ವರದಿ ರಾಣಿ ಪ್ರಸನ್ನ
ಸಕಲೇಶಪುರ ಕರ್ನಾಟಕ ರಕ್ಷಣಾ ವೇದಿಕೆ ಘಟಕದಿಂದ ಇಂದು ಅಂದರೆ ದಿನಾಂಕ 18 ಜೂನ್ 2025 ರಂದು ಹೆತ್ತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ.:- ತಾಲ್ಲೂಕು ಕ.ರ.ವೇ ಅಧ್ಯಕ್ಷರಾದ ಗಗನ್ ಹಡ್ಲಹಳ್ಳಿ
ಸಕಲೇಶಪುರ :- ತಾಲ್ಲೂಕಿನ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು ಒಂದು ತಿಂಗಳಿಂದ ಅಂಬುಲೆನ್ಸ್ 108 ವಾಹನವನ್ನು ನಾನ ಕಾರಣದಿಂದ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಇದರಿಂದ ಈ ಭಾಗದ ಸಾರ್ವಜನಿಕರಿಗೆ ತೊಂದರೆಯಾಗಿದೆ.ಅದ್ದರಿಂದ ಈ ವಿಚಾರವಾಗಿ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ 18-06-2025 ರ ಬುಧವಾರ ಬೆಳ್ಳಗೆ 10.30 ರಿಂದ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ತಾಲ್ಲೂಕು ಕ.ರ.ವೇ ಅಧ್ಯಕ್ಷರಾದ ಗಗನ್ ಹಡ್ಲಹಳ್ಳಿ ತಿಳಿಸಿದ್ದಾರೆ.
ಹೆತ್ತೂರು ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಿಗೆ ಇದೊಂದೇ ಸರ್ಕಾರಿ ಆಸ್ಪತ್ರೆ. ಬಹುತೇಕ ಕೂಲಿ ಕಾರ್ಮಿಕರನ್ನು ಒಳಗೊಂಡಿರುವ ಈ ಹೋಬಳಿಯ ಜನರು ತಮ್ಮ ರೋಗಗಳಿಗೆ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ.ಹೆತ್ತೂರು ಹೋಬಳಿಯು ಸುಮಾರು 35ಕ್ಕೂ ಹೆಚ್ಚು ಹಳ್ಳಿಗಳನ್ನೂ ಒಳಗೊಂಡಿದ್ದು, ಇದರಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಈ ಭಾಗದ ಜನರು ತಮ್ಮ ಗದ್ದೆ ತೋಟದ ಕೆಲಸ ಕಾರ್ಯಗಳನ್ನು ಮಾಡುವಾಗ ಆಗುವ ಚಿಕ್ಕಪುಟ್ಟ ಅನಾಹುತಗಳಿಗೆ ಈ ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆಯನ್ನೇ ಅಲ್ಲದೆ ಉನ್ನತ ಚಿಕಿತ್ಸೆ ಬೇಕಾದರೆ 25 ಕಿ.ಮಿ ಹೆಚ್ಚು ದೂರ ಇರುವ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಅದು ಕೂಡ ಇರುವ ಸರ್ಕಾರಿ ಆಂಬುಲೆನ್ಸ್ ವ್ಯವಸ್ಥೆಯಿಂದಲೇ.ಅಲ್ಲದೆ ಗರ್ಭಿಣಿಯರು, ತುರ್ತು ಚಿಕಿತ್ಸೆಗೆ ಈ ಆಸ್ಪತ್ರೆಯಿಂದ ಬೇರೆ ಉನ್ನತ ಆಧುನಿಕ ವ್ಯವಸ್ಥೆ ಇರುವ ಆಸ್ಪತ್ರೆಗೆ ಹೋಗಲು ಬಹುತೇಕ ಎಲ್ಲರೂ ಸರ್ಕಾರಿ ಆಂಬುಲೆನ್ಸ್ ವ್ಯವಸ್ಥೆಯಲ್ಲಿ ಅವಲಂಬಿಸಿದ್ದಾರೆ. ಇಂತಹ ಪರಿಸ್ಥಿತಿ ಇದ್ದರೂ ಕೂಡ ಬೇರೆ ಬೇರೆ ಕಾರಣವನ್ನು ಒಡ್ಡಿ ಬೇರೆ ಕಡೆಗೆ ಆಂಬುಲೆನ್ಸ್ ಅನ್ನು ಸ್ಥಳಾಂತರಿಸಲಾಗಿದೆ. ಇದರಿಂದ ಈ ಭಾಗದ ಸಾರ್ವಜನಿಕರಿಗೆ ತೊಂದರೆಯಾಗಿದೆ.ಅದ್ದರಿಂದ ಈ ವಿಚಾರವಾಗಿ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ನಾಳೆ ಬೆಳಗ್ಗೆ ಪ್ರತಿಭಟನೆ ಮಾಡಲಾಗುವುದು ಅದಕ್ಕೆ ಕೆಲಸ ಸಾರ್ವಜನಿಕರು ಭಾಗವಹಿಸುವ ಮೂಲಕ ಬೆಂಬಲ ನೀಡಬೇಕಾಗಿ ವಿನಂತಿ ಎಂದು ತಾಲ್ಲೂಕು ಕ.ರ.ವೇ ಅಧ್ಯಕ್ಷರಾದ ಗಗನ್ ಹಡ್ಲಹಳ್ಳಿ ಮನವಿ ಮಾಡಿದ್ದಾರೆ.
previous post
next post