ವರದಿ ರಾಣಿ ಪ್ರಸನ್ನ
ಹೆನ್ನಲಿ ಗ್ರಾಮದ ಹೇಮಾವತಿ ನದಿಯಲ್ಲಿ ಇಬ್ಬರು ಮುಳುಗಿ ಸಾವು
ಸಕಲೇಶಪುರ ತಾಲ್ಲೂಕಿನ ಹೆನ್ನಲಿ ಗ್ರಾಮದ ಹೇಮಾವತಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ.
ಇಂದು ಶನಿವಾರ ಮಧ್ಯಾಹ್ನ 2 ಘಂಟೆಯ ಹೊತ್ತಿಗೆ ಏಳು ಜನರು ಹೇಮಾವತಿ ನದಿ ತೀರಕ್ಕೆ ಬಂದಿದ್ದರು. ಎತ್ತಿನಹೊಳೆ ಯೋಜನೆಯ ಪೈಪ್ ಲೈನ್ ಹಾದು ಹೋಗಿರುವ ಸ್ಥಳದ ಸಮೀಪ ಈಜುತ್ತಿದ್ದ ಸಂದರ್ಭದಲ್ಲಿ ಭರತ್ ಹಾಗು ಪ್ರಕಾಶ್ ಎಂಬ ಇಬ್ಬರು ನೀರಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.
ಈ ಘಟನೆಯ ಬಳಿಕ ಅಗ್ನಿಶಾಮಕ ಸಿಬ್ಬಂದಿ ಶವವನ್ನು ಹೊರ ತೆಗೆದಿದ್ದಾರೆ. ಹೇಮಾವತಿ ನದಿಯ ಬಳಿ ಮೃತದೇಹಗಳನ್ನು ತೆಗೆದು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಸಾಗಿಸಲಾಗಿದೆ.
