Blog

ಮಹಿಳಾ ಜಾಗೃತಿ ಅಸೋಸಿಯೇಷನ್ ವಾರ್ಷಿಕೋತ್ಸವ

ವರದಿ ರಾಣಿ ಪ್ರಸನ್ನ

ಮಹಿಳೆಯರಿಗೆ  ಸರ್ಕಾರದಿಂದ  ಸಿಗುವ ಸೌಲಭ್ಯಗಳ ಕುರಿತು ಪ್ರತಿ ಮಹಿಳೆಯೂ ತಿಳಿದುಕೊಳ್ಳಲೆ ಬೇಕು ಎಂದು ಸಲಹೆ ಸೂಚನೆಗಳನ್ನು ನೀಡಿದ ಪ್ರಸೂತಿ  ತಜ್ಞರು ಆಲಿಯಾ ಭಾನು.

ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಶನ್ (ರಿ)ವತಿಯಿಂದ 19ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ.

ಸಕಲೇಶಪುರ ತಾಲ್ಲೂಕಿನ ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಶನ್ (ರಿ)ವತಿಯಿಂದ 19ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು  ಸಕಲೇಶಪುರದ ಕುಶಾಲನಗರ ಬಡಾವಣೆಯಲ್ಲಿರುವ ಭೀಮ ಮಂದಿರದಲ್ಲಿ ಡಾ. ಆಲಿಯಾ ಭಾನು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಲಿಯಾ ಭಾನುರವರು  ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಆಸ್ಪತ್ರೆಗಳಲ್ಲಿ  ಮತ್ತು ಆಸ್ಪತ್ರೆಗಳಲ್ಲಿ ಏನೇನು ಸೌಲಭ್ಯಗಳು ಇವೆ ಹಾಗೆಯೇ ಗರ್ಭ ಪಾತ ಯಾವ ಕಾರಣಕ್ಕೆ ಮಾಡಿಸಬಹುದು ಯಾವುದಕ್ಕೆ ಮಾಡಬಾರದು ಎಂದು ತಿಳಿಸಿಕೊಟ್ಟರು.

ಸಕಲೇಶಪುರ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬ ಪ್ರಮುಖವಾದ ಪಾತ್ರ ವಹಿಸುತ್ತದೆ . ಆಕೆ ತಾಯಿಯಾಗಿ, ತಂಗಿಯಾಗಿ, ಪತ್ನಿಯಾಗಿ, ಗೆಳತಿಯಾಗಿ ಬಾಳಿಗೆ ಬೆಳಕಾಗುವುದರ ಜೊತೆಗೆ ಪ್ರಸ್ತುತ ಸಮಾಜದಲ್ಲಿ ಕಟ್ಟುಪಾಡುಗಳನ್ನು ಮೀರಿ ಸಾಧನೆಯ ಶಿಖರವನ್ನು ಏರಿದ್ದಾಳೆ. ಹಾಗಾಗಿ ವಿಶ್ವದಾದ್ಯಂತ ಮಹಿಳೆಯರಿಗೆ ಗೌರವ ಕೊಡುವ ನಿಟ್ಟಿನಲ್ಲಿ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಯನ್ನಾಗಿ ಆಚರಿಸುವ ಮೂಲಕ ಒಂದು ದಿನವನ್ನು ಮೀಸಲಿಡಲಾಗಿದೆ.ಎಂದು ತಾಲ್ಲೂಕಿನ ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಷನ್‌ ಅಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಕಲ್ಪನಾ ಕೀರ್ತಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಶನ್‌ (ರಿ) ಅಧ್ಯಕ್ಷರಾದ ಕಲ್ಪನಾ ಕೀರ್ತಿ, ಮಹಿಳಾ ಪೊಲೀಸ್ ಪೇದೆ ಸುಜಾತಾ, ಉಪಾಧ್ಯಕ್ಷರಾದ ಕಾವ್ಯ ಕೆಸಗನಹಳ್ಳಿ, ಕಾರ್ಯದರ್ಶಿ ಪ್ರಮೀಳಾ ಹೆತ್ತೂರು ಸೇರಿದಂತೆ ನಿರ್ದೇಶಕರು ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.

Related posts

ಕಾರ್ಕಳದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳು

Bimba Prakashana

ಉದೇವಾರ ಕಾಫಿ ಬೆಳೆಗಾರರ ಸಂಘದಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ

Bimba Prakashana

ಗಮನ ಸೆಳೆದ ಶಿಕ್ಷಣ ಎಕ್ಸ್ ಪೋ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More