ಬಹು ಕೋಟಿ ಮೊತ್ತದ ಎತ್ತಿನ ಹೊಳೆ ಎಂಬ ಪ್ರಕೃತಿ ವಿರೋಧಿ ಹಾಗೂ ಪರಮ ಭ್ರಷ್ಟಾಚಾರದ ಎತ್ತಿನ ಹೊಳೆ ಕಾಮಗಾರಿ ಗೆ ಸೆಪ್ಟೆಂಬರ್ 6 ರಂದು ಚಾಲನೆ ನೀಡಲಾಗುತ್ತಿದೆ.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ರೇ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲು ಆಗಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮ ನಡೆಯುವ ಹೆಬ್ಬನಹಳ್ಳಿ ಗ್ರಾಮದ ಸ್ಥಳವನ್ನು ಪೊಲೀಸ್ ಅಧಿಕಾರಿಗಳು ಪರಿಶೀಲನೆ ಮಾಡಿ ದ್ದಾರೆ.
ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ನೇತ್ರಾವತಿ ನದಿಯ ನೀರನ್ನು ಕೊಂಡೊಯುವ ಈ ಯೋಜನೆ ಪ್ರಕೃತಿ ಗೆ ಸಂಪೂರ್ಣ ಮಾರಕವಾದ ಯೋಜನೆಯಾಗಿದೆ. ಕೋಲಾರ, ಚಿಕ್ಕ ಬಳ್ಳಾಪುರ ಪ್ರದೇಶಕ್ಕೆ ನೀರು ನೀಡುವ ನಿಟ್ಟಿನಲ್ಲಿ ಹಮ್ಮಿ ಕೊಂಡ ಬೃಹತ್ ಯೋಜನೆ ಇದಾಗಿದೆ
ಸಾವಿರಾರು ಎಕ್ರೆ ಕೃಷಿ ಜಮೀನಿನ ಮೂಲಕ ಈ ಯೋಜನೆಯ ಕಾಮಗಾರಿ ಹಾಗೂ ಪೈಪ್ ಲೈನ್ ಹಾದು ಹೋಗಿದೆ.
ಈ ಯೋಜನೆಯ ಹಣದಿಂದ ಹಲವಾರು ಮಂದಿ ಜನ ಪ್ರತಿನಿಧಿಗಳು ತಮ್ಮ ಜೇಬು ತುಂಬಿಸಿ ಕೊಂಡಿದ್ದಾರೆ.
ಈ ಕಾಮಗಾರಿಯ ವೇಗದಿಂದ ಆನೆಗಳು ತಮ್ಮ ಕಾರಿಡಾರ್ ನ ಹಾದಿ ತಪ್ಪಿ ಜನ ಜೀವನದ ಕಡೆಗೆ ನುಗ್ಗಿ ಅಲ್ಲಿನ ವ್ಯವಸ್ಥೆಯನ್ನೇ ಹಾಳು ಮಾಡಿದೆ.
ಈ ಕಾಮಗಾರಿ ಆರಂಭಗೊಂಡು 20 ವರ್ಷಗಳು ಪೂರ್ಣಗೊಂಡಿದೆ. ಈ ಕಾಮಗಾರಿಗೆ ಈಗಾಗಲೇ ಸುಮಾರು12.5 ಸಾವಿರ ಕೋಟಿ ಅನುದಾನ ಮಂಜೂರು ಗೊಂಡಿದ್ದು. ಇನ್ನು ಹೆಚ್ಚುವರಿಯಾಗಿ 10 ಸಾವಿರ ಕೋಟಿ ಅನುದಾನ ಆಡಳಿತಾತ್ಮಕ ಮಂಜೂರಾತಿ ಹಂತದಲ್ಲಿದೆ.
ಪ್ರಯೋಗ ಹಂತದಲ್ಲಿ ಹಲವಾರು ಸಮಸ್ಯೆ ಉಂಟು ಮಾಡಿದ್ದ ಈ ಯೋಜನೆ ಇನ್ನು ಆರಂಭ ಗೊಂಡ ಬಳಿಕ ಇನ್ನೇನು ಸಮಸ್ಯೆ ಮಾಡಲಿದೆ ಎಂದು ಕಾದು ನೋಡ ಬೇಕಿದೆ