ವರದಿ ರಾಣಿ ಪ್ರಸನ್ನ
ಸಕಲೇಶಪುರದ ಹಾನುಬಾಳು ಹೋಬಳಿಯಲ್ಲಿ ರಾತ್ರಿ ಸುರಿದ ಮಳೆಗೆ ಹೊಳೆಯಂತಾದ ಚಾಗಳ್ಳಿ , ವೆಂಕಟಹಳ್ಳಿ, ರಾಗಿಗುಡ್ಡ ಗ್ರಾಮ.
ಆಧುನಿಕತೆಯ ಈ ಕಾಲದಲ್ಲೂ ರಸ್ತೆ ಮತ್ತು ಚರಂಡಿಯ ವ್ಯವಸ್ಥೆ ಇಲ್ಲದ ವೆಂಕಟಹಳ್ಳಿ ಯಿಂದ ರಾಗಿಗುಡ್ಡದ ವರೆಗೆ ಸರಿಯಾದ ರಸ್ತೆ ಸಂಪರ್ಕವಿಲ್ಲದೆ, ಹಾಗೆಯೇ ಮದ್ಯದಲ್ಲಿ ಬರುವ ಚಾಗಳ್ಳಿ ಗ್ರಾಮಕ್ಕೂ ಕೂಡ ರಸ್ತೆ ಸಂಪರ್ಕವಿಲ್ಲದೆ ಯಾವುದೇ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ಬಂದರೆ ರಸ್ತೆಯಲ್ಲಿಯೇ ನೀರು ಧಾರಾಕಾರವಾಗಿ ಹರಿದು ರೈತರು ಎಲ್ಲಿಯೂ ಹೋಗಲಾರದೆ ರೈತರು ಪರದಾಡುವಂತಾಗಿದೆ.
ಈ ಪರಿಸ್ಥಿತಿ ನೋಡಿ ರೋಸಿ ಹೋಗಿರುವ ಗ್ರಾಮಸ್ಥರು ಈ ರಸ್ತೆಯ ಬಗ್ಗೆ ಅಣಕ ಮಾಡ ತೊಡಗಿದ್ದಾರೆ.
ಗ್ರಾಮಕ್ಕೆ ಇಲ್ಲಿಗೆ ಬರುವಂತಹ ಬಂಧುಗಳು ಮತ್ತು ಸ್ನೇಹಿತರಲ್ಲಿ ವಿನಂತಿ, ಏನೆಂದರೆ ಯಾರು ರಸ್ತೆ ಮೇಲೆ ಚಲಿಸುವ ವಾಹನದಲ್ಲಿ ಬರದೆ ನೀರಿನಲ್ಲಿ ತೇಲುವ ತೆಪ್ಪ ತೆಗೆದುಕೊಂಡು ಬರಬೇಕು ಎಂದು.
ಈ ಬಾರಿ ನಡೆದ ಹಾನುಬಾಳು ಹೋಬಳಿ ಹೋಬಳಿಯ ಕ್ಯಾಮನಹಳ್ಳಿ ಗ್ರಾಮ ಸಭೆಯಲ್ಲು ಕೂಡ ಇದರ ಕುರಿತು ಸಂತೋಷ್ ಚಾಗಳ್ಳಿ ಅವರು ಪ್ರಸ್ತಾಪಿಸಿದ್ದಾರೆ.
ಆದರೆ ರಸ್ತೆ ಯಾವಾಗ ಆಗುತ್ತೋ ತಿಳಿದಿಲ್ಲ
previous post
next post