*ಈ ದಿನ ದಾಸೋಹ ದಿನ.*
ಜನರ ಕಷ್ಟದ ಹಾಲಾಹಲವನ್ನು ತಾವೇ ಪಾನ ಮಾಡಿದ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು.
ನಾಡಿನಲ್ಲೇ ಅಲ್ಲದೆ ರಾಷ್ಟ್ರದಲ್ಲಿ ಅದ್ಭುತ ಸಾಧನೆ ಮಾಡಿರತಕ್ಕಂಥ ಮಹಾಪುರಷ ಯಾರಾದರೂ ಇದ್ದರೆ ಅದು ಶ್ರೀ ಶ್ರೀ ಲಿಂಗೈಕ್ಯ ಶಿವಕುಮಾರ ಮಹಾಸ್ವಾಮಿಗಳು. ಸಿದ್ದಗಂಗಾ ಮಠದಲ್ಲಿ ಒಂದು ದಿನ ಕಳೆದರೆ ನಮ್ಮ ಎಲ್ಲರ ಮನಸ್ಸು ಬಹಳ ಹದಗೊಳ್ಳುತ್ತದೆ. ಅಂತಹ ಮಹಾವ್ಯಕ್ತಿ ನಮ್ಮ ಸಿದ್ಧಗಂಗಾ ಮಠದ ಮಹಾಸ್ವಾಮಿಗಳವರು. ಕರ್ನಾಟಕದಲ್ಲಿ ಅನೇಕ ಮಠಗಳನ್ನು ನೋಡಿಕೊಂಡು ಬಂದಾಗ ಏನಾದರೂ ಕೂಡ ಒಳ್ಳೆಯ ಕಾರ್ಯ,ಧಾರ್ಮಿಕ, ಶೈಕ್ಷಣಿಕ ಎಲ್ಲ ರಂಗಗಳಲ್ಲಿ ಅದ್ಭುತ ಸಾಧನೆಯಾಗಿದ್ದರೆ ಬಹುಶಃ ಭಾರತದ ಎಲ್ಲ ರಾಜ್ಯಗಳಿಗಿಂತಲೂ ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಎಂದು ಹೇಳಿದರೆ ಅದು ತಪ್ಪಾಗುವುದಿಲ್ಲ. ನಾಡಿನ ಎಷ್ಟೋ ಮಠಗಳಿಗೆ ಹೋಗಿದ್ದೇನೆ. ಬಹುಶಃ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಚೈತನ್ಯ ಶಕ್ತಿ, ನಾಡಿಗೆ ಅಲ್ಲ ರಾಷ್ಟ್ರಕ್ಕೆ ಅಲ್ಲ, ವಿಶ್ವಕ್ಕೆ ಚೈತನ್ಯ ನೀಡತಕ್ಕಂಥ ಮಹಾಶಕ್ತಿ ಯಾರಾದರೂ ಇದ್ದರೆ ಅವರು
ಸಿದ್ಧಗಂಗಾ ಮಹಾಸ್ವಾಮಿಗಳವರು, ನನ್ನ ದೃಷ್ಟಿಯಲ್ಲಿ ಹೇಳಬೇಕೆಂದರೆ ನಮ್ಮ ಸ್ವಾಮೀಜಿಯವರು ಕಾವಿಬಟ್ಟೆಗೆ ಶಕ್ತಿಯನ್ನು ನೀಡಿದ್ದಾರೆ. ಐದು ಸಾವಿರ ವಿದ್ಯಾರ್ಥಿಗಳು ಉಣ್ಣತಕ್ಕಂಥ ಪ್ರಸಾದ ನಿಲಯ ಇದು ಭಾರತದಲ್ಲಿಯೇ ಮೊಟ್ಟಮೊದಲನೆಯದು. ಪ್ರತಿ ದಿನ ಹತ್ತು ಸಾವಿರ ಮಂದಿಗೆ ದಾಸೋಹ ಇದು ಜಗತ್ತಿನ ವಿಸ್ಮಯ.
ಸಮಾಜದಲ್ಲಿ ಶಕ್ತಿ ಬರಬೇಕಾದರೆ, ರಾಷ್ಟ್ರಕ್ಕೆ ಶಕ್ತಿ
ಬರಬೇಕಾದರೆ, ವ್ಯಕ್ತಿಗೆ ಶಕ್ತಿ ಬರಬೇಕಾದರೆ ಆಧ್ಯಾತ್ಮಿಕವಾಗಲೀ,ಸಾಮಾಜಿಕರಾಗಲೀ ಇಂದು ತಮ್ಮ ಆಧ್ಯಾತ್ಮಿಕ ಸಾಧನೆಯಿಂದ ತಮ್ಮ ಆರ್ಥಿಕ
ಬಲದಿಂದ ತಮ್ಮ ಜೋಳಿಗೆಯಿಂದ ತಾವೇ ತಾವಾಗಿ ಬಡಬಗ್ಗರ ಜೀವನಕ್ಕೆ ಸಹಕಾರಿಯಾದ ಮಹಾಜ್ಯೋತಿ ಸಿದ್ಧಗಂಗಾ ಮಹಾಸ್ವಾಮಿಗಳ ಕಾರ್ಯ ನಾವೆಲ್ಲ
ನೋಡುತ್ತಿದ್ದೇವೆ. ನಮ್ಮ ನಾಡಿನಲ್ಲಿ ಯಾರಾದರೂ ಬೇರೆ ದೇಶದವರು ಬಂದರೆ ತೋರಿಸತಕ್ಕಂಥ ರಾಷ್ಟ್ರೀಯ ವ್ಯಕ್ತಿತ್ವದ ವ್ಯಕ್ತಿ ಯಾರಾದರೂ ಇದ್ದರೆ ಸಿದ್ದಗಂಗಾ
ಶಿವಕುಮಾರ ಮಹಾಸ್ವಾಮೀಜಿಯವರು ಆಗಿದ್ದರು. ಬಹುಶಃ ಸಿದ್ಧಗಂಗಾ ಮಹಾಸ್ವಾಮಿಗಳವರು ನಮ್ಮ ದೇಶದಲ್ಲಿ ಹುಟ್ಟದೆ ಬೇರೆ ದೇಶದಲ್ಲಿ ಹುಟ್ಟಿದ್ದರೆ ಇವರಿಗೆ ನಿಜವಾಗಿಯೂ ನೊಬೆಲ್ ಪ್ರಶಸ್ತಿ ಸಿಗುತ್ತಿತ್ತು.ಅದು ನಮ್ಮ ದುರ್ದೆವ ಆ ರೀತಿಯಾಗಿರತಕ್ಕಂಥ ಮಹಾನ್ ಕಾರ್ಯವನ್ನು ಮಾಡಿದ್ದಾರೆ. ತಮ್ಮ ನೂರ ಹನ್ನೊಂದು ವರ್ಷದ ಅವಧಿಯಲ್ಲಿ ಸಮಾಜಕ್ಕೆ ಏನು ಬೇಕು, ರಾಷ್ಟ್ರಕ್ಕೆ ಏನು ಬೇಕು, ಬಡಬಗ್ಗರಿಗೆ ಏನು ಬೇಕು, ವಿದ್ಯಾರ್ಥಿಗಳಿಗೆ ಯಾವ ಯಾವ ರೀತಿ ಏನೇನು ಬೇಕು, ಶೈಕ್ಷಣಿಕ ರಂಗದಲ್ಲಿ ಏನು ಮಾಡಬೇಕು ಅದೆಲ್ಲವನ್ನೂ ಕೂಡ ಮಾಡಿದ್ದಾರೆ. ನಿಜವಾಗಿಯೂ ಕೂಡ ನಾವೆಲ್ಲರೂ ಧನ್ಯರು. ಮನುಷ್ಯ ಇರುತ್ತಾನೆ, ಹೋಗುತ್ತಾನೆ, ಅದರೆ ಅವರು ಮಾಡಿದ ಕಾರ್ಯ, ಕಾರ್ಯದ ವ್ಯಾಪ್ತಿ, ಕಾರ್ಯದ ಕೀರ್ತಿ, ಅವರ ಶಕ್ತಿ ಅಮೋಘವಾಗಿರತಕ್ಕಂಥ ಮಹತ್ ಸಾಧನೆ ಇವುಗಳೆಲ್ಲ ನಿಜವಾಗಿಯೂ ಕೂಡ ಉಳಿಯತಕ್ಕಂಥ ಕಾರ್ಯ ಎಲ್ಲಾದರೂ ಉಳಿದಿದೆ ಎಂದರೆ ನಾವು ಸಿದ್ಧಗಂಗೆಗೆ
ಹೋಗಬೇಕು ಪ್ರಸಾದ ಸ್ವೀಕರಿಸಬೇಕು ಸಾಮೂಹಿಕ ಪ್ರಾರ್ಥನೆ ಕಣ್ತುಂಬಿಸಿಕೊಳ್ಳಬೇಕು..
ಕರ್ನಾಟಕದಲ್ಲಿರುವ ಎಲ್ಲಾ ಮಠದ ಸ್ವಾಮೀಜಿಗಳಿಗೂ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಪವಿತ್ರಾತ್ಮರು.. ಹಿರಿಯರು.. ಯೋಗಿಗಳು.. ಪರಮ ತಪಸ್ವಿಗಳು ಎಲ್ಲಾ ಗುರುಗಳಿಗೂ ಆದರ್ಶಪ್ರಾಯರಾಗಿದ್ದಾರೆ.
ಕಷ್ಟ ಕಾಲ, ಬರಗಾಲ ಗಳಿಂದ ಹಿಡಿದು ಇಲ್ಲಿಯವರೆಗೂ ಲಕ್ಷಾಂತರ ಜನರಿಗೆ ಅನ್ನಪ್ರಸಾದ ಯಾವ ರೀತಿ ಮಾಡಿದರು ಅವರಲ್ಲಿ ಅದ್ಯಾವ ಶಕ್ತಿ ಇತ್ತು .ಪವಾಡವೆಂದರೆ ಏನೆಂದು ನಿಜವಾಗಿ ಅರಿತುಕೊಳ್ಳಬೇಕಾದರೆ ಅದನ್ನು ನಾವು ಸಿದ್ದಗಂಗಾ ಕ್ಷೇತ್ರದಲ್ಲಿ ನೋಡಿ ಅರಿತುಕೊಳ್ಳಬೇಕು ಪಾವಡ ಎನ್ನುವುದು ಇಲ್ಲಿ ಸಾಕಾರವಾಗಿದೆ ಎಂತಹ ಅದ್ಭುತವಾದ ಕ್ರಿಯೆಯಲ್ಲಿ ನಡೆದಿದೆ ದಾಸೋಹಕ್ಕೆ ಅರ್ಥ ಬಂದಿರುವುದು ಈ ಕ್ಷೇತ್ರದಲ್ಲಿ,ಕಾಯಕಕ್ಕೆ ಮಹತ್ವ ಬಂದಿರುವುದು ಈ ಕ್ಷೇತ್ರದಿಂದ.
ಉದ್ದನಶಿವಯೋಗಿಗಳು ಯಾರಾದರೂ ಬಂದರೆ ಹೇಳುತ್ತಿದ್ದರಂತೆ ಕಾಯಕ ಮಾಡದೆ ಇಲ್ಲಿ ಪ್ರಸಾದ ತೆಗೆದುಕೊಳ್ಳುವಂತಿಲ್ಲವೆಂದು ಇಲ್ಲಿ ಬಂದಿರುವವರೆಲ್ಲರೂ ಕಾಯಕ ಮಾಡುವುದು ಕಡ್ಡಾಯ. ಇದು ಜೀವನದಲ್ಲಿ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕೆ ಒಂದು ಮಹಾನ್ ಸಂದೇಶವಾಗಿತ್ತು. ಶ್ರೀ ಉದ್ಯಾನ ಶಿವಯೋಗಿಗಳ ಕನಸನ್ನು ಸಹಕಾರ ಗೊಳಿಸಿದ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಠಗಳು ಏನು ಕೆಲಸ ಮಾಡಬೇಕು,, ಹೇಗೆ ಮಠಾಧೀಶರು ತಮ್ಮ ಕರ್ತವ್ಯ ನಿರ್ವಹಿಸಬೇಕು,, ಮಠಗಳಿಗೂ ಸಮಾಜಕ್ಕೂ ಇರತಕ್ಕಂತಹ ಸಂಬಂಧವೇನು ಎನ್ನುವುದನ್ನು ಸಮಾಜಕ್ಕೆ ಜಗತ್ತಿಗೆ ತೋರಿಸಿಕೊಟ್ಟರು. ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಈ ಮಹಾಕಾರ್ಯ,ಮಹಾತಪಸ್ಸು ಏನಿದೆ ಇದಕ್ಕೆ ನಾವು ನಮೋ ನಮೋ ಎನ್ನುವ ನಮನಗಳನ್ನು ಸಲ್ಲಿಸೋಣ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳು ಮಾಡಿದ ಕಾರ್ಯಕ್ಕೆ ನಮ್ಮ ನಾಡು ಕೃತಜ್ಞವಾಗಿರಬೇಕು, ಸಮಾಜ ಕೃತಜ್ಞವಾಗಿರಬೇಕು, ಸರ್ಕಾರ ಕೃತಿಜ್ಞವಾಗಿರಬೇಕು ಅಂತ ಅದ್ಭುತ ಕೆಲಸ ಮಾಡಿದ ಇಂತಹ ಮಹಾಸ್ವಾಮಿಗಳವರಿಗೆ ಇವತ್ತು ಸಮಾಜ ಏನು ಕೊಟ್ಟ ಸಮರ್ಪಣೆ ಮಾಡಿದರು ಸಾಲದು.ಪರಮಪೂಜ್ಯರ ಆದರ್ಶಗಳು ಏನಿದ್ದವು ಅದನ್ನು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಅದು ಪೂಜ್ಯ ಮಹಾಸ್ವಾಮೀಜಿಗಳವರಿಗೆ ನಾವು ಸಲ್ಲಿಸುವ ಕೃತಜ್ಞತೆಯ ಕಾಣಿಕೆಯಾಗಿದ್ದು ಈ ಒಂದು ಮನೋಭಾವ ಬೆಳೆದು ಬರಬೇಕು ಎಂಬುದು ನನ್ನಂತೆ ಹಲವರ ಸದಾಶಯವು ಕೂಡ ಆಗಿದೆ ಶರಣು ಶರಣಾರ್ಥಿ.
ನಂದಿ ಬಟ್ಟಲು ಹೂವಿನ ಮರವನ್ನು ಕಡಿದದ್ದಕ್ಕೆ ಊಟ ಬಿಟ್ಟಿದ್ದ ಶ್ರೀಗಳು.
ಒಮ್ಮೆ ಮಧ್ಯಾಹ್ನದ ಪೂಜೆಗೆ ಹಳೇಮಠಕ್ಕೆ ದಯಮಾಡಿಸಿದ್ದರು. ಅಲ್ಲಿ ಯಾವುದೊ
ಉದ್ದೇಶಕ್ಕಾಗಿ ಮಠದ ಸಿಬ್ಬಂದಿಗಳು ಒಂದು ಹಳೆಯ ನಂದಿ
ಬಟ್ಟಲು ಹೂವಿನ ಮರವನ್ನು ಕಡಿದುಹಾಕಿದ್ದರು. ಬಂದು
ನೋಡಿದ ಪೂಜ್ಯರು ಮರ ಇಲ್ಲದಿರುವುದು ಅವರ ಕಣ್ಣಿಗೆ
ಗೋಚರಿಸಿತು. ಇಲ್ಲಿದ್ದ ಮರ ಏನಾಯ್ತು ಎಂದು ಶಿಷ್ಯರನ್ನು
ಕೇಳಿದರು. ‘ಕಡಿದುಹಾಕಲಾಗಿದೆ ಬುದ್ದಿ’ ಎಂದು ಹೇಳಿದರು.
ಗುರುಗಳಿಗೆ ತುಂಬಾ ಬೇಸರವಾಯ್ತು. ಅಸಮಧಾನದಿಂದಲೇ
ಅಲ್ಲಿಂದ ತೆರಳಿ ಸ್ನಾನ ಪೂಜೆ ಮುಗಿಸಿ ಪ್ರಸಾದ ಸ್ವೀಕರಿಸದೆ
ಕಛೇರಿಗೆ ತೆರಳಿದರು. ಎಲ್ಲರಿಗೂ ಆತಂಕ ಶುರುವಾಯ್ತು. ಏನು ಮಾಡುವುದು ಈಗ ಎನ್ನುವ ಗೊಂದಲಕ್ಕೆ ಎಲ್ಲರೂ ಒಳಗಾದರು.ಕಛೇರಿಗೆ ಹೋಗಿ ಎಲ್ಲರೂ ನಿವೇದಿಸಿಕೊಂಡರೂ ಬುದ್ದಿಯವರು ದಯಮಾಡಿಸಲಿಲ್ಲ. ಮತ್ತೆ ರಾತ್ರಿ ಎಂದಿನಂತೆ ಬಂದು ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆದು ಸ್ನಾನ ಪೂಜೆಗೆ ಹೊರಟರು.
ಪೂಜೆ ಮುಗಿದ ನಂತರ ಪ್ರಸಾದಕ್ಕೆ ಅಣಿಗೊಳಿಸಿಕೊಂಡಿದ್ದ
ಶಿಷ್ಯರು ಪ್ರಸಾದ ಬಡಿಸಲು ಸಿದ್ಧರಾದರು. ಆದರೆ ಸ್ವಾಮೀಜಿ
ಪ್ರಸಾದ ಸ್ವೀಕರಿಸದೆ ಪೂಜೆ ಮನೆಯಿಂದ ಹೊರಬಂದೇ ಬಿಟ್ಟರು.ಆವಾಗ ಮತ್ತಷ್ಟು ಆತಂಕಗೊಂಡ ಶಿಷ್ಯರು ಬುದ್ದಿಯವರ ಕೋಣೆಗೆ ಹೋಗಿ ‘ಮರ ಕಡಿದದ್ದು ತಪ್ಪಾಯ್ತು ಬುದ್ದಿ ಇನ್ನು ಮುಂದೆ ಈ ರೀತಿಯಲ್ಲಿ ಯಾವ ಮರವನ್ನು ಕಡಿಯುವುದಿಲ್ಲ ದಯಮಾಡಿ ಪ್ರಸಾದ ಸ್ವೀಕರಿಸಿ’ ಎಂದು ಕೆಲವು ಮಠಗಳ ಪೂಜ್ಯರುಗಳು ಪ್ರಾರ್ಥಿಸಿಕೊಂಡಾಗ ರಾತ್ರಿ ಹನ್ನೊಂದು ಗಂಟೆಯಲ್ಲಿ ಬಂದು ಪ್ರಸಾದ ಸ್ವೀಕರಿಸಿದರಂತೆ. ಈ ಮೂಲಕ ಬಡ ಮಕ್ಕಳನ್ನು ಪ್ರೀತಿಸುವಷ್ಟೇ ಆಸ್ಥೆಯಿಂದ ಗಿರಮರಗಳನ್ನು ಕಾಪಾಡುತ್ತಿದ್ದರು ಎನ್ನುವುದು ಅವರಿಗೆ ಪರಿಸರದ ಬಗ್ಗೆ ಇದ್ದ ಕಾಳಜಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.
ಶ್ರೀ ಕ್ಷೇತ್ರದಲ್ಲಿ ಒಂದು ದಿನದ ದಾಸೋಹಕ್ಕೆ
ತಗಲುವ ಅಂದಾಜು ಖರ್ಚಿನ ವಿವರಗಳು.
8,000 ವಿದ್ಯಾರ್ಥಿಗಳ ಎರಡು ಹೊತ್ತಿನ ಊಟ,
ಮಧ್ಯಾಹ್ನದ ಉಪಹಾರ ಮತ್ತು ಪ್ರತಿದಿನ ಬರುವ ಭಕ್ತರಿಗೆ (ಹಬ್ಬ,ಹರಿದಿನಗಳನ್ನು ಬಿಟ್ಟು)
ಅಕ್ಕಿ. 50 ಕ್ವಿಂಟಾಲ್
ರಾಗಿಹಿಟ್ಟು. 30 ಕ್ವಿಂಟಾಲ್
ತೊಗರಿಬೇಳೆ. 5 ಕ್ವಿಂಟಾಲ್
ತರಕಾರಿ. 5 ಕ್ವಿಂಟಾಲ್
ಈರುಳ್ಳಿ. 5 ಕ್ವಿಂಟಾಲ್
ರವೆ (ಉಪ್ಪಿಟ್ಟಿಗೆ). 7 ಕ್ವಿಂಟಾಲ್
ಉಪ್ಪು. 2 ಕ್ವಿಂಟಾಲ್
ಸಾಂಬಾರು ಪುಡಿ. 2 ಕ್ವಿಂಟಾಲ್
ಖಾರದಪುಡಿ. ಮೇಲಿನ ಸಾಮಗ್ರಿಗಳಿಗುಣವಾಗಿ
ತೆಂಗಿನ ಕಾಯಿ. 600
ಹುಣಸೇಹಣ್ಣು. 90 ಕೆಜಿ
ಹಾಲು(ಮಜ್ಜಿಗೆಗೆ). 500 ಲೀಟರ್
ಮೆಣಸಿನ ಕಾಯಿ. 40 ಕೆಜಿ
ಕಡಲೆಕಾಯಿ ಎಣ್ಣೆ. 250 ಕೆಜಿ
ಸುಮಾರು ಒಂದು ದಿನಕ್ಕೆ ಖರ್ಚಿನ ಅಂದಾಜು ಒಂದು ಲಕ್ಷದ
ಇಪ್ಪತ್ತೈದು ಸಾವಿರ ರೂಪಾಯಿಗಳು.
ಶ್ರೀಗಳವರ ದಿನಚರಿ ವಿಸ್ಮಯ ನೋಡಿ
1) ಬೆಳಗಿನ ಜಾವ 2.15 ನಿಂದ ಜಾಗೃತಿ
2) 2.45 ರವರೆಗೆ ಶರಣರ ಈ ತತ್ವ ಪಠಣ
3) 3.00 ಸ್ನಾನಾದಿ ನಿತ್ಯ ಕರ್ಮಗಳ ವಿಧಿ
4) 3.00 ರಿಂದ 5.30 ಶಿವಪೂಜೆ ಆ ಪ್ರಸಾದ ಸ್ವೀಕಾರ
5) 5.30ರಿಂದ 6.00 ಮುಂಜಾನೆ ಸಾಮೂಹಿಕ ಪ್ರಾರ್ಥನೆ
6) ಬೆಳಿಗ್ಗೆ 6.15 ರಿಂದ 7.10 ರವರೆಗೆ ವಿದ್ಯಾರ್ಥಿಗಳಿಗೆ
ಸಂಸ್ಕೃತ ಪಾಠ ಬೋಧನೆ
7) 7.10ರಿಂದ 74ರವರೆಗೆ ಬಂದ ದಿನಪತ್ರಿಕೆಗಳ ವೀಕ್ಷಣೆ
8) 7.40 ರಿಂದ 8.40 ರವರೆಗೆ ಪತ್ರ ವ್ಯವಹಾರ
9) 8.40 ರಿಂದ 9.00 ಟಪಾಲು ಪರಿಶೀಲನೆ
10) 9.5 ರಿಂದ 9.10ರವರೆಗೆ ಪ್ರಸಾದ ವ್ಯವಸ್ಥೆಯ
ಪರಿಶೀಲನೆ
11) 9,10 ರಿಂದ 9.30 ರವರೆಗೆ ಶ್ರೀಕ್ಷೇತ್ರದ ಕಾರ್ಯವೀಕ್ಷಣೆ
12) 10.30 ರಿಂದ 10.45 ರವರೆಗೆ ಸ್ವತಃ ಶ್ರೀಗಳೇ ಪತ್ರಗಳಿಗೆ
ಉತ್ತರಿಸುವುದು
13) 10.45 ರಿಂದ 12.00 ರವರೆಗೆ ವಿದ್ಯಾರ್ಥಿಗಳ ಊಟದ
ವ್ಯವಸ್ಥೆಯ ಪರಿಶೀಲನೆ
15) ಮಧ್ಯಾಹ್ನ 12.00 ರಿಂದ 1.00 ಗಂಟೆಯವರೆಗೆ ಬಂದ
ಭಕ್ತರಿಗೆ ಮಂಚದ ಹತ್ತಿರ ಯಂತ್ರಧಾರಣೆ
16) ಮಧ್ಯಾಹ್ನ 1.00 ರಿಂದ 2.30 ರ ವರೆಗೆ ಭಕ್ತಾದಿಗಳಿಗೆ
ಸಂದರ್ಶನ ಹಾಗೂ ಕಾರ್ಯಾಲಯದಲ್ಲಿ ಕಾರ್ಯಮಗ್ನತೆ
17) ಮಧ್ಯಾಹ್ನ 2.30 ರಿಂದ 3.30 ಪೂಜೆ ಮತ್ತು ಪ್ರಸಾದ
ಸ್ವೀಕಾರ
18) ಸಂಜೆ 3.30 ರಿಂದ 5.30 ಕಾರ್ಯಾಲಯದಲ್ಲಿ ಸಂಸ್ಥೆಯ
ಕಾರ್ಯಚಟುವಟಿಕೆಗಳ ಪರಿಶೀಲನೆ
19) ಸಂಜೆ 5.30 ರಿಂದ 5.45 ಪ್ರಸಾದ ಸಿದ್ಧತೆಯ ಪರಿಶೀಲನೆ
20) .ಸಂಜೆ 5.45 ರಿಂದ 6.30 ಗದ್ದೆ, ತೋಟ, ಕಟ್ಟಡ ಕೆಲಸಗಳ ಮೇಲ್ವಿಚಾರಣೆ
21) 6.30 ರಿಂದ 7.00 ವಿದ್ಯಾರ್ಥಿಗಳ ಸಾಮೂಹಿಕ
ಪ್ರಾರ್ಥನೆಯಲ್ಲಿ
22) ರಾತ್ರಿ 7.00 ರಿಂದ 7.15 ವಿದ್ಯಾರ್ಥಿಗಳಿಗೆ ಆಶೀರ್ವಚನ
23) ರಾತ್ರಿ 7.15 ರಿಂದ 7.45 ಭಕ್ತಾದಿಗಳ ಸಂದರ್ಶನ ಹಾಗೂ
ಕಾರ್ಯಾಲಯಗಳ ಕಾರ್ಯ ಪರಿಶೀಲನೆ
24) ರಾತ್ರಿ 7.45 ರಿಂದ 8.00 ಪ್ರಸಾದ ನಿಲಯದ ವ್ಯವಸ್ಥೆಯ
ವೀಕ್ಷಣೆ
25) ರಾತ್ರಿ 8.00 ರಿಂದ 8.30 ಕಾರ್ಯಾಲಯದ ವ್ಯವಹಾರ
26) .ರಾತ್ರಿ 8.30ರಿಂದ 7 45 ಶರಣರ ತತ್ವ ಪಠಣ
27) ರಾತ್ರಿ 8.45 ರಿಂದ 9.00 ಸ್ನಾನ
28) ರಾತ್ರಿ 9.00 ರಿಂದ 9.30 ಪೂಜೆ ಹಾಗೂ ಲಘು ಪ್ರಸಾದ
ಸ್ವೀಕಾರ
29) ರಾತ್ರಿ 9.30 ರಿಂದ 10.30 ನಾಟಕದ ಅಭ್ಯಾಸ ಮೇಲ್ವಿ
ಚಾರಣೆ
30) ರಾತ್ರಿ 10.30 ರಿಂದ 10.45 ದಿನಚರಿ ಬರೆಯುವುದು.
31) ರಾತ್ರಿ 11 ಗಂಟೆಗೆ ನಿದ್ರಾಮುದ್ರೆ
ಈ ಮಧ್ಯೆ ಬಿಡುವು ಮಾಡಿಕೊಂಡು ಭಕ್ತರ ಹಾಗೂ
ಸಾರ್ವಜನಿಕರ ಕೋರಿಕೆಯ ಮೇಲೆ ಪೂಜೆ, ಸಮಾರಂಭಗಳಲ್ಲಿ ಭಾಗವಹಿಸುವುದು ಗ್ರಾಮಾಂತರ ಬಂಧುಗಳ ಬಗೆಹರಿಯದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವುದು… ಇತ್ಯಾದಿ.
ಯಡೇಹಳ್ಳಿ”ಆರ್”ಮಂಜುನಾಥ್.
9901696220
previous post
next post