Blog

ಕಾಫಿ ಆಚರಣೆಗೆ ಈ ಒಂದು ದಿನ



ಕಾಫಿ ಕಾಫಿ ಘಮಘಮಿಸುವ ಕಾಫಿ,
ರುಚಿ ತರಿಸುವ ಮಲೆನಾಡಿನ ಕಾಫಿ,
ಮೊದಲಿಡುವ ಕೊಡಗಿನ ಕಾಫಿ,
ತಲೆ ನೋವಿಗೆ  ಔಷಧಿ ಕಾಫಿ.

ಕಾಫಿ ಅದ್ಭುತ ಪೇಯ. ಕಾಫಿಯನ್ನು ಹೆಚ್ಚು ಹೆಚ್ಚು ಕುಡೀರಿ… ಆಂತರಿಕ ಬಳಕೆಯನ್ನು ಹೆಚ್ಚಿಸಿರಿ. ಕಾಫಿ ಬೆಳೆಗಾರರೆಂದರೆ ಎಲ್ಲರೂ ಹೇಳೋದು ಒಂದೇ ಮಾತು, ನೀವೇನು ಬಿಡ್ರಪ್ಪ ಕಾಫಿ ಬೆಳೆಗಾರರು. ಶ್ರೀಮಂತರು, ಸಮೃದ್ಧ ಮಲೆನಾಡಿನಲ್ಲಿರುವ ನೀವೆಷ್ಟು ಅದೃಷ್ಟವಂತರು. ಅಂತಾರೆ ಆದರೆ ಇಡೀ ವರ್ಷ ಆಳುಕಾಳುಗಳ ತೊಂದರೆ, ಅಕಾಲಿಕ ಮಳೆ, ಬರ, ಗುಡ್ಡಕುಸಿತ, ಕೊಳೆರೋಗ ಒಂದಾ ಎರಡಾ… ಈ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿನಿಂತು, ಧೈರ್ಯದಿಂದ ಛಲ ಬಿಡದ ವಿಕ್ರಮನಂತೆ ಬದುಕುತ್ತಿರುವ ಕಾಫಿ ಬೆಳೆಗಾರರಿಗೆ ನನ್ನ ದೊಡ್ಡ ಸಲಾಂ. ತೋಟಗಳ ನಿರ್ವಹಣೆಯಲ್ಲಿ ಅತ್ಯಂತ ದುಬಾರಿ ನಿರ್ವಹಣೆ ಎಂದರೆ ಕಾಫೀ ತೋಟ. ಏಕೆಂದರೆ ತೋಟ ಕೆಲಸಗಳು ಅತೀ ಹೆಚ್ಚು ಹಾಗೂ ಕ್ರಮಬದ್ಧವಾಗಿ ಮಾಡಲೇ ಬೇಕಾಗಿರುವುದು ಇನ್ನೊಂದು ಕಷ್ಟ. ಪ್ರತಿ ಕೆಲಸಗಾರರಿಗೆ ಎಸ್ಟೇಟ್ ಗಳಲ್ಲಿ ಲಕ್ಷಗಟ್ಟಲೆ ಸಾಲ ಕೊಟ್ಟು ಇಟ್ಟುಕೊಂಡಿರುತ್ತಾರೆ. ಕೆಲವೊಮ್ಮೆ ಸಾಲವನ್ನು ತೀರಿಸದೇ ಓಡಿ ಹೋಗುವ ಉದಾಹರಣೆಗಳಿವೆ. ಇಲ್ಲಿ ಊರಿನ ತೋಟಗಳನ್ನು ಬಿಟ್ಟು ಸಂಬಳ ಜಾಸ್ತಿ ಇರೋ ಕಡೆಗಳಲ್ಲಿ ವಾಹನಗಳಲ್ಲಿ ಬೇರೆ ಊರುಗಳಿಗೆ ಹೋಗಿ ಕೆಲಸಕ್ಕೆ ಸೇರಿಕೊಳ್ಳುವುದು. ಹತ್ತು ಹಲವು ಸಮಸ್ಯೆಗಳಲ್ಲಿ ಸಿಲುಕಿರುವ ಬೆಳೆಗಾರರು ಶ್ರೀಮಂತರೇ. ಆದರೆ ನೋಡುವುದಕ್ಕೆ ಮಾತ್ರ ಏನಂತೀರಿ, ಇದನ್ನು ಬಿಡಿ. ಕಾಫಿ ನಾಡಿನ ಸಮಸ್ಯೆ ಇದ್ದದ್ದೇ..  ಕಷ್ಟದ ಜೊತೆಗೆ ಬದುಕುತ್ತಿರುವ ಜೀವನದ ಸ್ವಾರಸ್ಯ.

ಅಂತಾರಾಷ್ಟ್ರೀಯ ಕಾಫಿ ದಿನ

ಅಂತಾರಾಷ್ಟ್ರೀಯ ಕಾಫಿ ದಿನವು ಕಾಫಿಯನ್ನು ಒಂದು ಪಾನೀಯವಾಗಿ ಪ್ರಚಾರ ಮಾಡಲು ಮತ್ತು ಆಚರಿಸಲು ಬಳಸಲಾಗುವ ಒಂದು ಸಂದರ್ಭವಾಗಿದೆ. ಜಗತ್ತಿನಾದ್ಯಂತ ಹಲವು ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. “ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಷನ್” ಅಂಗೀಕರಿಸಿದ ಮೊದಲ ಅಧಿಕೃತ ದಿನಾಂಕ ಅಕ್ಟೋಬರ್ -1, 2015. ನ್ಯಾಯೋಚಿತ  ವ್ಯಾಪಾರ ಕಾಫಿಯನ್ನು  ಉತ್ತೇಜಿಸಲು ಮತ್ತು ಕಾಫಿ ಬೆಳೆಗಾರರ ಅವಸ್ಥೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಅನೇಕ ಕಂಪನಿಗಳು ಉಚಿತ ಅಥವಾ ರಿಯಾಯಿತಿಯಲ್ಲಿ ಕಾಫಿಯನ್ನು ನೀಡುತ್ತವೆ.


ಒಂದು ದೇಶ ಅಥವಾ ಇನ್ನೊಂದು ದೇಶದಲ್ಲಿ ರಜೆಯ ಕಾರಣಗಳು ವಿಭಿನ್ನವಾಗಿವೆ. ಅನೇಕ ದೇಶಗಳು  ಕಾಫಿ ಬೆಳೆಯುತ್ತವೆ. ಇತರರಿಗೆ ಈ ಪಾನೀಯವು  ತುಂಬಾ ಜನಪ್ರೀಯವಾಗಿದೆ ಆಚರಣೆಯ ದಿನದ ಮಟ್ಟಿಗೆ.  ಇದು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ.
ಒಂದು ದೇಶ ಅಥವಾ ಇನ್ನೊಂದು ದೇಶದಲ್ಲಿ ಆಚರಣೆಯ ಕಾರಣಗಳು ಸಹ ವಿಭಿನ್ನವಾಗಿವೆ ಅದರಲ್ಲಿ ನಮ್ಮ ದೇಶದಲ್ಲಿ ಕಾಫಿ ಬೆಳೆಯುವ 3 ಜಿಲ್ಲೆಗಳಿದ್ದರೆ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು. ಹಚ್ಚ ಹಸಿರಿನಿಂದ ಕೂಡಿದ ಬೆಟ್ಟ ಗುಡ್ಡಗಳನ್ನೇ ಮೈ ಹೊತ್ತು ನಿಂತಿರುವ ಸುಂದರವಾದ ಪ್ರಾಕೃತಿಕ ಜಿಲ್ಲೆಗಳು ಇವು ಮಲೆನಾಡಿನ ಕಾಫಿಯ ಕಪ್ಪು ದೇಶದ ಉದ್ದಗಲಕ್ಕೂ ಹರಡಿ ಈಗ ವಿದೇಶದಲ್ಲಿಯೂ ನಮ್ಮ ಕಾಫಿಯ ಕಂಪು ಪಸರಿಸಿದೆ ಕರುನಾಡ ಕಾಫಿಯ ರುಚಿ ಅತ್ಯದ್ಭುತ!!!!

ಕಾಫಿ ಆಂತರಿಕ ಬಳಕೆ:

ಕಾಫಿ ಕೃಷಿಕರಾಗಿ ಬೆಳೆಗಾರರ ನೋವಿನ ಅರಿವು ನಮಗಾಗುತ್ತದೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವುದು ಅತ್ಯಂತ ಅವಶ್ಯವಾಗಿದೆ ಕಾಫಿ ಕ್ಷೇತ್ರ ವಿಸ್ತರಣೆ ಕಾಫಿ ಸಂಸ್ಕರಣ ಕೇಂದ್ರಗಳಿಗೆ ಕೇಂದ್ರದ ಸಬ್ಸಿಡಿ ಸೌಲಭ್ಯ ಮುಂದುವರಿಸುವುದು ಇಂದಿನ ಅಗತ್ಯವಾಗಿದೆ ಗುಣಮಟ್ಟದ ಕಾಫಿ ಉತ್ಪಾದನಾ ವಿಷಯ ವಿದೇಶಗಳಲ್ಲಿ ಕೆಲವು ಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ತೋಟದ ನಿರ್ವಹಣೆಯೊಂದಿಗೆ ಅಧಿಕ ಕಾಫಿ ಉತ್ಪಾದನೆ ಮಾಡುವ ವೈಜ್ಞಾನಿಕ ವಿಧಾನಗಳನ್ನು ಭಾರತದ ಹವಾಗುಣಕ್ಕನುಗುಣವಾಗಿ ಅಳವಡಿಸಬಹುದಾದ ಸಾಧ್ಯ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳೋಣ. ತಿಳಿದುಕೊಳ್ಳುವುದು ಇಂದಿನ ಕಾಫಿ ಬೆಳೆಗಾರರಿಗೆ ಅತ್ಯವಶ್ಯಕವಾಗಿದೆ

ಯುವ ಜನಾಂಗಕ್ಕೆ ಕಾಫಿ ಉದ್ಯಮದಲ್ಲಿ ಮುಂದೆ ಉತ್ತಮ ಭವಿಷ್ಯವಿದೆ. ಕಾಫಿ ಪಬ್, ಕಾಫಿ ಕೆಫೆ ಇತ್ಯಾದಿಗಳ ಮೂಲಕ ದೇಶದ ಹಲವು ಭಾಗಗಳಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಿದೆ. ಸ್ಪೆಷಾಲಿಟಿ ಕಾಫಿ ಎಸ್ಟೇಟ್, ಬ್ರಾಂಡೆಡ್ ಕಾಫಿಗೆ ಇಂದಿಗೂ ಅಧಿಕ ದರ ಲಭ್ಯವಾಗುತ್ತಿದೆ. ಭಾರತದ ಸಣ್ಣ ಬೆಳೆಗಾರರಿಗೂ ಕಾಫಿ ಉದ್ಯಮವನ್ನು ಲಾಭದಾಯಕವಾಗಿ ಪರಿವರ್ತಿಸಿಕೊಳ್ಳಲು ಹೆಚ್ಚು ಪರಿಶ್ರಮ ವಹಿಸಬೇಕಾಗಿದೆ. ಕಾಫಿ ಬೆಳೆಗಾರರು ಕಾಫಿಯೊಂದಿಗೆ ಪರ್ಯಾಯ ಬೆಳೆಯುವ ಮೂಲಕ ಆರ್ಥಿಕ ನಷ್ಟದಿಂದ ಪಾರಾಗಲು ಕೇಂದ್ರಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಸದ್ಬಳಕೆ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಆಗಬೇಕಾಗಿದೆ. ಭಾರತದಲ್ಲಿ ಕಾಫಿಯ ಆಂತರಿಕ ಬಳಕೆ ಹೆಚ್ಚಾದಲ್ಲಿ… ಬೇಡಿಕೆ ಹೆಚ್ಚುವ ಮೂಲಕ ಉತ್ತಮ ದರ ಲಭ್ಯವಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ಕಾಫಿ ಬೆಳೆಗಾರರ ಪೂರಕ ಸಹಕಾರ ಅಗತ್ಯವಿದೆ.

ಅಕ್ಟೋಬರ್ 1ನೇ ತಾರೀಖು ಅಂತರಾಷ್ಟ್ರೀಯ ಕಾಫಿ ದಿನಾಚರಣೆ. ಈ ದಿನಾಚರಣೆ ಆ ಒಂದು ದಿನಕ್ಕೆ ಸೀಮಿತವಾಗದೇ ವರ್ಷದ ಪ್ರತಿಯೊಂದು ದಿನವು ಕಾಫಿದಿನವಾಗಬೇಕು. ಅಂದರೆ ಅನುದಿನವು ಕಾಫಿ ದಿನವಾಗಬೇಕು. ಕಾಫಿ ನಾಡಿನ ಸಮಸ್ತ ಬೆಳೆಗಾರರೇ… ಕಾಫಿ ನಮ್ಮ ಜೀವನ. ಅದರಲ್ಲಿಯೇ ನಮ್ಮ ಉಸಿರು ಬೆಸೆದು ಹೋಗಿದೆ. ಕಾಫಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಕೇವಲ ಮನೆಯಲ್ಲಿ ಬಂದವರಿಗೆ ಕಾಫಿ ಕುಡಿಸಿ ಕಳಿಸುವುದಷ್ಟೇ ಅಲ್ಲ, ಅದರ ಆಂತರಿಕೆ ಬಳಕೆ ಹೆಚ್ಚಿಸುವ ಹತ್ತು ಹಲವು ಪ್ರಯತ್ನಗಳು ನಿರಂತರವಾಗಿ ನಡೆಯಲೇಬೇಕು. ಹಾಗಾದಾಗ ಮಾತ್ರ ಮಾರುಕಟ್ಟೆಯಲ್ಲಿ ನಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವುದು ಸಾಧ್ಯವಾಗುತ್ತದೆ.
ಇನ್ನೊಂದು ಮನವಿ ಆದಷ್ಟು ನೆರಳಿನ ಆಶ್ರಯದಲ್ಲಿ ಬೆಳೆದ ಪರಿಸರ ಸ್ನೇಹಿ ಕಾಫಿಗೆ ಹೆಚ್ಚು ಒತ್ತು ಕೊಡಿ. ಹಿಂದೆಲ್ಲ ಮನೆಯಲ್ಲಿಯೇ ಕುಟ್ಟಿ ಪುಡಿ ಮಾಡಿದ ಕಾಫಿ ಪುಡಿಯನ್ನು ಉಪಯೋಗಿಸುತ್ತಿದ್ದೆವು. ಆ ಘಮದ ಆನಂದವೇ ಬೇರೆ ಬಿಡಿ. ಆದ್ದರಿಂದ ಮನೆಯಲ್ಲಿ ಪರಿಸರ ಸ್ನೇಹಿ ಕಾಫಿ ಕುಡಿಯಲು ಪ್ರಾರಂಭಿಸಿ. ಆರೋಗ್ಯಕರವಾದ ಕಾಫಿಯನ್ನು ತಯಾರಿಸಿ. ಏನಂತೀರಾ ಸ್ನೇಹಿತರರೇ…ಎಲ್ಲರಿಗೂ ಅಂತರಾಷ್ಟ್ರೀಯ ಕಾಫಿ ದಿನದ ಶುಭಾಶಯಗಳು.

ಕೀರ್ತಿ ಕಿರಣ್ ಕುಮಾರ್
ಜಂಬರಡಿ
ಮೊ: 831 08 04715

Related posts

ಪ್ರಕಾಶ್ ನಿಧನ

Bimba Prakashana

ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ

Bimba Prakashana

ಮಗ್ಗೆ ಬಳಿ ಕೆರೆಗೆ ಬಿದ್ದ ಕಾರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More