“ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣದಲ್ಲಿ ಮಾಹಿತಿ ತಂತ್ರಜ್ಞಾನ ಅವಶ್ಯಕವಾಗಿದೆ ” ಎಂದು ಹಂಜಲಿಗೆ ಮಂಜುನಾಥ್, ಸಂಸ್ಥಾಪಕರು, ಹಂಜಲಿಗೆ ಕಾಳಿಂಗಪ್ಪ ವೆಲ್ ಫೇರ್ ಅಸೋಸಿಯೇಷನ್ ಅಭಿಪ್ರಾಯ ಪಟ್ಟರು.
ಅವರು ಹಾಸನ ಜಿಲ್ಲೆ ಆಲೂರು ತಾಲೂಕಿನ ಟೀ ಗುಡೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 2 ಲಕ್ಷ ವೆಚ್ಚ ಮಾಡಿ ಅರ್ಚನಾ ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಿದರು.
ಇವರು ಪ್ರತಿ ವರ್ಷವೂ ಮೂರರಿಂದ ನಾಲ್ಕು ಸ್ಮಾರ್ಟ್ ಕ್ಲಾಸ್ ಗಳನ್ನು ಪ್ರಾರಂಭಿಸುತ್ತಾರೆ. 14ನೇ ಸ್ಮಾರ್ಟ್ ಕ್ಲಾಸ್ ಆಗಿದ್ದು ಅದರಲ್ಲಿ 11 ಸ್ಮಾರ್ಟ್ ಕ್ಲಾಸ್ ಗಳು ಆಲೂರ್ ತಾಲೂಕಿನಲ್ಲಿ ಪ್ರಾರಂಭಿಸಿ ಸುಮಾರು 500 ಹೆಚ್ಚು ಮಕ್ಕಳು ಕಂಪ್ಯೂಟರ್ ಕಲಿಯುವ ವ್ಯವಸ್ಥೆ ಮಾಡಿದ್ದಾರೆ. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ಹಿರಿಯ ಸಮಾಜಸೇವಕರ್ತೆ, ನಿವೃತ್ತ ಶಿಕ್ಷಕಿ, ಸ್ಕೌಟ್ಸ್ ಅಂಡ್ ಗೈಸ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ಕಾಂಚನಮಾಲ ಅವರು ಭಾಗವಹಿಸಿದ್ದರು. ಇವರು ಮಾತನಾಡುತ್ತಾ ಮಂಜುನಾಥ್ ಕಾಳಿಂಗಪ್ಪ ರವರ ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಬೆಳೆಸುವ ಕಾಳಜಿಗೆ ಅಭಿನಂದಿಸುತ್ತ, ಈ ರೀತಿ ಪ್ರಾಥಮಿಕ ಹಂತದಲ್ಲಿ ಸ್ಮಾರ್ಟ್ ಕ್ಲಾಸನ್ನು ಪ್ರಾರಂಭಿಸಿ, ಮೊದಲನೇ ತರಗತಿಯಲ್ಲಿ ಗ್ರಾಮೀಣ ಮಕ್ಕಳಿಗೆ ಡಿಜಿಟಲ್ ಎಜುಕೇಶನ ಕಲಿಸುತ್ತಿರುವುದು ಕರ್ನಾಟಕದಲ್ಲಿ ಮೊದಲು ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸ್ಮಾರ್ಟ್ ಕ್ಲಾಸ್ ನಲ್ಲಿ ಒಂದು ಲ್ಯಾಪ್ಟಾಪ್, ಒಂದು ಪ್ರೊಜೆಕ್ಟರ್, ಒಂದು ಪ್ರಿಂಟರ್, ಎರಡು ಕಂಪ್ಯೂಟರ್, ಸ್ಪೀಕರ್ಸ್, ಪ್ರೊಜೆಕ್ಟ್ ಸ್ಟ್ಯಾಂಡ್ ಕೊಡಲಾಯಿತು. ಇದರ ಜೊತೆಗೆ ಎಲ್ಲಾ ಮಕ್ಕಳಿಗೂ ಶಾಲಾ ಬ್ಯಾಗ್ ಗಳನ್ನು ಕೂಡ ಮಂಜುನಾಥ್ ಅವರ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಗಿರೀಶ್, SDMC ಅಧ್ಯಕ್ಷರು, ಪರಮೇಶ್ ಅಧ್ಯಕ್ಷರು ಗ್ರಾಮ ಪಂಚಾಯತಿ, ದಿವಾಕರ್ ECO, ಮಂಜುನಾಥ್CRP, SDMC ಸದಸ್ಯರು, ಪೋಷಕರು ಭಾಗವಹಿಸಿದ್ದರು