ಸಕಲೇಶಪುರ : ಸರ್ವಪಲ್ಲಿ ರಾಧಕೃಷ್ಣನ್ ಜನ್ಮದಿನ ಮತ್ತು ಶಿಕ್ಷಕರ ದಿನಾಚರಣೆಯನ್ನು ಪಟ್ಟಣದ ಗುರುವೇಗೌಡರ ಕಲ್ಯಾಣ ಮಂಟಪದಲ್ಲಿ ಆಚರಣೆ ಮಾಡಲಾಯಿತು.
ಶಾಸಕರಾದ ಸಿಮೆಂಟ್ ಮಂಜು ಕಾರ್ಯಕ್ರಮ ಉಧ್ಘಾಟಿಸಿ ಶುಭಕೋರಿದರು.
ಮಾಜಿ ಶಾಸಕರಾದ ಹೆಚ್.ಎಮ್ ವಿಶ್ವನಾಥ್, ಬಿ.ಆರ್ ಗುರುದೇವ್,ಉಪ ವಿಭಾಗಧಿಕಾರಿ ಡಾ.ಎಮ್.ಕೆ.ಶೃತಿ,ತಹಶೀಲ್ದಾರ್ ಮೇಘನಾ,ಜಿ,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗಂಗಾಧರನ್, ಪುರಸಭೆ ಅಧ್ಯಕ್ಷೆ ಜ್ಯೋತಿ ರಾಜಕುಮಾರ್, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಯೋಗ ತಜ್ಞರಾದ ಡಾ.ಗುರುರಾಜ್ ಯಲಗಚ್ಚಿನ ಪ್ರಧಾನ ಭಾಷಣ ಮಾಡಿದರು.
ಇಡೀ ಕಾರ್ಯಕ್ರಮ ವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ. ಎಸ್ ರವರು ಯೋಜನಾಬಧ್ಧವಾಗಿ ಆಯೋಜಿಸಿ ನಿಗದಿತ ಸಮಯದಲ್ಲಿ ಪೂರ್ಣ ಗೊಳಿಸಿದರು.
ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಅತ್ಯುತ್ತಮ ಶಿಕ್ಷಕರನ್ನು ಪ್ರಶಸ್ತಿ ಫಲಕ ನೀಡಿ ಅಭಿನಂದಿಸಿ ಗೌರವಿಸಲಾಯಿತು. ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಿಗೆ ,ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಗಳಲ್ಲಿ ಶೇಕಡಾ90% ಕ್ಕೂ ಹೆಚ್ಚು ಅಂಕ ಗಳಿಸಿದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಮಕ್ಕಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಶಾಸಕ ಸಿಮೆಂಟ್ ಮಂಜುರವರು ಶಿಕ್ಷಕರಿಗೆ ಭೋಜನದ ವ್ಯವಸ್ಥೆ ಮಾಡಿಸಿದ್ದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆ ಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.
ಪುರಸಭೆ ಉಪಾಧ್ಯಕ್ಷೆ ಝರೀನಾಝಾಕೀರ್ , ತಾಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಮಲ್ನಾಡ್ ಝಾಕೀರ್,ಕಾರ್ಯದರ್ಶಿ ವೈ.ಎಸ್.ಗಿರೀಶ್, ಟಿಎಪಿಸಿಎಮ್ಎಸ್ ಅಧ್ಯಕ್ಷ ಯು.ಪಿ.ಶಶಿಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಾ ಗುರುಮೂರ್ತಿ, ಪುರಸಭೆ ಸದಸ್ಯೆ ಎಸ್.ಎಲ್.ಅನ್ನಪೂರ್ಣೇಶ್ವರಿ, ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ರಾದ ಹೆಚ್.ಎನ್ ದೇವರಾಜ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾದ ಎಸ್ ಎಮ್ ಮಂಜುನಾಥ್,ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಮಂಜುನಾಥ್,ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾದ ಹೆಚ್.ಎನ್ ಕೃಷ್ಣ ಮೂರ್ತಿ, ಟಿಪಿಒ ಕುಶ್ವಂತ್ ಕೆ.ಕೆ, ಬಿ ಆರ್ ಸಿ ಗಂಗಾಧರ್, ಶಿಕ್ಷಕರ ಸಂಘದ ಪ್ರಮುಖರಾದ ತಮ್ಮಣ್ಣಶೆಟ್ಟಿ, ಜಗದೀಶ್, ಕೀರ್ತಿ ಕುಮಾರ್, ಆನೆಮಹಲ್ ಸಲೀಂ, ರೇಣುಕಾ. ಬಿ.ಆರ್,ಆನಂದ್ ಕೆ ಎನ್, ಸುಬ್ಬಯ್ಯ, ಎಮ್.ಎಸ್.ಮಹೇಶ್, ಮಾನಸ ದೇವರಾಜ್, ಜಿಲ್ಲಾ ವಿಶೇಷ ಪ್ರಶಸ್ತಿ ವಿಜೇತ ಶಿಕ್ಷಕ ಜೆ ಎಸ್ ಎಸ್ ಸಂಸ್ಥೆಯ ರೇಣುಕಾರಾಧ್ಯ ,ದೊರೇಶ್,ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.
ಮೊದಲಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ. ಎಸ್ ಸ್ವಾಗತಿಸಿದರು, ಕೊನೆಯಲ್ಲಿ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಮಂಜುನಾಥ್ ವಂದಿಸಿದರು