ಆಲೂರು. ಉದ್ಯೋಗ ಅರಸಿ ಇಸ್ರೇಲ್‌ನಲ್ಲಿ ವಾಸವಾಗಿರುವ ತಾಲ್ಲೂಕಿನ 30ಕ್ಕೂ ಹೆಚ್ಚು ಜನರು ರಕ್ಷಣೆಗೆ ಅಂಗಲಾಚಿದ್ದಾರೆ.
ತಾಲ್ಲೂಕಿನ ಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದಕೊಪ್ಪಲು, ನವಿಲಹಳ್ಳಿ ಮತ್ತು ಬಡಗಿಪುರ ಗ್ರಾಮದ ಪುರುಷರು, ಮಹಿಳೆಯರು ಸೇರಿದಂತೆ 30 ಜನರು ಇಸ್ರೇಲ್‌ನಲ್ಲಿ ಹೋಂ ಟೇಕರ್ ಕೆಲಸಕ್ಕೆ ಹೋಗಿದ್ದಾರೆ.
ಸದ್ಯ ಇರಾನ್ ಮತ್ತು ಇಸ್ರೇಲ್ ಮಧ್ಯೆಯುದ್ದ ನಡೆಯುತ್ತಿರುವುದರಿಂದ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದರೂ, ಆಗಾಗ ಫೋನ್ ಮೂಲಕ ಮಾತನಾಡುತ್ತಿರುವುದರಿಂದ ಧೈರ್ಯವಾಗಿದ್ದಾರೆ. ವರ್ಷಗಳಿಂದ ಇಲ್ಲಿನ ನಿವಾಸಿಗಳು ಇಸ್ರೇಲ್ ಆಡ್‌ಮದ್ ಮತ್ತು ಇತರೆ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಬಾರಿ ಯುದ್ಧ ನಡೆದ ಸಂದರ್ಭದಲ್ಲಿ 21 ಜನರು ಇಸ್ರೇಲ್ ನಲ್ಲಿದ್ದರು. ಮೂರು ವರ್ಷಗಳಿಂದೀಚೆಗೆ ಜನರು ಹೋಗಿದ್ದಾರೆ. ನನ್ನ ಪತ್ನಿ ಅನ್ಸಿಲಾ ಇಸ್ರೇಲ್‌ನ ಆಶ್‌ಮಡ್ ಪ್ರದೇಶದ ಮನೆಯೊಂದರಲ್ಲಿ ಹೋಂ ಟೇಕರ್ ಕೆಲಸ ಮಾಡುತ್ತಿದ್ದಾರೆ. ಮೊದಲು ಎಲ್ಲ ಸಂದರ್ಭದಲ್ಲೂ ಸಂಪರ್ಕದಲ್ಲಿ ಇರುತ್ತಿದ್ದರು.
ಯುದ್ಧದ ಪರಿಸ್ಥಿತಿ ನಿರ್ಮಾಣವಾದ ನಂತರ, ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ 11ಕ್ಕೆ ಮಾತ್ರ ಮಾತನಾಡುತ್ತಾರೆ ಎಂದು ನವಿಲಹಳ್ಳಿಯ ಸ್ಪ್ಯಾಸ್ಥಿತಿಳಿಸಿದರು.
ಯುದ್ಧಕ್ಕೆ ಸಂಬಂಧಿಸಿದಂತೆ ಸೈರನ್ ಶಬ್ದ ಕೇಳಿಸುತ್ತದೆ. ಮೊಬೈಲ್‌ಗೆ ಮೆಸೇಜ್ ಬರುತ್ತದೆ. ಆಗ ರಕ್ಷಣೆಗಾಗಿ ತಕ್ಷಣ ಬಂರ್ಕಗೆ ಹೋಗಿ ಸೇರಿಕೊಳ್ಳುತ್ತಾರೆ. ಹೊರಗಡೆ ಯಾರೂ ತಿರುಗಾಡದಂತೆ ನಿಷೇಧ ಹೇರಿದ್ದಾರೆ. ಸದ್ಯಕ್ಕೆ ಯಾವುದೇ ಆತಂಕಪಡುವಂತಿಲ್ಲ ಎಂದು ಪತ್ನಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಪ್ರತಿದಿನ ಭಯ ಹೆಚ್ಚುತ್ತಿದೆ ಹೆಚ್ಚು
ಇಸ್ರೇಲ್‌ನಲ್ಲಿ ವಾಸವಿರುವ ಸುಜಾತ ಅವರ ಪತಿ ಸಬಾಸ್ಟಿನ್ ಮಾತನಾಡಿ, ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಎಂತವರಿಗಾದರೂ ಭಯವಾಗುತ್ತದೆ. ಇಸ್ರೇಲ್‌ನಿಂದ ವಿಮಾನ ಯಾನವೂ ಬಂದ್ ಆಗಿದೆ. ಹೀಗಾಗಿ ಸುರಕ್ಷತೆ ಬಗ್ಗೆ ಆತಂಕ ಕಾಡುತ್ತಿದೆ ಎಂದರು.
ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ಯಾವ ಹಂತಕ್ಕೆ ತಲುಪಲಿದೆ ಎನ್ನುವುದು ಅಂದಾಜು ಸಿಗುತ್ತಿಲ್ಲ, ಭಾರತ ಮೂಲದ ಪ್ರಜೆಗಳಿಗೆ ಒಂದು ಕಡೆ ಹೊಟ್ಟೆಹಾಡಿನ ಪ್ರಶ್ನೆಯಾದರೆ ಇತ್ತ ಇಸ್ರೇಲ್ ನಲ್ಲಿರುವ ಭಾರತದ ಸಂಬಂಧಿಕರ ಆತಕಂವು ಹೆಚ್ಚಾಗಿದೆ.
ಕನ್ನಡಿಗರ ಸಂಪರ್ಕದಲ್ಲಿ ಶಾಸಕ ಸಿಮೆಂಟ್ ಮಂಜುನಾಥ್. ಶಾಸಕ ಸಿಮೆಂಟ್ ಮಂಜು ಮಾತನಾಡಿ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರ ಜೊತೆ ನಾನು ಮಾತನಾಡಿ ಅವರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಮನವಿ ಮಾಡಿದ್ದೇನೆ ಕೇಂದ್ರದಲ್ಲಿ ಸಿಗುವ ಸುರಕ್ಷತೆಯನ್ನು ಹಾಗೂ ಸೌಲಭ್ಯಗಳನ್ನು ನಮ್ಮ ಕ್ಷೇತ್ರದ 30 ಸಾರ್ವಜನಿಕರಿಗೆ ನೀಡಬೇಕೆಂದು ಒತ್ತಾಯ ಮಾಡಿದ್ದೇನೆ ಅವರ ಕುಟುಂಬದವರು ಆತಂಕ ಪಡುವ ಅಗತ್ಯ ಇಲ್ಲ ಕೇಂದ್ರ ಸಚಿವರು ಹಾಗೂ ನಮ್ಮ ಕೇಂದ್ರ ಸರ್ಕಾರ ಅವರಿಗೆ ಸುರಕ್ಷತೆ ಹಾಗೂ ಭದ್ರತೆ ನೀಡುತ್ತಿದೆ ಕುಟುಂಬಸ್ಥರು ಧೈರ್ಯವಾಗಿ ಇರಬೇಕೆಂದು ಹೇಳಿದರು.
ಕನ್ನಡಿಗರ ಸಂಪರ್ಕದಲ್ಲಿ ಹೆಚ್‌ಡಿಕೆ
ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅಸ್ರೇಲ್ ಮತ್ತು ಅರಾನ್ ನಡುವಿನ ಸಂಘರ್ಷದಿಂದಾಗಿ ಪ್ರಸ್ತುತ ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರೊಂದಿಗೆ ವೀಡಿಯೋ ಕರೆ ಮಾಡಿ ಅವರ ಕ್ಷೇಮ, ಸುರಕ್ಷತೆ ಬಗ್ಗೆ ಮಾಹಿತಿ ಪಡೆದುಕೊಂಡರು.
ನವದೆಹಲಿಯ ತಮ್ಮ ಅಧಿಕೃತ ನಿವಾಸದಿಂದ ಇಸ್ರೇಲ್ ನಲ್ಲಿ ಸಿಲುಕಿರುವ ಕನ್ನಡಿಗರ ಜತೆ ಮಾತನಾಡಿದರು. ನಮ್ಮ ಜನರು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ತಾಮ್ನಾಡಿಗೆ ದುರಳುವುದನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ಸಚಿವಾಲಯದೊಂದಿಗೆ ಈ ವಿಷಯವನ್ನು ತಕ್ಷಣವೇ ಚರ್ಚಿಸುವುದಾಗಿ
ವಿಡಿಯೋ ಕರೆಯ ಮೂಲಕ ಮಾತನಾಡಿದ ಎಲ್ಲಾ ಕನ್ನಡಿಗರು, ತಾವು ಸುರಕ್ಷಿತರಾಗಿದ್ದೇವೆ ಮತ್ತು ಟೆಲ್ ಅವೀವ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದ್ದಾರೆ ಎಂದು ಸಚಿವರಿಗೆ ತಿಳಿಸಿದರು. ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರಲ್ಲದೆ, ಅದಕ್ಕಾಗಿ ರಾಯಭಾರ ಕಚೇರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ತನ್ನ ಎಲ್ಲವನ್ನೂ ಮಾಡುತ್ತಿದೆ ಎಂದು ಸಚಿವರು ಹೇಳಿದರು.
previous post
next post