Blog

ಕಾರ್ಕಳದ ಕ್ರೈಸ್ಟ್ ಕಿಂಗ್ ಗೆ ಪಿ ಯು ಸಿಯಲ್ಲಿ ನಾಲ್ಕು ರ್‍ಯಾಂಕ್

🌹ಕ್ರೈಸ್ಟ್‌ಕಿಂಗ್: ದ್ವಿತೀಯ ಪಿಯುಸಿಯಲ್ಲಿ ಅಭೂತಪೂರ್ವ ಸಾಧನೆ
ವಾಣಿಜ್ಯ ವಿಭಾಗದಲ್ಲಿ ಶೇಕಡಾ 100 ಹಾಗೂ ವಿಜ್ಞಾನ ವಿಭಾಗದಲ್ಲಿ 99.44 ಶೇಕಡಾ ಫಲಿತಾಂಶ
ವಾಣಿಜ್ಯ ವಿಭಾಗದಲ್ಲಿ ಸುಧೀಕ್ಷಾ ಶೆಟ್ಟಿ 595 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ರ್‍ಯಾಂಕ್


🌹ಎರಡೂ ವಿಭಾಗಗಳಲ್ಲಿ ರಾಜ್ಯಮಟ್ಟದಲ್ಲಿ ಒಟ್ಟು ನಾಲ್ಕು ರ್‍ಯಾಂಕ್


🌹ವಿಜ್ಞಾನ ವಿಭಾಗದಲ್ಲಿ ಅನಂತ್ ಎನ್ ಕೆ ಏಳನೇ ರ್‍ಯಾಂಕ್ ಹಾಗೂ ವಾಣಿಜ್ಯ ವಿಭಾಗದಲ್ಲಿ ಸುಧೀಕ್ಷಾ ಶೆಟ್ಟಿ ಐದನೇ ರ್‍ಯಾಂಕ್, ಚರಣ್‌ರಾಜ್ ಎಂಟನೇ ರ್‍ಯಾಂಕ್, ನಾರಾಯಣಿ ಕಿಣಿ ಹತ್ತನೇ ರ್‍ಯಾಂಕ್,


🌹ಉತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಗಿಂತ ಮೇಲೆಯೇ ಉತ್ತೀರ್ಣಗೊಳ್ಳುವುದರ ಮೂಲಕ ವಿಶಿಷ್ಟ ಸಾಧನೆ


ಕಾರ್ಕಳ: ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜು ಮತ್ತೊಮ್ಮೆ ಉತ್ತಮ ಫಲಿತಾಂಶದೊಂದಿಗೆ ಅಭೂತಪೂರ್ವ ಸಾಧನೆಯನ್ನು ಮಾಡಿದೆ. ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ಹಾಗೂ ವಿಜ್ಞಾನ ವಿಭಾಗದಲ್ಲಿ 99.44% ಫಲಿತಾಂಶ ಪಡೆದಿದೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 95 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸತತ 17ನೇ ಬಾರಿಗೆ 100 ಶೇಕಡಾ ಫಲಿತಾಂಶ ಪಡೆದುಕೊಂಡಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 179 ವಿದ್ಯಾಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 178 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ 99.44% ಫಲಿತಾಂಶ ಪಡೆದುಕೊಂಡಿದೆ.

ವಾಣಿಜ್ಯ ವಿಭಾಗದಲ್ಲಿ ಸುಧೀಕ್ಷಾ ಎಸ್ ಶೆಟ್ಟಿ 595 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯಕ್ಕೆ ಐದನೇ ರ್‍ಯಾಂಕ್ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಜೊತೆಗೆ ಚರಣ್ ರಾಜ್ 592 ಅಂಕ ಪಡೆದುಕೊಂಡು ಎಂಟನೇ ರ್‍ಯಾಂಕ್, ನಾರಾಯಣಿ ಕಿಣಿ 590 ಅಂಕಗಳನ್ನು ಪಡೆದುಕೊಂಡು ಹತ್ತನೇ ರ್‍ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಅನಂತ್ ಎನ್.ಕೆ 593 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯಮಟ್ಟದಲ್ಲಿ ಏಳನೇ ರ್‍ಯಾಂಕ್ ಪಡೆದುಕೊಂಡಿದ್ದಾನೆ. ಜೊತೆಗೆ ಸಂಹಿತ್ ಎಸ್ ಆಚಾರ್ಯ, ಶ್ರೀಯಾ ಹಾಗೂ ರಶ್ಮೀ ೫೮೯ ಅಂಕಗಳನ್ನು ಪಡೆದುಕೊಂಡು ಜಿಲ್ಲೆಗೆ ಎಂಟನೇ ರ್‍ಯಾಂಕ್ ಹಾಗೂ ಸಂಸ್ಥೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ೭೩ ವಿದ್ಯಾರ್ಥಿಗಳು ೮೫% ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದಂತೆ ೨೨ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ ೨೪ ವಿದ್ಯಾರ್ಥಿಗಳು ೯೫%ಕ್ಕಿಂತ ಹೆಚ್ಚಿನ ಅಂಕಗಳು ಹಾಗೂ ೨೮ ವಿದ್ಯಾರ್ಥಿಗಳು ೯೦ ರಿಂದ ೯೫% ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ೧೦೪ ವಿದ್ಯಾರ್ಥಿಗಳು ೮೫%ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದಂತೆ ೭೪ ವಿದ್ಯಾಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ ೧೭ ವಿದ್ಯಾರ್ಥಿಗಳು ೯೫%ಕ್ಕಿಂತ ಹೆಚ್ಚಿನ ಅಂಕಗಳು ಹಾಗೂ ೫೦ ವಿದ್ಯಾರ್ಥಿಗಳು ೯೦ ರಿಂದ ೯೫% ಅಂಕಗಳನ್ನು ಪಡೆದುಕೊಂಡಿದ್ದಾರೆ. ಯಾವುದೇ ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಡೆದುಕೊಂಡಿಲ್ಲ. ವಾಣಿಜ್ಯ ವಿಭಾಗದಲ್ಲಿ ರಾನಿಯಾ ರೋಷನ್ (೫೮೬), ತನುಶ್ರೀ ಎಲ್ ಪಿ (೫೮೬), ಡೇರಿಲ್ ವಿನೋಲ್ ಮೋರಸ್(೫೮೫), ಪವನ್ ಎಸ್ ಪೂಜಾರಿ(೫೮೫), ಶ್ರೇಯಸ್ ಬಿ ಆಚಾರ್ಯ(೫೮೪), ಮೊಹಮ್ಮದ್ ಬಶೀರ್ (೫೮೩), ಜೋಶ್ವಾ ಹೆರಾಲ್ಡ್ ಫೆರ್ನಾಂಡಿಸ್ (೫೮೨), ಶದಾ ಇರ್ಷಾದ್ (೫೮೨),  ಅನ್ಸಿಫಾ ಬಾನು(೫೮೦), ಶ್ರಾವ್ಯ(೫೭೯), ಪ್ರೀತಿ ಶೆಟ್ಟಿ (೫೭೭), ಎರ್ವಿನ್ ಡಿ’ಮೆಲ್ಲೊ(೫೭೭), ಜೆಸ್ಸಿಕಾ ಲಿಯೋರಾ ಮಿನೇಜಸ್ (೫೭೬), ಫಾತಿಮಾ ಝುಹಾ (೫೭೫), ಸುವಿಧಾ (೫೭೪), ಮನಿಟಾ ಮೈಕಲ್ (೫೭೪),  ಹನಿ ವೆನ್ಯಾ(೫೭೩),  ನತಾಶ ಪಿಂಟೊ(೫೭೩), ಶ್ರವಣ್ (೫೭೩), ವೆನ್ಸನ್ ಜಾಯ್ವಿನ್ ಮೆನೆಜಸ್ (೫೭೩), ಫೈಝಾ ಆಯಿಷಾ (೫೭೨), ಅನ್ಶ್ ಕುಮಾರ್ (೫೭೧) ಶೇಕಡಾ ೯೫ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅಲ್ವೀನಿಯಾ ಡೆಸ (೫೮೩), ಅಮೂಲ್ಯ (೫೮೧), ಲಿಯಾನಾ ನೇತಲ್(೫೮೦), ಹನ್ಸಿಯಾ ಅಲ್ಮೇಡ (೫೭೯), ಅನಘ ವಿ  (೫೭೮), ನವೀದ್ ಝಾಹಿದ್ ಹುಸೇನ್ (೫೭೮), ಸ್ನೇಹಲ್ ಪಿಂಟೊ (೫೭೭), ಸಂಜನಾ ಎಸ್ ಪಾಟ್ಕರ್ (೫೭೪), ಶಾನ್ವಿ ಬಲ್ಲಾಳ್ (೫೭೩), ಸೃಜನ್ ಶೆಟ್ಟಿ(೫೭೩), ದಿವ್ಯಾ ಡಿಸೋಜ (೫೭೧), ವಿಲ್ಶಾ ಡಿಸೋಜ (೫೭೦), ನಿಹಾಲ್ ವೈ ಆಚಾರ್ಯ(೫೭೦) ಶೇಕಡಾ ೯೫ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಾಗಿದ್ದಾರೆ.

Related posts

ವೃದ್ಧನನ್ನು ಕೊಂದ ಆನೆ

Bimba Prakashana

ತ್ರೈ ಮಾಸಿಕ ಪ್ರಗತಿ ಪರಿಶೀಲನೆ ಸಭೆ

Bimba Prakashana

ಮೇ 11,12ರಂದು ತೆಂಕಲ ಗೂಡು ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More