ ಮಾಡಿದ ಬುಕ್ಕಾಂಬುಧಿಯ ಬೆಟ್ಟದಲ್ಲಿ ದಿ.21 ರ ಸೋಮವಾರ ಜಂಗಮ ಗಣಾರಾಧನೆ ಮಾಡುವ ಪೂರ್ವಕ ಶ್ರೀಗಳವರ ಮುಡಿಯನ್ನು ಸಮರ್ಪಣೆ ಮಾಡಲಾಗುತ್ತದೆ. ಸಮಸ್ತ ಸದ್ಭಕ್ತರು ಆಗಮಿಸಿ ಶ್ರೀ ಗುರುಗಳ ದರ್ಶನವನ್ನು ಪಡೆದುಕೊಳ್ಳಲು ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸೋಮವಾರು ಬೆಳಿಗ್ಗೆ 8:30 ರಿಂದ 11:30 ರವರಿಗೆ ಸಿದ್ದಲಿಂಗ ಜಗದ್ಗುರುಗಳ ಮಂಗಲ ಮೂರ್ತಿಗೆ ರುದ್ರಾಭಿಷೇಕ, ಮಹಾಮಂಗಳಾರತಿ. ಹಾಗೂ
ಹುಣಸಗಟ್ಟ ಶ್ರೀಗಳವರ ಇಷ್ಟಲಿಂಗ ಮಹಾಪೂಜೆ ನಡೆಯುವುದು, ಮದ್ಯಾಹ್ನ 12:00 ಗಂಟೆಗೆ ಜಂಗಮ ಗಣಾರಾಧನೆ ಹಾಗೂ ಪ್ರಸಾದ ವಿನಿಯೋಗ, 2 ಗಂಟೆಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಮುಡಿ ಸಮರ್ಪಣೆಯ ಪ್ರಯುಕ್ತವಾಗಿ ಆಸಕ್ತರು ಗುರುಗಳಿಗೆ ಫಲ ತಾಂಬೂಲ ಸಮರ್ಪಣೆ, ವಸ್ತ್ರ ಸಮರ್ಪಣೆ ಮಾಡಲು ಅವಕಾಶವಿದೆ. ಜಂಗಮ ಗಣರಾಧನೆ ಹಾಗೂ ಪ್ರಸಾದ ವಿನಿಯೋಗಕ್ಕೆ ಅಕ್ಕಿ ತರಕಾರಿ ಹಣ ವಸ್ತ್ರ ಮುಂತಾದವುಗಳನ್ನ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ ಆದ ಕಾರಣ ಸಮಸ್ತ ಸದ್ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಪೋಟೋ ಕ್ಯಾಪ್ಶನ್ : ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು