“ಅವರವರ ಪ್ರಾರಬ್ಧ ಕರ್ಮಕ್ಕನುಸಾರವಾಗಿ
ಭಗವಂತನು ಜೀವರಾಶಿಯ ಅದೃಷ್ಟವನ್ನು
ನಿಯಂತ್ರಿಸುತ್ತಾನೆ.ಯಾವುದು ಅಸಂಭವವೋ
ಅದನ್ನು ಮಾಡಲು ನೀವೆಷ್ಟು ಪ್ರಯತ್ನಿಸಿದರೂ
ಸಾಧ್ಯವಾಗುವದಿಲ್ಲ.
ಯಾವದು ಆಗಬೇಕೋ
ಅದು ಏನೇ ಮಾಡಿದರೂ ಅದನ್ನು ತಪ್ಪಿಸಲು
ಸಾಧ್ಯವಾಗುವದಿಲ್ಲ.ಇದು ನಿಶ್ಚಿತ. ಅದೇ ರೀತಿ ವಿಶ್ವವಿಖ್ಯಾತ ಮೈಸೂರು ದಸರದಲ್ಲಿ ಅಂಬಾರಿಯನ್ನ ಎಂಟು ವರ್ಷಗಳ ಕಾಲ ತನ್ನ ಮೇಲೆ ಹೊತ್ತು ಸೇವೆಯನ್ನು ಸಲ್ಲಿಸಿದ್ದ ಅರ್ಜುನ, ಆದರೆ ಅವನ ಹಣೆ ಬರವೇ ಬೇರೆ ಇತ್ತು ಹೊತ್ತ ದೇವರೇ ಅವನ ರಕ್ಷಣೆಗೆ ಬರಲಿಲ್ಲ.
ಇದೇ ಅಲ್ಲವೇ ವಿಧಿ ನಿಯಮ ,ಇದೆ ಕಳೆದ ವರ್ಷ ಆನೆಯ ಸೆರೆಯ ಕಾರ್ಯಾಚರಣೆಯಲ್ಲಿ ಕಾಡಾನೆಯೊಂದಿಗೆ ಸೆಣೆಸಾಡಿ ಸಕಲೇಶಪುರ ತಾಲೂಕು, ಎಸಳೂರು ಹೋಬಳಿ, ದಬ್ಬಳ್ಳಿಕಟ್ಟೆಯಲ್ಲಿ ವೀರ ಮರಣ ಅಪ್ಪಿದ ಅರ್ಜುನನ ಸಮಾಧಿಗೆ ಎಸಳೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಂದ ಪೂಜೆ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪವಿತ್ರ ಮಂಜುನಾಥ್ ಸುಶೀಲಾಮುರಿಗೆಂದ್ರಪ್ಪ, ಪಿ ಎಸ್ ಪ್ರಸನ್ನ ಕುಮಾರ್, ಸಂಗಮೇಶ್, ಜೈ ರಾಜ್, ಕೈಲಾಸ್ ಮೂರ್ತಿ, ಹರ್ಷಿತ್, ರಾಜೇಶ್ ದೊಡ್ಡಮಠ, ಗುರು ಚರಣ ಸೇವಕ ಆಧ್ಯಾತ್ಮ ಚಿಂತಕ ನವೀನ್ ಆರಾಧ್ಯ ಹಾಗೂ ಅರಣ್ಯ ಇಲಾಖೆಯ ಶ್ರೀಯುತ ಪ್ರದೀಪ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಈ ಸಮಯದಲ್ಲಿ ಎಸಳುರಿನ ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ನಡೆಯಿತು